ಬೆಂಗಳೂರು: ಮೈತ್ರಿ ಸರ್ಕಾರದ ಭವಿಷ್ಯ ಇಂದು ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯ ಮೇಲೆ ನಿರ್ಧಾರವಾಗಿದ್ದು, ಎಲ್ಲರ ಚಿತ್ತ ವಿಧಾನಸೌಧದತ್ತ ನೆಟ್ಟಿದೆ. ಇದೇ ಸಂದರ್ಭದಲ್ಲಿ ಮತದಾನದ ಮೂಲಕವೇ ವಿಶ್ವಾಸ ಮತಯಾಚನೆ ನಡೆಯಲಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಎಷ್ಟು ಮಂದಿ ಶಾಸಕರಿರುತ್ತಾರೆಯೋ ಅವರ ಮತಗಳ ಆಧಾರದ ಮೇಲೆಯೇ ಬಹುಮತ ನಿರ್ಣಯ ಮಾಡಲಾಗುವುದು. ಉಳಿದ ಶಾಸಕರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.


ವಿಶ್ವಾಸಮತಯಾಚನೆ ಬಗ್ಗೆ ಸ್ಪೀಕರ್ ಹೇಳಿದ ಮುಖ್ಯ ಅಂಶಗಳು
* ಬೆಳಿಗ್ಗೆ 11 ಗಂಟೆಗೆ ಸದನ ಆರಂಭವಾಗಲಿದ್ದು, ಎಲ್ಲಾ ಶಾಸಕರಿಗೂ ನೋಟಿಸ್ ಜಾರಿ ಮಾಡಲಾಗಿದೆ. 
* ಸದನದ ಬಾಗಿಲು ಹಾಕಿದ ಬಳಿಕ ಉಪಸ್ಥಿತರಿರುವ ಶಾಸಕರಲ್ಲಿ ಬಹುಮತ ಸಾಬೀತು ಮಾಡುವವರಿಗೆ ಬಹುಮತ.
* ಡಿವಿಷನ್ ಬೆಲ್ ರಿಂಗ್ ಆದ ಬಳಿಕ ಸದನದಲ್ಲಿ ಇರುವ ಸಂಖ್ಯೆಯಲ್ಲಿ ಬಹುಮತ ಗಣನೆಗೆ ತೆಗೆದುಕೊಳ್ಳಲಾಗುವುದು.
* ಶಾಸಕರನ್ನು ಕರೆತರುವುದು ಪಕ್ಷಗಳಿಗೆ ಬಿಟ್ಟ ವಿಚಾರ. 
* ಸಂವಿಧಾನಾತ್ಮಕವಾಗಿ ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತೇನೆ.