ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿದ್ದಕ್ಕೆ ತೇಜಸ್ವಿ ಸೂರ್ಯ ಹೇಳಿದ್ದೇನು ಗೊತ್ತೇ?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಅನಂತ್ ಕುಮಾರ ಪತ್ನಿ ತೇಜಸ್ವಿನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದರ ಬದಲು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಯುವಕನಿಗೆ ಮಣೆ ಹಾಕಿದೆ.
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಅನಂತ್ ಕುಮಾರ ಪತ್ನಿ ತೇಜಸ್ವಿನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದರ ಬದಲು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಯುವಕನಿಗೆ ಮಣೆ ಹಾಕಿದೆ.
ಹೌದು. ಈಗ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅನಂತ್ ಕುಮಾರ್ 1996 ರಿಂದ ಹಿಡಿದು ನವಂಬರ್ 2018 ರಲ್ಲಿ ಕೊನೆಯುಸಿರೆಳೆಯುವವರೆಗೂ ಈ ಕ್ಷೇತ್ರದ ಸಂಸದರಾಗಿದ್ದರು.ಒಟ್ಟು ಆರು ಬಾರಿಗೆ ಸಂಸದರಾದ ದಾಖಲೆಯನ್ನು ಹೊಂದಿದ್ದರು.ಆದರೆ ಆಕಸ್ಮಿಕವಾಗಿ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಅವರು ಮೃತಪಟ್ಟಿದ್ದರು.
ಆಗಿನಿಂದಲೂ ಸಿಂಪತಿ ಆಧಾರದ ಮೇಲೆ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು.ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಹೈ ಕಮಾಂಡ್ ತೇಜಸ್ವಿ ಸೂರ್ಯನಿಗೆ ಮಣೆ ಹಾಕಿದೆ.ಈಗ ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ವಿರುದ್ದ ಸೆಣೆಸಲಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮನ್ನು ಘೋಷಣೆ ಮಾಡಿರುವುದಕ್ಕೆ ತೇಜಸ್ವಿ ಸೂರ್ಯ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು "ಓ ಮೈ ಗಾಡ್!! ಇದನ್ನು ನಂಬಲಾಗುತ್ತಿಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಹಾಗೂ ಅತಿ ದೊಡ್ಡ ಪಕ್ಷದ ಅಧ್ಯಕ್ಷರು 28 ವರ್ಷದ ಯುವಕನ ಮೇಲೆ ನಂಬಿಕೆ ಇಟ್ಟು ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದ ಮೂಲಕ ಸ್ಪರ್ಧಿಸಲು ಅನುವುಮಾಡಿಕೊಟ್ಟಿದ್ದಾರೆ.ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ, ಅದು ನರೇಂದ್ರ ಮೋದಿಯವರ ನವ ಭಾರತದಲ್ಲಿ ಮಾತ್ರ ಸಾಧ್ಯ" ಎಂದು ಅವರು ಟ್ವೀಟ್ ಮಾಡಿದ್ದಾರೆ