ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿದ್ದು, ‘ಮಾಂಡೌಸ್’ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಚಂಡಮಾರುತದ ಹೊಡೆತಕ್ಕೆ ಚೆನ್ನೈನ ಮರೀನಾ ಬೀಚ್ ನಲ್ಲಿ ವಿಶೇಷ ಚೇತನರಿಗಾಗಿ ನಿರ್ಮಿಸಿದ್ದ ನಡಿಗೆ ಸೇತುವ ಧ್ವಂಸವಾಗಿದೆ.


COMMERCIAL BREAK
SCROLL TO CONTINUE READING

ಚಳಿಗಾಲದ ಮೊದಲ ಚಂಡಮಾರುತ ‘ಮಂಡೌಸ್’ ಶುಕ್ರವಾರ ತಡರಾತ್ರಿ ತಮಿಳುನಾಡಿಗೆ ಅಪ್ಪಳಿಸಿದ್ದು, ಮಾಮಲ್ಲಪುರಂ ಮತ್ತು ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಸೈಕ್ಲೋನಿಕ್ ಚಂಡಮಾರುತದ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಒಂದು ಅಥವಾ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೀನುಗಾರರು ಮುಂದಿನ 3-4 ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಹಾಗೂ ಕರಾವಳಿ ಪ್ರದೇಶಗಳಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಚಂಡಮಾರುತದಿಂದ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವನ್ನು ತಪ್ಪಿಸಲು ಈ ವಿಶೇಷ ಸೂಚನೆ ನೀಡಲಾಗಿದೆ.


ಚಂಡಮಾರುತದಿಂದ ರಾಜ್ಯದಲ್ಲಿ ಭಾರೀ ಮಳೆ


‘ಮಂಡೂಸ್ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅದರ ಅಬ್ಬರ ಇನ್ನಷ್ಟು ದಿನ ಮುಂದುವರೆಯಲಿದೆ. ಇದರಿಂದಾಗಿ ರಾಜ್ಯದ ಹಲವು ಕರಾವಳಿ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ. ಚೆನ್ನೈ ಮತ್ತು ಪುದುಚೇರಿ ನಡುವೆ ಕಳೆದ 130 ವರ್ಷಗಳಲ್ಲಿ 1891 ರಿಂದ 2021ರವರೆಗೆ 12 ಚಂಡಮಾರುತಗಳು ಸಂಭವಿಸಿವೆ. ಈ ಚಂಡಮಾರುತವು ಮಾಮಲ್ಲಪುರಂ ಬಳಿ ಕರಾವಳಿ ದಾಟಿದ್ದು, ಚೆನ್ನೈ ಮತ್ತು ಪುದುಚೇರಿ ನಡುವೆ ಬರುವ 13ನೇ ಚಂಡಮಾರುತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಾದೇಶಿಕ ನಿರ್ದೇಶಕ ಎಸ್.ಬಾಲಚಂದ್ರನ್ ತಿಳಿಸಿದ್ದಾರೆ. 


ಇದನ್ನೂ ಓದಿ: ನೆಲ, ಜಲ‌, ಗಡಿ, ಭಾಷೆ ವಿಚಾರದಲ್ಲಿ ರಾಜಿ ಆಗಲ್ಲ- ಬಿ.ಎಸ್.ಯಡಿಯೂರಪ್ಪ


ರಕ್ಷಣಾ ತಂಡಗಳ ನಿಯೋಜನೆ


ಮಾಂಡೂಸ್ ಚಂಡಮಾರುತದ ಹಿನ್ನೆಲೆ ಸರ್ಕಾರವು ಪರಿಹಾರ ಕಾರ್ಯಗಳಿಗಾಗಿ ಹಲವಾರು ವ್ಯವಸ್ಥೆಗಳನ್ನು ಮಾಡಿದೆ. ಪೊಲೀಸರ ಮಾಹಿತಿ ಪ್ರಕಾರ, ತಮಿಳುನಾಡು ಎಸ್‌ಡಿಆರ್‌ಎಫ್‌ನ 40 ಸದಸ್ಯರ ತಂಡವನ್ನು ಹೊರತುಪಡಿಸಿ, 16,000 ಪೊಲೀಸರು ಮತ್ತು 1,500 ಗೃಹ ರಕ್ಷಕರನ್ನು ನಿಯೋಜಿಸಲಾಗಿದೆ. ಇದಲ್ಲದೇ ಡಿಡಿಆರ್‌ಎಫ್‌ನ 12 ತಂಡಗಳನ್ನು ಸಿದ್ಧಗೊಳಿಸಲಾಗಿದೆ. ಕಾವೇರಿ ಡೆಲ್ಟಾ ಪ್ರದೇಶ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ ಸುಮಾರು 400 ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ.


ಚಂಡಮಾರುತಕ್ಕೆ ‘ಮಂಡೌಸ್’ ಹೆಸರು ನೀಡಿದ್ದು UAE


ಹಿಂದೂ ಮಹಾಸಾಗರದಲ್ಲಿರುವ ಈ ಚಂಡಮಾರುತದ ಹೆಸರನ್ನು 'ಮಂಡೌಸ್' ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಹೆಸರಿಸಿದೆ. ಇದು ಅರೇಬಿಕ್ ಭಾಷೆಯ ಪದವಾಗಿದ್ದು, ನಿಧಿ ಪೆಟ್ಟಿಗೆ ಎಂಬುದು ಇದರರ್ಥ. ಅಂತಾರಾಷ್ಟ್ರೀಯ ಒಪ್ಪಂದದ ಪ್ರಕಾರ, ಹಿಂದೂ ಮಹಾಸಾಗರದ ದೇಶಗಳು ತಮ್ಮ ಸರದಿ ಬಂದಾಗ ಇಂಗ್ಲಿಷ್ ವರ್ಣಮಾಲೆಯ ಪ್ರಕಾರ ಚಂಡಮಾರುತವನ್ನು ಹೆಸರಿಸುತ್ತವೆ. ಈ ಬಾರಿ ಯುಎಇ ಸರದಿ ಬಂದಿದ್ದು, ಹೀಗಾಗಿ ಚಂಡಮಾರುತಕ್ಕೆ ಈ ಹೆಸರನ್ನು ನೀಡಿದೆ.


ಇದನ್ನೂ ಓದಿ: vijayapura : 'ವಿಜಯಪುರ ಜಿಲ್ಲೆಯ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ'


ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಮಳೆ ಸಾಧ‍್ಯತೆ


ತಮಿಳುನಾಡಿಗೆ ಮಂಡೌಸ್ ಚಂಡಮಾರುತ ಅಪ್ಪಳಿಸಿದ್ದು, ಇದರ ಪರಿಣಾಮ ಬೆಂಗಳೂರು ಸೇರಿ ರಾಜ್ಯದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇಂದು ಮತ್ತು ನಾಳೆ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ 6 ಮಿಮೀ ಮಳೆ ಸಾಧ್ಯತೆ ಇದೆ.  ಚಾಮರಾಜನಗರ, ಬೆಂಗಳೂರು, ಕೋಲಾರ, ಮಂಡ್ಯ, ತುಮಕೂರು, ಚಿಕ್ಕಮಂಗಳೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿ 23 ರಿಂದ 22 ಡಿಗ್ರಿಗೆ ಉಷ್ಣಾಂಶ ಇಳಿಕೆಯಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಿಗೆ ಚಂಡಮಾರುತದ ಪರಿಣಾಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.