ಮಂಡ್ಯ: 'ಕರುಣಾಳು ಬಾ ಬೆಳಕೇ, ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು..' ಎಂಬ ಕವಿತೆಯಂತೆ ಮನ ಕರಗಿಸುವ ಘಟನೆಯೊಂದು ಬುಧವಾರ(ಆ.29) ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಶ್ರೀರಂಗಪಟ್ಟಣದ ಬಳಿ ತೆರಳುವಾಗ ನಡೆದಿದೆ.


COMMERCIAL BREAK
SCROLL TO CONTINUE READING

ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರನ್ನು ಆಕಸ್ಮಿಕವಾಗಿ ಭೇಟಿಯಾದ ಈ ಹುಡುಗಿ ಸಂಭ್ರಮದಲ್ಲಿ ಮುಳುಗಲು ಕಾರಣ ಏನು ಗೊತ್ತಾ?
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೃಷ್ಣರಾಜಸಾಗರದಲ್ಲಿ ಕರಯಕ್ರಮಗಳನ್ನು ಮುಗಿಸಿ ರಾಮನಗರ-ಕನಕಪುರದಲ್ಲಿ ಜನರ ಅಹವಾಲುಗಳನ್ನು ಕೇಳಲು ಹೊರಟಿದ್ದರು. ಅವರ ಕಾರು ಶ್ರೀರಂಗಪಟ್ಟಣ ದಾಟುತ್ತಿತ್ತು. ಆ ಸಮಯದಲ್ಲಿ ಹೆದ್ದಾರಿಯ ಬದಿಯಲ್ಲಿ ಹೋಗಿ ಬರುತ್ತಿದ್ದ ವಾಹನಗಳಿಗೆಲ್ಲ ಪುಟ್ಟ ಕೈ ಅಡ್ಡ ಹಿಡಿಯುತ್ತಾ ಬಾಲಕಿಯೊಬ್ಬಳು ಹೂ ಮಾರುತ್ತಿದ್ದಳು. 


ವಾಹನಗಳವರು ಆಕೆಯನ್ನು ಕಂಡರೋ ಇಲ್ಲವೋ. ಆದರೆ ಆ ಹಾದಿಯಲ್ಲಿ ಸಾಗುತ್ತಿದ್ದ ಕುಮಾರಸ್ವಾಮಿಯವರು ಬಾಲಕಿಯನ್ನು ನೋಡಿ ಮರುಗಿದರು. ತಕ್ಷಣವೇ ಕಾರು ನಿಲ್ಲಿಸಿ ಮಗುವನ್ನು ಬಳಿಗೆ ಕರೆದು ಆಕೆಯ ವಿವರ ಪಡೆದರು. ಶಾಬಾಬ್ತಾಜ್ ಶಾಲೆಗೇ ಹೋಗಬೇಕು ಎನ್ನುವ ತನ್ನ ಆಸೆಯನ್ನು ಆಕೆ ಹೇಳಿಕೊಂಡಳು. ಆವರ ತಂದೆಯನ್ನು ಹುಡುಕೇ ಭೇಟಿ ಮಾಡಲು ತಿಳಿಸುವಂತೆ ಹೇಳಿದರು. ಜೊತೆಗೆ ಆ ಹುಡುಗಿಯ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ನೆರವು ನೀಡಲು ಅಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶಿಸಿದರು. 


ಇದನ್ನು ಕೇಳಿದ ಹುಡುಗಿಯ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ಆಕೆ ಸಂಭ್ರಮದಲ್ಲಿ ಮುಳುಗಿಹೋದಳು.