ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ನಿಯಂತ್ರಿಸಲು ಸರ್ಕಾರ ಜೂನ್. 7ರವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ. ಇದರ ಮಧ್ಯೆ ಹೆಳ್ಳಿಗಳಲ್ಲಿಯೂ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದಾಗಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಕೇಸ್ ಸೆಂಟರ್ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಲ್ಲದೆ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೊರೋನಾ ಸೋಂಕಿತರ ಸಂಖ್ಯೆಯ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಿದೆ. 


COMMERCIAL BREAK
SCROLL TO CONTINUE READING

ರಾಜ್ಯ ಸರ್ಕಾರದ https://www.covidwar.karnataka.gov.in/Service45/ ವೆಬ್ ಸೈಟ್ ಗೆ ಭೇಟಿ ನೀಡಿದರೆ. ನಿಮ್ಮ ಗ್ರಾಮ ಪಂಚಾಯಿತಿ(Grama Panchayat) ವ್ಯಾಪ್ತಿಯಲ್ಲಿನ ಯಾವ ಹಳ್ಳಿಯಲ್ಲಿ ಎಷ್ಟು ಕೊರೋನಾ ಸೋಂಕಿತರಿದ್ದಾರೆ ಎನ್ನುವ 24 ಗಂಟೆ ಹಿಂದಿನ ಅಂಕಿ-ಅಂಶಗಳ ಮಾಹಿತಿ ನಿಮಗೆ ಲಭ್ಯವಾಗಲಿದೆ. ಈ ಮೂಲಕ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಇದೆ ಎಂಬುದು ತಿಳಿಯಲಿದೆ.


ಇದನ್ನೂ ಓದಿ : SR Vishwanath : 'ಮುಂದಿನ 2 ವರ್ಷ ಯಡಿಯೂರಪ್ಪ‌ರೇ ರಾಜ್ಯದ ಸಿಎಂ'


ಹಾಗಾದ್ರೇ ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಹಳ್ಳಿಗಳಲ್ಲಿ ಎಷ್ಟು ಕೇಸ್(Corona Cases) ಗಳಿವೆ ಎಂಬುದನ್ನು ಹೇಗೆ ತಿಳಿಯೋದು.?


ಇದನ್ನೂ ಓದಿ : ಕರ್ನಾಟಕದ ಸಾಕ್ಷಿಪ್ರಜ್ಞೆ ಗಾಂಧಿವಾದಿ ಎಚ್.ಎಸ್ ದೊರೆಸ್ವಾಮಿ ಇನ್ನಿಲ್ಲ


https://www.covidwar.karnataka.gov.in/Service45/ ಮೊದಲು ಈ ಲಿಂಕ್ .


ಇದಾದ ಬಳಿಕ ನಿಮ್ಮ ಜಿಲ್ಲೆ(Districts) ಯಾವುದು ಎನ್ನುವ ಮಾಹಿತಿಯನ್ನು ಆಯ್ಕೆ ಮಾಡಿ..


ಹೀಗೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡ ಬಳಿಕ, ನಿಮ್ಮ ತಾಲೂಕು(Taluku) ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.


ಇದನ್ನೂ ಓದಿ : K Sudhakar : ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 1.25 ಲಕ್ಷ ಡೋಸ್ COVAXIN ಬಿಡುಗಡೆ!


ತಾಲೂಕಿನ ನಂತ್ರ, ನಿಮ್ಮ ತಾಲೂಕು ವ್ಯಾಪ್ತಿಯಲ್ಲಿ ಬರುವಂತ ಗ್ರಾಮ ಪಂಚಾಯಿತಿಗಳ ಪಟ್ಟಿ ತೋರಿಸುತ್ತದೆ. ಅದರಲ್ಲಿ ನಿಮ್ಮ ಊರಿನ ಗ್ರಾಮ ಪಂಚಾಯಿತಿ(Grama Panchayat) ಆಯ್ಕೆ ಮಾಡಿಕೊಳ್ಳಿ


ನೀವು ನಿಮ್ಮ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿಕೊಂಡ್ರೇ.. ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಷ್ಟು ಊರುಗಳು(VillageS) ಬರುತ್ತವೋ ಅವುಗಳನ್ನು ತೋರಿಸುತ್ತದೆ.


ಇದನ್ನೂ ಓದಿ : CD Case : ಸಿಡಿಯಲ್ಲಿ ಇರೋದು ನಾನೇ ತಪ್ಪು ಒಪ್ಪಿಕೊಂಡ ರಮೇಶ್ ಜಾರಕಿಹೊಳಿ!


ಹೀಗೆ ತೋರಿಸುವಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟಿಯಲ್ಲಿ ನಿಮ್ಮ ಊರು ಸಹ ಇರುತ್ತದೆ. ಅಲ್ಲಿ ಕಳೆದ 24 ಗಂಟೆಯಲ್ಲಿ ಎಷ್ಟು ಕೊರೋನಾ ಕೇಸ್ ಇದ್ದಾವೆ ಎನ್ನುವ ಅಂಕಿ-ಅಂಶವನ್ನು ನೋಡಬಹುದಾಗಿದೆ.


ಈ ವಿಧಾನ ಅನುಸರಿಸಿ, ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಕಳೆದ 24 ಗಂಟೆಯಲ್ಲಿ ಎಷ್ಟು ಕೊರೋನಾ ಸೋಂಕಿತರು ಇದ್ದಾರೆ ಎಂಬುದಾಗಿ ಅಂಕಿ-ಅಂಶಗಳ ಮಾಹಿತಿಯನ್ನು ನೋಡಬಹುದಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.