ಬೆಂಗಳೂರು: ನಮ್ಮ ಶಾಸಕ ಸ್ಥಾನದ ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ ಎಂದು ಅನರ್ಹ ಶಾಸಕ ಮುನಿರತ್ನ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ನಾವು ತಪ್ಪು ಮಾಡಿದ್ದೇವೆ ಎಂದು ನಮಗೆ ಅನಿಸುತ್ತಿಲ್ಲ. ಪ್ರತಿ ಶಾಸಕನಿಗೂ ಅವರ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿರುತ್ತದೆ. ನಮ್ಮ ರಾಜೀನಾಮೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಕಾರಣಕ್ಕಾಗಿಯೇ ಹೊರತು, ನನ್ನ ಕುಟುಂಬಕ್ಕಾಗಿ ಅಲ್ಲ ಅಥವಾ ಯಾವುದೇ ಸ್ವಾರ್ಥಕ್ಕಾಗಿ ಅಲ್ಲ. ಕುದುರೆ ವ್ಯಾಪಾರಕ್ಕೆ ನಾವು ಬಲಿಯಾಗಿಲ್ಲ. ಯಾವುದೇ ಹಣಕ್ಕಾಗಿ ನಾವು ಈ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.


ರಾಮಲಿಂಗ ರೆಡ್ಡಿಯವರಿಗೆ ಸಚಿವ ಸ್ಥಾನ ನೀಡದೇ ಇದ್ದದ್ದಕ್ಕೆ ನಾವು ಬೇಸರಗೊಂಡಿದ್ದೆವು. ರಾಜ್ಯಕ್ಕೆ ಹೆಚ್ಚು ಲಾಭ ಬರುವುದು ಬೆಂಗಳೂರಿನಿಂದ, ಆದರೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ ಮುನಿರತ್ನ, ನಮ್ಮನ್ನು ಪ್ರಚೋದಿಸಿದವರು ಯಾರು ಎನ್ನುವುದನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸುತ್ತೇವೆ. ಸದ್ಯಕ್ಕೆ ಅನರ್ಹತೆ ಕುರಿತು ನಾವು ನ್ಯಾಯಯುತ ಹೋರಾಟ ನಡೆಸುತ್ತೇವೆ. ಸುಪ್ರೀಂಕೋರ್ಟ್ ನಲ್ಲಿ ನಮ್ಮ ಅನರ್ಹತೆ ಬಗ್ಗೆ ಪ್ರಶ್ನಿಸುತ್ತೇವೆ ಎಂದು ತಿಳಿಸಿದರು.