ಕಾವೇರಿ ನೀರು ತಮಿಳುನಾಡಿಗೆ ನಿಲ್ಲಿಸದೇ ಇದ್ರೆ ಉಗ್ರ ಹೋರಾಟದ ಎಚ್ಚರಿಕೆ: ವಾಟಾಳ್ ನಾಗರಾಜ್
ಕಾವೇರಿ ನೀರು ಡೆಡ್ ಸ್ಟೋರೆಜ್ ನತ್ತ ಸಾಗ್ತಿದ್ರೂ ತಮಿಳುನಾಡಿಗೆ ಬಿಡೋದನ್ನ ಮಾತ್ರ ನಿಲ್ಲಿಸುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.ಪ್ರತಿನಿತ್ಯ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಇದೇ ರೀತಿ ಮುಂದುವರೆದರೆ ರಾಜ್ಯದ ಜನರಿಗೆ ನೀರನ ಸಂಕಷ್ಟ ಎದುರಾಗುತ್ತೆ.ರಾಜ್ಯದಲ್ಲಿ ಬರಗಾಲ ಆವರಿಸುತ್ತೆ ಎಂದು ಬೇಸರವನ್ನ ವ್ಯಕ್ತಿಪಡಿಸಿದ್ದಾರೆ.
ಬೆಂಗಳೂರು: ಕಾವೇರಿ ನೀರು ಡೆಡ್ ಸ್ಟೋರೆಜ್ ನತ್ತ ಸಾಗ್ತಿದ್ರೂ ತಮಿಳುನಾಡಿಗೆ ಬಿಡೋದನ್ನ ಮಾತ್ರ ನಿಲ್ಲಿಸುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.ಪ್ರತಿನಿತ್ಯ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಇದೇ ರೀತಿ ಮುಂದುವರೆದರೆ ರಾಜ್ಯದ ಜನರಿಗೆ ನೀರನ ಸಂಕಷ್ಟ ಎದುರಾಗುತ್ತೆ.ರಾಜ್ಯದಲ್ಲಿ ಬರಗಾಲ ಆವರಿಸುತ್ತೆ ಎಂದು ಬೇಸರವನ್ನ ವ್ಯಕ್ತಿಪಡಿಸಿದ್ದಾರೆ.
ಈ ಕುರಿತಂತೆ ಕಾವೇರಿ ನೀರನ್ನ ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ರು.
ಇದನ್ನೂ ಓದಿ-HD Kumaraswamy Health Updates: ಎಚ್ಡಿಕೆ ಆರೋಗ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ ಹೇಳಿದ್ದೇನು..?
ರಾಜ್ಯದಲ್ಲಿರುವ ತಮಿಳುಗರನ್ನ ತಮಿಳುನಾಡಿಕೆ ಕರೆಸಿಕೊಳ್ಳಿ;
ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ತಮಿಳಿಗರು ನೆಲೆಸಿದ್ದಾರೆ. ಅವರಿಗೆ ನಮ್ಮ ರಾಜ್ಯ ಎಲ್ಲವನ್ನೂ ನೀಡುತ್ತಿದೆ. ಆದ್ರೆ ತಮಿಳುನಾಡಿನವರು ಮಾತ್ರ ಕಾವೇರಿ ನೀರಿಗೆ ತಗಾದೆ ತೆಗೆಯುತ್ತಾರೆ ಎಂದರು. ಅಲ್ಲದೇ ತಮಿಳುನಾಡಿನಲ್ಲಿ ವರ್ಷಕ್ಕೆ ಎರಡು ಮೂರು ಬಾರಿ ನಮ್ಮ ಕಾವೇರಿ ನೀರಿನಿಂದಲೇ ಬೆಳೆಗಳನ್ನ ಬೆಳೆಯುತ್ತಾರೆ. ಆದ್ರೆ ಕಾವೇರಿ ನೀರನ್ನೇ ಅವಲಂಬಿಸಿರುವ ನಮ್ಮ ರೈತರಿಗೆ ಅನ್ಯಾಯವಾಗ್ತಿದೆ ಎಂದು ಅಸಮಾಧಾನವನ್ನ ಹೊರ ಹಾಕಿದ್ರು.
ಇದನ್ನೂ ಓದಿ: ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ‘ಕಿಡ್ನಾಪ್ ಕಾವ್ಯ’!
ನೀರನ್ನ ನಿಲ್ಲಿಸಿ ಇಲ್ಲದಿದ್ರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ
ಕೂಡಲೇ ತಮಿಳುನಾಡಿಗೆ ಬಿಡುತ್ತಿರುವ ನೀರನ್ನ ನಿಲ್ಲಿಸಬೇಕು. ಸರ್ಕಾರದ ವಕೀಲರು ಇರುವ ನೀರಿನ ಮಟ್ಟದ ಮಾಹಿತಿಯನ್ನ ಸುಪ್ರೀಂ ಕೋರ್ಟ್ ಗೆ ಒಪ್ಪಿಸಬೇಕು.ನ್ಯಾಯಯುತವಾಗಿ ನೀರಿನ ವಾಸ್ತವದ ಬಗ್ಗೆ ಮಂಡನೆ ಮಾಡಬೇಕು ಎಂದ್ರ ಆಗ್ರಹಿಸಿದ್ರು. ಜೊತೆಗೆ ಸರ್ಕಾರ ಕೂಡ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕು ಇಲ್ಲಿದ್ರೆ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಕನ್ನಡಪರ ಸಂಘಟನೆಗಳು ಉಗ್ರ ಹೋರಾಟ ಮಾಡಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.