ಬೆಂಗಳೂರು : ಕರ್ನಾಟಕ ವಿಧಾನಪರಿಷತ್ ನ (council) 4 ಕ್ಷೇತ್ರಗಳಿಗೆ ಮತದಾನ (polling )ನಡೆಯುತ್ತಿದೆ. ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ರವರೆಗೆ ಮತದಾನ ನಡೆಯಲಿದೆ.


COMMERCIAL BREAK
SCROLL TO CONTINUE READING

ಒಟ್ಟು 40 ಅಭ್ಯರ್ಥಿಗಳು (candidates) ಕಣದಲ್ಲಿದ್ದು,  ನವೆಂಬರ್ 2 ರಂದು ಮತ ಎಣಿಕೆ (counting )ನಡೆಯಲಿದೆ. 
4 ಕ್ಷೇತ್ರಗಳಿಗೆ  549 ಮತಗಟ್ಟೆಗಳಲ್ಲಿ (voting booth) ಮತದಾನ ನಡೆಯುತ್ತಿದೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 146 ಮತಕೇಂದ್ರ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 187 ಮತ ಕೇಂದ್ರಗಳು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 68 ಮತಕೇಂದ್ರಗಳು , ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 147 ಮತಕೇಂದ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.


ವಿಧಾನ ಪರಿಷತ್ ಚುನಾವಣೆ: ನಿಮ್ಮಲ್ಲಿ ಗುರುತಿನ ಚೀಟಿ ಇಲ್ಲವೇ ? ಹಾಗಿದ್ದಲ್ಲಿ ನೀವು ಮಾಡಬೇಕಾಗಿದ್ದಿಷ್ಟು


ಚಿತ್ರದುರ್ಗ, ತುಮಕೂರು. ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಹಾವೇರಿ, ಧಾರವಾಡ, ಗದಗ, ತ್ತರಕನ್ನಡ, ಬೀದರ್, ಯಾದಗಿರಿ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಮತದಾನ (polling)ನಡೆಯುತ್ತಿದೆ.


ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 9 , ಈಶಾನ್ಯ ಕ್ಷೇತ್ರದಲ್ಲಿ 5, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 15 ಮತ್ತು ಪಶ್ಚಿಮ ಪದವಿಧರ ಕ್ಷೇತ್ರದಲ್ಲಿ11 ಅಭ್ಯ ರ್ಥಿಗಳು ಕಣದಲ್ಲಿದ್ದಾರೆ.ಪದವಿಧರ ಕ್ಷೇತ್ರದ ಮತ ಎಣಿಕೆ  ಧಾರವಾಡ ಕೃಷಿ ವಿಜಾನ ವಿವಿಯಲ್ಲಿ ನಡೆಯಲಿದ್ದು, ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಗುಲ್ಬರ್ಗ ವಿವಿಯ ಗಣಿತ ವಿಭಾಗದಲ್ಲಿ,  ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದ ಮತ ಎಣಿಕೆಯು ಸರ್ಕಾರಿ ಕಾಲೇಜಿನಲ್ಲಿ ನಡೆಯಲಿದೆ.