ಬೆಂಗಳೂರು: ರಾಜ್ಯದಲ್ಲಿ ಇಂದು ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಶುರುವಾಗಿದೆ. ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಯಾವುದೇ ರಾಜಲೀಯ ಪಕ್ಷಗಳಿಂದ ಆಯಾ ಪಕ್ಷಗಳ ಚಿಹ್ನೆಗಳ ಮೂಲಕ ಅಭ್ಯರ್ಥಿಗಳು ಕಣಕ್ಕಿಳಿದಿರುವುದಿಲ್ಲವಾದರೂ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿರುವ ಕಾರಣಕ್ಕೆ ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್(JDS)ಗೆ ಈ ಚುನಾವಣೆ ನಿರ್ಣಾಯಕವಾಗಿದೆ.


COMMERCIAL BREAK
SCROLL TO CONTINUE READING

ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಬೇಕೆಂಬ ಮಹದಾಶಯಗಳೊಂದಿಗೆ ಗ್ರಾಮ ಪಂಚಾಯತಿಗಳ ರಚನೆಯಾಗಿದೆ. ಹಾಗೆ ರಾಷ್ಟ್ರ ಮಟ್ಟದಲ್ಲಿ ಪಂಚಾಯತಿ ವ್ಯವಸ್ಥೆಗೆ ಕಾಯಕಲ್ಪ ನೀಡಿದವರು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ (Rajeev Gandhi). ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ನಜೀರ್ ಸಾಬ್.


ಅಧಿಕಾರದ ದೃಷ್ಟಿಯಿಂದ ಗ್ರಾಮಗಳಲ್ಲೇ ಆಡಳಿತ ವ್ಯವಸ್ಥೆ ನೆಲಸುವುದಕ್ಕಾಗಿ ಗ್ರಾಮ ಪಂಚಾಯತಿಗಳನ್ನು ಮಾಡಲಾಗಿದೆ. ಇನ್ನೊಂದೆಡೆ ರಾಜಕೀಯ ಪಕ್ಷಗಳಿಗೆ ಕೆಳ ಹಂತದಿಂದ ಪಕ್ಷ ಕಟ್ಟುವುದಕ್ಕೂ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ಪ್ರಮುಖ ಮಾರ್ಗಗಳಾಗಿವೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ (Gram Panchayat Election) ಅಧಿಕೃತವಾಗಿ ಅಲ್ಲದಿದ್ದರೂ ಬೆಂಬಲಿತ ಅಭ್ಯರ್ಥಿಗಳನ್ನು ಹೂಡಿ ಪ್ರಾಬಲ್ಯ ಸಾಧಿಸಲು ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತವೆ. ಹಾಗಾಗಿ ಇಂದು ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ರಾಜ್ಯದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ (Congress), ಬಿಜೆಪಿ (BJP) ಮತ್ತು ಜೆಡಿಎಸ್ (JDS)ಗೆ ಮುಖ್ಯವಾಗಿವೆ.


ಇದನ್ನೂ ಓದಿ: ಗ್ರಾಮ ಪಂಚಾಯತಿ ಚುನಾವಣೆ: ಸದಾಚಾರ ನೀತಿ ಸಂಹಿತೆಯಲ್ಲಿ ಯಾವುದಕ್ಕೆಲ್ಲಾ ನಿರ್ಬಂಧ..!


ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಗ್ರಾಮೀಣ ಭಾಗದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಬೇಕೆಂದು ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಈವರೆಗೆ ರಾಜ್ಯದ ಗ್ರಾಮೀಣ ಭಾಗದಲ್ಲಿ ಸದೃಢವಾಗಿರುವ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಪ್ರಮುಖ ಪ್ರತಿ ಪಕ್ಷ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಜೆಡಿಎಸ್‌ ಕೂಡ ಅದೇ ಹಾದಿಯಲ್ಲಿದೆ.


ರಾಜ್ಯದಲ್ಲಿ ಒಟ್ಟು 5,761 ಗ್ರಾಮ ಪಂಚಾಯಿತಿಗಳಿದ್ದು ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಇಂದು ಮೊದಲ ಹಂತದ ಮತದಾನ ನಡೆಯಲಿದ್ದು ಎರಡನೇ ಹಂತದ ಮತದಾನ ಇದೇ 27ರಂದು ನಡೆಯಲಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ.


COVID-19 ಇರುವುದರಿಂದ ಸುರಕ್ಷಿತ ಮತದಾನಕ್ಕೆ ಆದ್ಯತೆ ನೀಡಲಾಗಿದೆ. ಅದಕ್ಕೆಂದೇ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಕೈಗಳಿಗೆ ಸ್ಯಾನಿಟೈಸರ್‌ ಹಾಕಿಕೊಂಡ ಬಳಿಕವೇ ಮತಗಟ್ಟೆಯನ್ನು ಪ್ರವೇಶಿಸಬೇಕು ಎಂಬ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ಸೋಂಕಿತರಿಗೆ ಮತದಾನದ ಕೊನೆಯ ಒಂದು ಗಂಟೆ ಅವಕಾಶ ನೀಡಲಾಗಿದೆ.


ಇದನ್ನೂ ಓದಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚುವುದು ಹೇಗೆ ಗೊತ್ತೇ?


4,377 ಮಂದಿ ಅವಿರೋಧ ಆಯ್ಕೆ :
ಈ ಬಾರಿ ಕೆಲವು ಕಡೆ ಗ್ರಾಮ ಪಂಚಾಯತಿ (Gram Panchayat) ಸದಸ್ಯರನ್ನು ಬಹಿರಂಗವಾಗಿ ಹರಾಜು ಹಾಕಿ ಆಯ್ಕೆ ಮಾಡಿದ ಪ್ರಕರಣವೂ ಬೆಳಕಿಗೆ ಬಂದಿತ್ತು. ಚುನಾವಣಾ ಆಯೋಗ ಈ ಬಗ್ಗೆ ಇನ್ನೂ ನಿರ್ಧಿಷ್ಟ ಕ್ರಮ ಕೈಗೊಂಡಿಲ್ಲ. ಈ ನಡುವೆ ಮೊದಲ ಹಂತದಲ್ಲಿ  ಚುನಾವಣೆ ನಡೆಯುತ್ತಿರುವ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯತ್‌ಗಳ 48,048 ಸ್ಥಾನಗಳ ಪೈಕಿ 43,238 ಸದ್ಯಸರ ಆಯ್ಕೆಗೆ ಮಾತ್ರ ಮತದಾನ ನಡೆಯಲಿದೆ. ಈಗಾಗಲೇ 4,810 ಮಂದಿ ಅವಿರೋಧ ಆಯ್ಕೆ ಆಗಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಮಾತ್ರ ಮತದಾನಕ್ಕೆ ಇವಿಎಂಗಳನ್ನು ಬಳಸಲಾಗುತ್ತದ್ದು, ಉಳಿದ ಕಡೆ ಮತಪತ್ರ ಮೂಲಕವೇ ಮತದಾನ ನಡೆಯುತ್ತಿದೆ.


* ಮತದಾನದ ಸಮಯ: ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ
* ಒಟ್ಟು ಗ್ರಾಮ ಪಂಚಾಯಿತಿ: 5,761
* ಮೊದಲ ಹಂತ ಮತದಾನ: 3,019
* ಒಟ್ಟು ಮತಗಟ್ಟೆ: 23,625
* ಮತದಾರರು: 1,53,84,509
* ಮತಗಟ್ಟೆ ಸಿಬ್ಬಂದಿ: 1,41,750
* ಸ್ವೀಕೃತ ನಾಮಪತ್ರ: 1,64,550
* ನಾಮಪತ್ರ ಸಲ್ಲಿಸದೇ ಖಾಲಿ ಉಳಿದ ಸ್ಥಾನಗಳು: 432
* ಕಣದಲ್ಲಿರುವ ಅಭ್ಯರ್ಥಿಗಳು: 1,17,383


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.