ಬೆಂಗಳೂರು: ಸರ್ಕಾರ ಕೋವಿಡ್ (Covid) ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಪ್ರಕಾರ ರ್ಯಾಲಿಗಳಿಗೆ ಅವಕಾಶವಿಲ್ಲದೆಯಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮೇಕೆದಾಟು ಒತ್ತಾಯಿಸಿ ಪಾದಯಾತ್ರೆ ಮಾಡಿ ಮಾಡುತ್ತೇವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 


COMMERCIAL BREAK
SCROLL TO CONTINUE READING

ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಮೇಲಿನ ಸಿಟ್ಟಿಗೆ ಜನರನ್ನು ಕೊಲೆ ಮಾಡುತ್ತಿದ್ದಾರೆ. ಇವರು ಮನುಷ್ಯರಾ? ವರ್ತಕರು, ಡ್ರೈವರ್ ಗಳು ಬೀದಿ ವ್ಯಾಪಾರ ಮಾಡುವವರ ಕೊಲೆ ಮಾಡುತ್ತಿದ್ದಾರೆ ಎಂದರು.


ನನ್ನ ಮೇಲೆ, ಸಿಎಲ್ ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕೇಸ್ ಹಾಕಿದ್ದಾರೆ. ಇವರಿಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್ , ಮೋದಿ ಅವರು ರ್ಯಾಲಿ ಮಾಡಿದ್ರು ಅದಕ್ಕೇನು ಎಂದು ಮೋದಿ ರ್ಯಾಲಿ ವಿರುದ್ಧ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.


9 ನೇ ತಾರೀಖಿನಂದು ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಡೀ ರಾಜ್ಯದಲ್ಲಿ ಯಾರು ಓಡಾಡಲ್ವ? ಇವರು ಯಾರು ಓಡಾಡಲ್ವ, ಇವರ ಕಡೆಯವರು ಓಡಾಡಲ್ವ? ನಾವು ನೆಡೆಯುತ್ತೇವೆ ಪಾದಯಾತ್ರೆ ಅಂತ ಯಾಕೆ ಎನ್ನುತ್ತೀರಾ 'ನೀರಿಗಾಗಿ ನಡಿಗೆ' ಎಂದು ಹೆಸರು ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದರು.


ನಾವು ರ್ಯಾಲಿ ಮಾಡುತ್ತಿರುವುದು ಕುಡಿಯುವ ನೀರಿಗಾಗಿ. ಬೆಂಗಳೂರಿನ ಜನರಿಗೆ , ರೈತರಿಗೆ ಪ್ರಾರ್ಥನೆ ಮಾಡುತ್ತಿದ್ದೇವೆ. ಕೋವಿಡ್ ಪಾಸಿಟಿವ್ ಯಾರ್ ಯಾರಿಗೆ ಆಯ್ತು ಅಂತ ತಿಳಿಸಿದ್ರೆ ನಾವು ಆ ಪೇಶೆಂಟ್ ಮೀಟ್ ಮಾಡುತ್ತೇವೆ. ನಾವು ರ್ಯಾಲಿ ಮಾಡುವುದಿಲ್ಲ, ಧರಣಿ ಮಾಡುವುದಿಲ್ಲ. ನೀರಿಗಾಗಿ ನಡಿಗೆ ಮಾಡುತ್ತೇವೆ ಅಷ್ಟೇ, ವಾಕ್ ಫಾರ್ ವಾಟರ್ (Walk for water) ಎಂದರು.


ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ವರದಿ.. ಒಂದೇ ದಿನದಲ್ಲಿ 55% ಏರಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.