ಬೆಂಗಳೂರು: ಮಾತೃಪೂರ್ಣ ಯೋಜನೆಯಿಂದ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಊಟ ದೊರೆಯುತ್ತದೆ ಎಂಬುದು ಸಾಮಾನ್ಯ ಸಂಗತಿ. ಆದರೆ ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯ ಉದ್ದೇಶ ತಿಳಿಯುವುದು ಬಹಳ ಅವಶ್ಯ. 


COMMERCIAL BREAK
SCROLL TO CONTINUE READING

ಏನಿದು ಮಾತೃಪೂರ್ಣ ಯೋಜನೆ? ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.


*.ಗರ್ಭೀಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆ ಇದು.


*. ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ ನೀಡುವುದು.


*. ಬಿಸಿಯೂಟದ ಜೊತೆ ಗರ್ಭೀಣಿಯರು ಹಾಗೂ ಬಾಣಂತಿಯರಿಗೆ ಕಬ್ಬಿಣಾಂಶದ ಮಾತ್ರೆಗಳನ್ನ ವಿತರಿಸುವುದು.


*. ಮಧ್ಯಾಹ್ನದ ಬಿಸಿಯೂಟ ನೀಡಿ ಪೌಷ್ಠಿಕಾಂಶ ಹೆಚ್ಚಿಸಿಸುವುದು, ಕಡಿಮೆ ತೂಕದ ಮಕ್ಕಳ ಜನನ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡೋದು  ಯೋಜನೆಯ ಉದ್ದೇಶ.


*."ಮಾತೃಪೂರ್ಣ " ಅನ್ನ,ಸಾಂಬಾರ್, ಪಲ್ಯದ ಜೊತೆ ಬೇಯಿಸಿದ ಮೊಟ್ಟೆ, 200 ಮಿ.ಲೀ ಹಾಲು ಮತ್ತು ಚಿಕ್ಕಿಗಳನ್ನ ನೀಡುವುದು‌


*.ತಿಂಗಳಲ್ಲಿ ಕನಿಷ್ಠ 25 ದಿನ ಆಹಾರ ನೀಡುವ ಯೋಜನೆ.


*.ಸುಮಾರು 12 ಲಕ್ಷ ಗರ್ಭೀಣಿಯರು, ಬಾಣಂತಿಯರಿಗೆ ಪ್ರಯೋಜನ.


ಆಂಧ್ರ ಪ್ರದೇಶದಲ್ಲಿ ಈ ಯೋಜನೆಯು "ಅನ್ನ ಅಮೃತ ಹಸ್ತಂ" ಎಂಬ ಹೆಸರಿನಲ್ಲಿ ಮತ್ತು ತೆಲಂಗಾಣದಲ್ಲಿ ಈ ಯೋಜನೆಯು "ಆರೋಗ್ಯ ಲಕ್ಷ್ಮೀ" ಎಂಬ ಹೆಸರಿನಲ್ಲಿ ಜಾರಿಯಲ್ಲಿದೆ.