Water Problem: ಈ ಜಿಲ್ಲೆಯಲ್ಲಿ ಜನರು ನೀರಿಲ್ಲದೆ ಪರದಾಡುತ್ತಿದ್ದಾರೆ. ಮುಂಗಾರು ಮಳೆ ಇಲ್ಲದೆ ನದಿ ಕೆರೆ ಬತ್ತಿ ಹೋಗಿದೆ. ಈ ಕಾರಣ ಜೀವ ಜಲ ಇಲ್ಲದೆ ಇಡೀ ಗ್ರಾಮದ ಜನರು ಕೆಲಸ ಬಿಡುವಂತಾಗಿದೆ. ದಿನದ ಸಂಜೆ 1 ಗಂಟೆ ನೀರು ಹಿಡಿಯದಿದ್ರೆ ಈ ಜನರು ನೀರಿಲ್ಲದೆ ಪರದಾಡುವದಂತು ಗ್ಯಾರಂಟಿ. ಅದ್ಯಾವ ಜಿಲ್ಲೆಯಲ್ಲಿ ಅಷ್ಟು ನೀರಿನ ಸಮಸ್ಯೆ ಅಂತೀರಾ ಈ ಸ್ಟೋರಿ ಓದಿ... 


COMMERCIAL BREAK
SCROLL TO CONTINUE READING

ಒಂದು ಬದಿಯಲ್ಲಿ ಬಿಂದಿಗೆ ಹಿಡಿದು ನೀರಿಗಾಗಿ ಕಾದು ನಿಂತ ಜನರು. ಮತ್ತೊಂದೆಡೆ ಒಂದು ಗಂಟೆ ನೀರು ನೀಡಿದ್ರ ನಮಗೆ ಸಾಕಾಗಲ್ಲ ಅಂತಾ ಬೇಸರ ಹೊರಹಾಕ್ತಿರೋ ಗ್ರಾಮಸ್ಥರು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ದೇವಗಿರಿ ಗ್ರಾಮದಲ್ಲ. ಹೌದು, ಜಿಲ್ಲೆಯ ಬಹುತೇಶ ಹಳ್ಳಿಯಲ್ಲಿ ನೀರಿನ ಸಮಸ್ಯೆ ತುಂಬಾ ಎದುರಾಗಿದೆ. ಇನ್ನು ದೇವಗಿರಿ ಗ್ರಾಮಸ್ಥರು ವರದಾ ನದಿ ನೀರನ್ನು ಅವಲಂಬಿಸಿ ಜೀವನ ನಡೆಸುತ್ತಾರೆ. ಆದ್ರೆ, ಈ ಬಾರಿ ಸಮಯಕ್ಕೆ ಸರಿಯಾಗಿ ಬಾರದ ಮಳೆಯಿಂದ ಗ್ರಾಮದ ಜನರಿಗೆ ನೀರಿನ ಹಾಹಾಕಾರ ಶುರುವಾಗಿದೆ. 


ಈ ವಿಡಿಯೋ ಒಮ್ಮೆ ನೋಡಿ... ಸಣ್ಣ-ಮಧ್ಯಮ ಹಾಗೂ ಸೂಕ್ಷ್ಮಕೈಗಾರಿಕೆಗಳ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ


ಹೌದು, ಜಿಲ್ಲೆಯಲ್ಲಿ ಮಳೆರಾಯ ಬಾರದ ಹಿನ್ನಲೆ ಜಿಲ್ಲೆಯ ಬಹುತೇಕ ಕೆರೆ ನದಿಗಳು ನೀರಿಲ್ಲದೆ ಬತ್ತಿವೆ. ಈ ಹಿನ್ನಲೆ ಹಾವೇರಿ ಜಿಲ್ಲೆಯ ಬಹುತೇಕ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಇನ್ನು ಮೂಲಭೂತ ಸೌಕರ್ಯದಲ್ಲಿ ಒಂದಾದ ನೀರಿಲ್ದೆ ಜನರು ಪರದಾಟ ನಡೆಸಿದ್ದಾರೆ. ಕೆಲ ಗ್ರಾಮದಲ್ಲಿ ನೀರಿದ್ಲೆ ಆ ಜನ ದೂರದ ಊರಿನಿಂದ ಜೀವಜಲ ತರುವ ಸ್ಥತಿ ನಿರ್ಮಾಣವಾಗಿದೆ. ಈ ಕಾರಣ ಹಾವೇರಿ ತಾಲೂಕಿ ದೇವರಿಗಿ ಹಳ್ಳಿ ನೀರಿನ ಸಮಸ್ಯೆ ಇಟ್ಟುಕೊಂಡು ಜೀ ಕನ್ನಡ ನ್ಯೂಸ ಸುದ್ಧಿ ಬಿತ್ತರಿಸಿತ್ತು. 


ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತಿರುವ ಡಿಸಿ ರಘುನಂದನಮೂರ್ತಿ, ದೇವಗಿರಿ ಗ್ರಾಮದ ಜೊತೆ 145 ಹಳ್ಳಿಯ ನೀರಿನ ಸಮಸ್ಯೆ ಇದೆ. ಈ ಕಾರಣ ಸಮಸ್ಯೆ ಬಗೆಹರಿಸಲು ಬೇಕಾದ ವ್ಯವಸ್ಥೆ ಜಿಲ್ಲಾಡಳಿತ ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ. 


ಹೌದು, ಬ್ಯಾಡಗಿ 20, ಹಾನಗಲ್ 31, ಹಾವೇರಿ 25, ಹಿರೇಕೆರೂರು 27, ರಾಣೇಬೆನ್ನೂರು 12, ರಟ್ಟಿಹಳ್ಳಿ 11, ಸವಣೂರು 6, ಶಿಗ್ಗಾವಿ 13 ಸೇರಿದಂತೆ 8 ತಾಲೂಕಿನಿಂದ 145 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಬರ ಇದ್ದು, ಬಾಡಿಗೆ ಬೋರ್ ವೇಲ್ ಮೂಲಕ ಬಗೆಹರಿಸುವದಾಗಿ ಹಾವೇರಿ ಡಿಸಿ ರಘುನಂದನಮೂರ್ತಿ ಹೇಳಿದರು. 


ಇದನ್ನೂ ಓದಿ- ರಾಜ್ಯದಲ್ಲಿ ಮುಂದುವರೆದ ನಾರಿಯರ 'ಶಕ್ತಿ' ಪ್ರದರ್ಶನ


ಒಟ್ಟಿನಲ್ಲಿ ಹಾವೇರಿ ಜಿಲ್ಲೆಯ ಜೀವಜಲ ನೀಡುವ ನದಿ ಕೆರೆಗಳು ಬತ್ತಿದ ಹಿನ್ನಲೆ ಜಿಲ್ಲೆಯ ಬಹುತೇಕ ಗ್ರಾಮದ ಜನರು ನೀರಿಗಾಗಿ ಪರದಾಟ ನಡೆಸಿದ್ದರು.‌ ಈ ಕುರಿತು ಜೀ ಕನ್ನಡ ನ್ಯೂಸ್ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಹಾವೇರಿ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು, ನೀರಿನ ಸಮಸ್ಯೆ ಎದುರಿಸುತ್ತಿರೋ ಹಳ್ಳಿ ಮತ್ತು ನಗರದ ಜನರ ಮುಖದಲ್ಲಿ ಮಂದಹಾಸ ಮೂಡಿದೆ.  


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ