ಹಾಸನ: ಸಮ್ಮಿಶ್ರ ಸರ್ಕಾರ ಪರನಕ್ಕೆ ನಾವು ಕಾರಣರಲ್ಲ. ನಾವು ಯಾರಿಗೂ ಹಣದ ಆಮಿಷ ಒಡ್ಡಿಲ್ಲ. ಅವರೇ ಸರ್ಕಾರ ಬೀಳಿಸಿದ್ರು, ನಾವು ಹಿಡ್ಕೊಂಡ್ವಿ ಅಷ್ಟೇ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಕಲೇಶಪುರದಲ್ಲಿಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಜೆಡಿಎಸ್ ಶಾಸಕರಿಗೆ 5 ಕೋಟಿ ರೂ. ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ನಾವು ಯಾರಿಗೂ ಹಣ ಕೊಟ್ಟಿಲ್ಲ. ಅವರಲ್ಲೇ ಇದ್ದ ಅಸಮಾಧಾನದಿಂದ ಸಮ್ಮಿಶ್ರ ಸರ್ಕಾರ ಪತನವಾಗಿದೆ ಎಂದು ಹೇಳಿದರು. 


ಇದೇ ವೇಳೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಬಗ್ಗೆ ಮಾತನಾಡಿದ ಮಾಧುಸ್ವಾಮಿ ಅವರು, ತನಿಖೆಗೆ ಸಹಕರಿಸದ ಕಾರಣ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಡಿಕೆ ಶಿವಕುಮಾರ್ ಸರಿಯಾಗಿ ಸ್ಪಂದಿಸಿದ್ದರೆ ಅಧಿಕಾರಿಗಳೇಕೆ ಬಂಧಿಸುತ್ತಿದ್ದರು. ಕಾನೂನಿನ ಮುಂದೆ ಎಲ್ಲರಿಗೂ ಒಂದೇ ನ್ಯಾಯ ಎಂದು ಹೇಳಿದ್ದಾರೆ.