ಗದಗ: ನಾವೆಲ್ಲ ಭಾರತ ಮಾತೆಯ ಮಕ್ಕಳು. ಕಾಂಗ್ರೆಸ್ ನವರು ಸೋನಿಯಾ ಗಾಂಧಿ ಮಕ್ಕಳು. ನಾವು ಭಾರತ ಮಾತೆಯ ಸೇವೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಅವರು ಇಂದು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿಗ್ಲಿ, ದೊಡ್ಡೂರು, ಕುರುಡಗಿ, ಸೂರಣಗಿ, ಬಾಲೆಹೊಸೂರು ಗ್ರಾಮಗಳಲ್ಲಿ ರೋಡ್ ಶೋ ಮಾಡಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.


ಇದನ್ನೂ ಓದಿ: ನಟಿ ಅನುಷ್ಕಾ ಶೆಟ್ಟಿ ಮೊದಲು ನಟಿಸಿದ್ದು ಕನ್ನಡದ ಈ ಖ್ಯಾತ ಧಾರಾವಾಹಿಯಲ್ಲಿ… ತೆಲುಗಿನಲ್ಲಿ ಅಲ್ಲ! ಆ ಸೀರಿಯಲ್ ಯಾವುದು?


ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ಹತ್ತು ವರ್ಷದಲ್ಲಿ ಭಯೋತ್ಪಾದಕರನ್ನು ಅವರ ನೆಲದಲ್ಲಿ ಹೋಗಿ ಧ್ವಂಸ ಮಾಡಿದ್ದಾರೆ. ಭಾರತವನ್ನು ಭಯೊತ್ಪಾದನೆ ಮುಕ್ತ ಮಾಡಿದ್ದಾರೆ.


ನಾನು ಸಿಎಂ ಆಗಿದ್ದಾಗ ಪ್ರವಾಹ ಬಂದಾಗ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪ್ರವಾಹ ಪರಿಹಾರ ನೀಡಿದ್ದೇನೆ. 4500 ಕೋಟಿ ರೂ. ಪರಿಹಾರ ನೀಡಿದ್ದೇವು. ಇವರು ತಾವು ಪರಿಹಾರ ನೀಡದೇ ಕೇಂದ್ರದ ಕಡೆಗೆ ಕೈತೋರಿಸುತ್ತಿದ್ದಾರೆ. ಇವರು ರೈತರ ವಿರೋಧಿ ಸರ್ಕಾರ. ರೈತರ, ನೇಕಾರರ ಹಿಂದುಳಿದವರ ಯೋಜನೆಗಳು ಸ್ಥಗಿತವಾಗಿವೆ ಎಂದು ಹೇಳಿದರು


ಕಾಂಗ್ರೆಸ್ ಸ್ಪರ್ಧೆ ಮಾಡಿರುವುದೇ 200 ಕ್ಷೇತ್ರದಲ್ಲಿ ಅವರು ಅಧಿಕಾರಕ್ಕೆ ಹೇಗೆ ಬರಲು ಸಾಧ್ಯ. ಮುಂದಿನ ಎರಡು ಮೂರು ವರ್ಷದಲ್ಲಿ ರಾಜ್ಯ ಸರ್ಕಾರ ಇನ್ನೂ ಸಾಲ ಮಾಡುತ್ತಿದೆ. ಎಲ್ಲ ಜಾತಿ ಮತ ವರ್ಗದವರು ಮುಂದೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರಂತರ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತರುವ ಕೆಲಸ ಮಾಡಿದ್ದಾರೆ. ಇನ್ನು ಐದು ವರ್ಷದಲ್ಲಿ ಇನ್ನೂ 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತರುವ ಕೆಲಸ ಮಾಡಲಿದ್ದಾರೆ ಎಂದರು.


ಪಾಕಿಸ್ತಾನದ ಜನರು ನರೇಂದ್ರ ಮೋದಿಯವರು ಆ ದೇಶದ ಪ್ರಧಾನಿಯಾಗಿ ಅವರ ದೇಶ ಅಭಿವೃದ್ಧಿ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಒಬ್ಬ ಚಾಯ್ ಮಾರುವ ಹುಡುಗ ಹಂತ ಹಂತವಾಗಿ ಮೇಲೆ ಬಂದವರು ನರೇಂದ್ರ ಮೋದಿಯವರು. ಅವರ ಕರ್ತವ್ಯ ಪ್ರಜ್ಞೆ ಎಷ್ಟಿದೆ ಎಂದರೆ  ಅವರ ತಾಯಿ ನಿಧನ ಹೊಂದಿದಾಗ ಮೂರು ಗಂಟೆಯಲ್ಲಿ ಅಂತ್ಯ ಸಂಸ್ಕಾರ ಮಾಡಿ, ಮತ್ತೆ ದೇಶದ ಕೆಲಸ ಆರಂಭಿಸಿದರು ಹೇಳಿದರು.


ಎದುರಿಗೆ ಆಟಗಾರರೇ ಇಲ್ಲ


ಕಬಡ್ಡಿ ಗ್ರೌಂಡ್ನಲ್ಲಿ ಎದುರಿಗೆ ಆಟವಾಡಲು ಆಟಗಾರರೇ ಇಲ್ಲ‌. ನಮ್ಮ ಕಡೆ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಆದರೆ, ಪ್ರತಿಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಅವರ ಗ್ರೌಂಡ್ ಪೂರ್ಣ ಖಾಲಿಯಾಗಿದೆ ಎಂದು ಹೇಳಿದರು.


ಅಭಿವೃದ್ಧಿ ಸ್ಥಗಿತ


ಸಿಂಗಟಾಲೂರು ಯೋಜನೆ ನಮ್ಮ ಅವಧಿ ಆಗಿದೆ.  ಗ್ರಾಮಿಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸಂಪೂರ್ಣ ಸ್ಥಗಿತವಾಗಿದೆ.  ಇಷ್ಟು ದೊಡ್ಡ ಪ್ರಮಾಣದಲ್ಲಿ ಬರ ಬಂದಿದೆ ದನಗಳಿಗೆ ಮೇವು ನೀರಿಲ್ಲ. ರೈತ ಸಂಘದವರು ಸರ್ಕಾರ ನೀಡಿದ್ದ ಎರಡು ಸಾವಿರ ರೂಗೆ ಒಂದು ನೂರು ರೂಪಾಯಿ ಸೇರಿಸಿ ಸರ್ಕಾರಕ್ಕೆ ಹಣ ಕಳಿಸಿದ್ದಾರೆ.


ಕೇಂದ್ರ ಸರ್ಕಾರ ಹಿಂದಿನ ಯುಪಿಎ ಅಧಿಕಾರದ ಹತ್ತು ಪಟ್ಟು ಹಣ ನೀಡಿದೆ. ಈ ಸರ್ಕಾರ 1.5 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಎಲ್ಲ ಹಣವನ್ನು ಗ್ಯಾರೆಂಟಿ ಗೆ ನೀಡಿದ್ದಾರೆ. ಹಿಂದೆ ಸಿದ್ದರಾಮಯ್ಯ ಮಾಡಿದ ಸಾಲವನ್ನು ನಾನು ತೀರಿಸಿದ್ದೇನೆ ಎಂದರು.


ಇದನ್ನೂ ಓದಿ: ಎಸಿ, ಫ್ಯಾನ್ ಅಗತ್ಯವೇ ಇಲ್ಲ… ಮನೆಯೊಳಗೆ ಇದೊಂದು ಗಿಡ ಇದ್ದರೆ ಬೇಸಿಗೆಯಲ್ಲೂ ಕಾಶ್ಮೀರದಂತಹ ಅನುಭವ ಗ್ಯಾರಂಟಿ


ಶಿಗ್ಲಿ ಗ್ರಾಮದೊಂದಿಗೆ ತಮ್ಮ ತಂದೆಯ ಕಾಲದಿಂದಲೂ ಉತ್ ಸಂಬಂಧ ಹೊಂದಿದ್ದು, ರಾಜಕೀಯವಾಗಿ ಬಹಳಷ್ಟು ಪ್ರಜ್ಞೆ ಇರುವ ಗ್ರಾಮ, ಈ ಗ್ರಾಮದ ಜೊತೆ ನಮ್ಮ ತಂದೆಯವರೊಂದಿಗೆ ಸಂಬಂಧ ಇದೆ. ಇಲ್ಲಿನ ಬಳಿಗಾರ ಹಾಗೂ ಇತರ ಕುಟುಂಬಳೊಂದಿಗೆ ಸಂಬಂಧ ಇದೆ. ನಮ್ಮ ತಂದೆಯವರ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ವಿ.ಪಿ‌ ಬಳಿಗಾರ ಅವರು ದಕ್ಷ ಅಧಿಕಾರಿಯಾಗಿದ್ದರು ಎಂದು ಸ್ಮರಿಸಿದರು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ