ಬೆಂಗಳೂರು: ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕಸರತ್ತು ಮುಂದುವರಿದಿದ್ದು, ಅಂತಿಮ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಇನ್ನೂ ಬಂದಿಲ್ಲ. ಪಕ್ಷವನ್ನು ಮುನ್ನಡೆಸಲು ಇಬ್ಬರು ನಾಯಕರ ಹೆಸರು ಮುಂಚೂಣಿಯಲ್ಲಿದ್ದು, ಆದರೆ ಹೈಕಮಾಂಡ್ ಆಯ್ಕೆ ಯಾರು ಎಂಬುವುದು ಕುತೂಹಲ ಕೆರಳಿಸಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುತ್ತಾ? ಅಥವಾ ಕಟ್ಟರ್  ಹಿಂದುತ್ವವಾದಿ ಬಸನಗೌಡ ಪಾಟೀಲ್ ಅವರಿಗೆ ನಾಯಕತ್ವ ನೀಡಲಾಗುತ್ತಾ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 


COMMERCIAL BREAK
SCROLL TO CONTINUE READING

ಬಸವರಾಜ ಬೊಮ್ಮಾಯಿ ಪ್ಲಸ್ ಹಾಗೂ ಮೈನಸ್ ಏನೇನು? 
ಸಕರಾತ್ಮಕ ಅಂಶಗಳೇನು? 
* ಮಾಜಿ ಸಿಎಂ ಹಾಗೂ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ ಎಂಬ ಹೆಗ್ಗಳಿಕೆ. 
*ಲಿಂಗಾಯರ ಸಮುದಾಯದ ಹಿನ್ನಲೆ ಹಾಗೂ ಪಕ್ಷದಲ್ಲಿ ಹಿರಿತನದ ಅನುಭವ.
*ಸಂಸದೀಯ ಪಟು ಎಂಬ ಹೆಗ್ಗಳಿಗೆ, ಹಣಕಾಸು ಮತ್ತು ನೀರಾವರಿ ವಿಚಾರ ಹಾಗೂ ಕಾನೂನಾತ್ಮನಕವಾಗಿ ಇರುವ ಪರಿಣತಿ.    
*ಸಿದ್ದರಾಮಯ್ಯ ಅವರನ್ನು ಸದನದಲ್ಲಿ ಎದುರಿಸಲು ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಅವರು ಸಮರ್ಥರು ಎಂಬ ಅಭಿಪ್ರಾಯ.
*ಸಮಾಧಾನ ಚಿತ್ತದಿಂದ ಎಲ್ಲವನ್ನು ಹ್ಯಾಂಡಲ್ ಮಾಡುವ ನಿರ್ವಹಣಾ ಕೌಶಲ್ಯ.


ನಕರಾತ್ಮಕ ಅಂಶಗಳು ಏನೇನು? 
*ಲಿಂಗಾಯತ ಸಮುದಾಯದ ಹಿನ್ನೆಲೆ ಹೊಂದಿದ್ದರೂ ಪ್ರಭಾವಿ ನಾಯಕ ಅಲ್ಲ ಎಂಬ ಅಭಿಪ್ರಾಯ. 
*ಮುಖ್ಯಮಂತ್ರಿಯಾಗಿದ್ದರೂ ಶಾಸಕರ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫಲ. 
*ಮಾಜಿ ಸಿಎಂ ಆದರೂ ಪಕ್ಷವನ್ನು ಮುನ್ನಡೆಸುವಲ್ಲಿ ಹಾಗೂ ವಿಪಕ್ಷವಾಗಿ ಆಕ್ರಮಣಕಾರಿ ಹೋರಾಟ ರೂಪಿಸಲು ವಿಫಲರಾಗಬಹುದು ಎಂಬ ಅಭಿಪ್ರಾಯ. 
* ಸ್ವಪಕ್ಷೀಯರೇ ಪರೋಕ್ಷವಾಗಿ ಬಸವರಾಜ ಬೊಮ್ಮಾಯಿ ವಿರುದ್ಧ ಹೊಂದಾಣಿಕೆ ರಾಜಕೀಯದ ಆರೋಪ. 
*ಪಕ್ಷ ಸರ್ಕಾರದಲ್ಲಿ ಹಿಡಿತ ಸಾಧಿಸುವಲ್ಲಿ ವಿಫಲ.
*ಹಿರಿಯ ಹಾಗೂ ಕಿರಿಯ ನಾಯಕರ ನಡುವೆ ಹೊಂದಾಣಿಕೆ ಮಾಡುವಲ್ಲಿ ವಿಫಲ.
*ಸೈದ್ಧಾಂತಿಕವಾಗಿ ಸಂಘಪರಿವಾರದ ಮಾನಸೀಕತೆ ಹೊಂದಿರದೇ ಇರುವುದು. 


ಇದನ್ನೂ ಓದಿ- 30 ದಿನ ರಜೆ ಕೊಡಿ, ಇಲ್ಲಂದ್ರೆ ಒತ್ತಡದಲ್ಲಿ ಏನಾದ್ರು ಆದ್ರೆ ನೀವೇ ಜವಾಬ್ದಾರಿ!


ಇನ್ನು ಎರಡನೇ ಮುಂಚೂಣಿಯಲ್ಲಿ ಇರುವು ಹೆಸರು ಬಸನಗೌಡ ಪಾಟೀಲ್ ಯತ್ನಾಳ್. ಬಸನಗೌಡ ಪಾಟೀಲ್ ಯತ್ನಾಳ್ ಕುರಿತಾಗಿ ಬಿಜೆಪಿ ಪಕ್ಷದಲ್ಲೇ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳಿವೆ. ಅವರ ಪ್ಲಸ್ ಮತ್ತು ಮೈನಸ್ ಹೀಗಿವೆ.


ಯತ್ನಾಳ್ ಸಕರಾತ್ಮಕ ಅಂಶಗಳು:-
>> ಹಿಂದುತ್ವದ ಪರ ಮತ್ತು ಎದುರಾಳಿ ಪಕ್ಷಗಳ ವಿರುದ್ಧ ಆಕ್ರಮಣಕಾರಿ ನಿಲುವು.
>> ಯಾರೋಂದಿಗೂ ಸೈದ್ಧಾಂತಿಕ ವಿಚಾರವಾಗಿ ರಾಜಿ ಮಾಡಿಕೊಳ್ಳದೆ ಇರುವ ಸ್ವಭಾವ. 
>> ತಮ್ಮ ಮಾತುಗಳ ಮೂಲಕ ಎದುರಾಳಿಯ ವಿರುದ್ಧ ಮುಗಿಬೀಳುವ ಪ್ರವೃತ್ತಿ.
>> ಆಡಳಿತ ಪಕ್ಷಕ್ಕೆ ನೇರವಾಗಿ ತಮ್ಮ ಮಾತುಗಳ ಮೂಲಕ ತಿರುಗೇಟು ಕೊಡುತ್ತಾರೆ ಎಂಬ ಅಭಿಪ್ರಾಯ. 
>> ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿಎಲ್ ಸಂತೋಷ್ ತಂಡದಲ್ಲಿ  ಗುರುತಿಸಿ ಕೊಂಡಿರುವುದು.
>> ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ ಅನುಭವ.


ನಕರಾತ್ಮಕ ಅಂಶಗಳೇನು? 
>> ಪಕ್ಷದ ಶಿಸ್ತು ಹಾಗೂ ಚೌಕಟ್ಟನ್ನು ಪದೇ ಪದೇ ಮೀರುತ್ತಿರುವುದು. 
>> ಪಕ್ಷದಲ್ಲಿ ಹಲವು ಹಿರಿಯ ನಾಯಕರ ಜೊತೆಗಿನ ವೈಯಕ್ತಿಕ ಭಿನ್ನಾಭಿಪ್ರಾಯ. 
>> ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣದ ವಿರೋಧವನ್ನು ಕಟ್ಟುಕೊಂಡಿರುವುದು. 
>> ವಿವಾದಾತ್ಮಕ ಹೇಳಿಕೆಗಳ ಮೂಲಕ ವೈಯಕ್ತಿಕ ವರ್ಚಸ್ಸಿಗೆ ಹಿನ್ನಡೆಯಾಗಿರುವುದು. 
>> ಸದನದಲ್ಲಿ ಸಂಸದೀಯ ನಡವಳಿಕೆಯನ್ನು ರೂಢಿಸುತ್ತಿಲ್ಲ ಎಂಬ ಆರೋಪ.   


ಇದನ್ನೂ ಓದಿ- 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ 


ಇವುಗಳು ಬಸವರಾಜ ಬೊಮ್ಮಾಯಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಕುರಿತಾಗಿ ಇರುವ ಅಭಿಪ್ರಾಯಗಳಾಗಿವೆ. ಇದರ ಹೊರತಾಗಿ ವಿಪಕ್ಷ ನಾಯಕ ಸ್ಥಾನಕ್ಕೆ ಆರ್‌. ಅಶೋಕ್ ಹಾಗೂ ಅಶ್ವತ್ಥ ನಾರಾಯಣ ಹೆಸರುಗಳು ಕೇಳಿಬರುತ್ತಿವೆ. ಇನ್ನೇನು ಜುಲೈ 3 ರಿಂದ ಜಂಟಿ ಅಧಿವೇಶನ ನಡೆಯಲಿದೆ. ಅದಕ್ಕೂ ಮೊದಲು ವಿಪಕ್ಷ ನಾಯಕನ ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ