Nelamangala Taluk : ಗೊಂದಲ ಗೊಂದಲ ಗೊಂದಲ... ಮದುವೆ ಮಂಟಪದಲ್ಲಿ ಮೂಲೆ ಮೂಲೆಯಲ್ಲೂ ಗುಂಪು ಗುಂಪು ಜನ. ಎಲ್ಲರಲ್ಲೂ ಆತಂಕ.. ಮುಂದೇನೂ ಅನ್ನೋ ಗಂಭೀರ ಚರ್ಚೆ.. ಗುಸು.ಗುಸು.. ಮಾಡಿದ ಅಡುಗೆ ಹಾಗೆ ಇದೆ... ಸಂಭ್ರಮದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿದೆ..ಥೇಟ್ ಸಿನಿಮಾ ಸ್ಟೈಲ್ ನಂತೆ ಮದುವೆ ಮಂಟಪದಲ್ಲಿ ಘಟನೆಯೊಂದು ನಡೆದಿದೆ..


COMMERCIAL BREAK
SCROLL TO CONTINUE READING

ಕೊನೆ ಕ್ಷಣದ ಕ್ಲೈಮಾಕ್ಸ್ ಗೆ ಇಡೀ ಮದುವೆ ಮಂಟಪ ಶಾಕ್ ಗೆ ಗುರಿಯಾಗಿತ್ತು.. ಮುಂದೇನು ಅನ್ನೋ ಎದೆ ಬಡಿತ ಜೋರಾಗಿಸಿತ್ತು... ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೋಳಾಲದಲ್ಲಿರುವ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ ವೆಂಕಟೇಶ್ ಹಾಗೂ ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ ದಿವ್ಯಾ ಅವರ ಮದುವೆ ಫಿಕ್ಸ್ ಆಗಿತ್ತು.


 ರಾತ್ರಿ ರಿಸೆಪ್ಷನ್ ನಲ್ಲಿ ನಗುನಗುತ್ತಲೇ ವರ ವೆಂಕಟೇಶ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದ ದಿವ್ಯಾ ಆರಾಮಾಗಿ ಇದ್ಲು.. ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ದಿವ್ಯಾ ಹಸೆಮಣೆಯಿಂದ ಎದ್ದು ನಿಂತಳು.. ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಗೂಡಾಗಿತ್ತು..


ಹುಡುಗಿನ ನಿರ್ಧಾರದಿಂದ ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆಯಿತು. ಕೊಳಾಲ ಪೊಲೀಸ್ ಠಾಣೆಯಲ್ಲಿ ಮೆಟ್ಟಿಲು ಹತಿತ್ತು ಮದುವೆ ಮನೆಯ ಹೈ ಡ್ರಾಮಾ. ಹುಡುಗಿ ಜೊತೆ ಮದುವೆ ಸಂಬಂದ ಮುಂದುವರಸಲು ನಿರಾಕರಿಸಿದ ವರ ಹಾಗೂ ಕುಟುಂಬಸ್ಥರು. 


ಇದನ್ನೂ ಓದಿ-ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ನಾಯಕರ ಮಾದರಿ ನಡೆ: ಬಸವರಾಜ ಬೊಮ್ಮಾಯಿ


ಪೊಲೀಸರ ಸಮ್ಮುಖದಲ್ಲಿ ರಾಜೀ ಸಂಧಾನಕ್ಕೆ ಮುಂದಾದರು. ಮದುವೆ ಖರ್ಚು ಎಂದು ಒಂದು ಲಕ್ಷ ಹಣ ವರನ ಕಡೆಯವರಿಗೆ ನೀಡಲು ಒಪ್ಪಿ ವಧುವಿನ ತಂದೆ ಬಳಿಕ ಮದುವೆಗೆ ನೀಡಿದ ಚಿನ್ನಾಭರಣ ಕೂಡ ವಾಪಸ್ ನೀಡಿದ್ದರು. ಈ ನಡುವೆ ಮದುವೆ ಮಠಪದಿಂದ ಪೊಲೀಸ್ ಠಾಣೆಗೆ ಹೋಗಿದ್ದ ವಧುವಿನ ಪ್ರಿಯಕರ ನಾಗೇಶ್ ನಿನ್ನೆ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಕಾಣಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಪ್ರೀಯಕರನ್ನ ಕಂಡು ದಿವ್ಯಾ ಕೂಡ ಮದುವೆಗೆ ನಿರಾಕರಿಸಿದಳು.


ಕಳೆದ ಆರು ವರ್ಷಗಳಿಂದ ದಿವ್ಯಾ ಹಾಗೂ ನಾಗೇಶ್ ಪರಸ್ಪರ ಪ್ರೀತಿಯಲ್ಲಿ ಮುಳುಗಿದರು. ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಕೂಡ ವೆಂಕಟೇಶ್ ಜೊತೆ ಮಾಡಿಕೊಂಡಿದ್ಲು.. ಮಗಳ ಪ್ರೀತಿ ವಿಷಯ ಮುಚ್ಚಿಟ್ಟು ಮದುವೆ ಮಾಡಲು ಮುಂದಾಗಿದ್ದರು ದಿವ್ಯಾ ಪೋಷಕರು.. ಮದುವೆಯ ದಿನವೆ ಎಸ್ಕೇಪ್ ಆಗುವ ಪ್ಲಾನ್ನಲ್ಲಿದ್ದಳ ವಧು..? ಏನು ಆಗಿಲ್ಲವೆಂಬಂತೆ ಪೊಲೀಸ್ ಠಾಣೆಯಲ್ಲಿ ಓಡಾಡಿಕೊಂಡಿದ್ದಳು. 


ವರನ ಕಡೆಯವರಿಗೆ ವಿಚಾರ ಗೊತ್ತಾಗದಂತೆ ಎಚ್ಚರ ವಹಿಸಿದ್ರು ಪೊಷಕರು. ಇದು ಯಾವುದು ಗೊತ್ತಿಲ್ಲದ ವರ ವೆಂಕಟೇಶ್ ಮದುವೆ ಖರ್ಚನ್ನು ತಾವೆ ಬರಿಸಿದ್ದ. ವೆಂಕಟೇಶ್ ಹಾಗೂ ದಿವ್ಯಾ ದೂರದ ಸಂಬಂದಿಗಳಾಗಿದ್ದರು.


ಮದುವೆ ಹಿನ್ನೆಲೆ ವಧುವಿಗೆ ಸುಮಾರು ೪ ಲಕ್ಷ ಮೌಲ್ಯದ ಒಡವೆ ಹಾಕಿದ್ದ ವರ. ಮದುವೆ ಸಂಭ್ರಮ ವಿಲ್ಲದೇ ಕಲ್ಯಾಣ ಮಂಟಪ ಖಾಲಿ ಖಾಲಿಯಾಗಿದೆ.ಹಸೆಮಣೆ ಮೇಲೆ ಮದುವೆ ಮುರಿದು ಬಿದ್ದ ಹಿನ್ನಲೆ, ಮದುವೆಗೆ ತಯಾರಿಸಿದ್ದ ಅಡುಗೆ ವ್ಯರ್ಥವಾಗಿದೆ..ವಧು ಒಪ್ಪಿದ್ರು ನಮಗೆ ಮದುವೆ ಬೇಡ ಎಂದಿದ್ದಾರೆ ವರನ ಕಡೆಯವರು.


 ಈ ಎಲ್ಲಾ ಬೆಳಣಿಗೆ ನಡುವೆ ಪೊಲೀಸ್ ಠಾಣೆಯಿಂದ ಪ್ರಿಯಕರ ನಾಗೇಶ್ ಜೊತೆ ದಿವ್ಯಾ ಹೆಜ್ಜೆ ಹಾಕಿ ಹೊರ ಬಂದಿದ್ದಾಳೆ.. ಇತ್ತು ವರ ವೆಂಕಟೇಶ್ ಹಾಗೂ ಸಂಬಂಧಿಕರು ಬೇಸರಿಂದ ಮನೆಗೆ ಹೋಗಬೇಕಾಯಿತು..


ಇದನ್ನೂ ಓದಿ-ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಕರ್ತರು ಎಂದರೆ ಭಯ : ಸಚಿವ ಲಾಡ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.