ಡಿಸಿಎಂ ಇವತ್ತು ಯಾಕೆ ಸಿ ಟಿ ರೌಂಡ್ಸ್ ಮಾಡಲಿಲ್ಲ?: ಹೆಚ್ ಡಿ ಕುಮಾರಸ್ವಾಮಿ ತೀಕ್ಷ್ಣ ಪ್ರಶ್ನೆ
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಆಗಿದ್ದರೂ ಅವರು ಇನ್ನೂ ಯಾಕೋ ನಗರ ಪ್ರದಕ್ಷಿಣೆಗೆ ಹೋಗಿಲ್ವಾ? ಶೋ ಕೊಡುವುದಕ್ಕೆ ಕಳೆದ ವಾರ ಹೋಗಿದ್ದರಲ್ಲ? ಆಗ ಏನು ಕ್ರಮ ಕೈಗೊಂಡಿದ್ದರು?
ಬೆಂಗಳೂರು: ಕಳೆದ ರಾತ್ರಿ ಇಷ್ಟು ಮಳೆ ಸುರಿದರೂ ಮಾನ್ಯ ಡಿಸಿಎಂ ಸಾಹೇಬರು ಯಾಕೆ ಸಿಟಿ ರೌಂಡ್ಸ್ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದರು.
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಆಗಿದ್ದರೂ ಅವರು ಇನ್ನೂ ಯಾಕೋ ನಗರ ಪ್ರದಕ್ಷಿಣೆಗೆ ಹೋಗಿಲ್ವಾ? ಶೋ ಕೊಡುವುದಕ್ಕೆ ಕಳೆದ ವಾರ ಹೋಗಿದ್ದರಲ್ಲ? ಆಗ ಏನು ಕ್ರಮ ಕೈಗೊಂಡಿದ್ದರು? ಕೆರೆಗಳನ್ನು ನುಂಗಿ ನೀರು ಕುಡಿದರಲ್ಲಾ? ಯಾವ ಪುರುಷಾರ್ಥಕ್ಕೆ ನಗರ ಪ್ರದಕ್ಷಿಣೆ ಮಾಡುತ್ತಾರೆ? ಡಿಸಿಎಂ ಅಂತಿದ್ರಪ್ಪ.. ಹೋಲ್ ನೈಟ್ ಓಡಾಡ್ತೀನಿ ಅಂತ. ಅದೇನು ನಿದ್ದೆ ಮಾಡ್ತಾ ಇದ್ರೊ ಗೊತ್ತಿಲ್ಲ ಎಂದು ಕುಟುಕಿದರು.
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪತ್ನಿ ಯಾರು ಗೊತ್ತಾ? ಪತಿಯಂತೆ ಇವರು ಕೂಡ ಸಖತ್ ಫೇಮಸ್!
ಪ್ರಜ್ವಲ್ ಪ್ರಕರಣ ಸರ್ಕಾರ ಮತ್ತು ಎಸ್ ಐಟಿಗೆ ಬಿಟ್ಟಿದ್ದು:
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರ ಏನಿದ್ದರೂ ತನಿಖೆ ಮಾಡುತ್ತಿರುವ ಎಸ್ ಐಟಿ ಹಾಗೂ ಸರಕಾರಕ್ಕೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ಘಟನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಒಂದು ತಿಂಗಳಿಂದ ನೋಡಿದ್ದೇನೆ. ಅವರು ವಿದೇಶದಿಂದ ವಾಪಸ್ ಬಂದು ಎಸ್ ಐಟಿ ಮುಂದೆ ಹಾಜರಾಗಬೇಕು ಎಂದು ನಾನು ಮತ್ತು ದೇವೇಗೌಡರು ಹೇಳಿದ್ದೆವು. ಜತೆಗೆ ದೇವೇಗೌಡರು ಕೊನೆಯ ಎಚ್ಚರಿಕೆ ನೀಡಿದ್ದರು. ನಮ್ಮ ಮಾತಿನಂತೆ ಅವರು ಬಂದು ಹಾಜರಾಗಿದ್ದಾರೆ. ಅಲ್ಲಿಗೆ ನಮ್ಮ ಕುಟುಂಬದ ಪಾತ್ರ ಮುಗಿಯಿತು. ಇನ್ನು ಎಸ್ ಐಟಿ ಮತ್ತು ಸರ್ಕಾರದ್ದೇ ಜವಾಬ್ದಾರಿ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಈಗ ಅವರು ವಾಪಸ್ ಬಂದಿದ್ದಾರೆ. ತನಿಖೆ ನಡೆಯುತ್ತಿದೆ. ಅವರು ಗೆದ್ದ ಮೇಲೆ ಏನೂ ಅಂತ ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಭವಾನಿ ರೇವಣ್ಣ ಅವರಿಗೆ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಕಾನೂನು ಪ್ರಕಾರ ಭವಾನಿ ರೆವಣ್ಣ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಪದೇ ಪದೆ ಮಾತನಾಡುವುದಿಲ್ಲ ಎಂದರು.
ಮತದಾನೋತ್ತರ ಸಮೀಕ್ಷೆ ಬಗ್ಗೆ ಕಾಂಗ್ರೆಸ್ ಮಾಡಿರುವ ಟೀಕೆಯ ಬಗ್ಗೆ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು, ಇದು ಮೋದಿ ಎಕ್ಸಿಟ್ ಪೋಲ್, ಮಿಡಿಯಾ ಎಕ್ಸಿಟ್ ಪೋಲ್ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದು ಅವರ ಅಭಿಪ್ರಾಯ. ನಾಳೆ ಮಧ್ಯಾಹ್ನದವರೆಗೆ ಅವರು ಸಂತೋಷವಾಗಿರಲಿ. ಅವರ ಸಂತೋಷಕ್ಕೆ ನಾನು ಯಾಕೆ ಅಡ್ಡಿಪಡಿಸಲಿ, ಅವರು ಸಂತೋಷವಾಗಿರಲಿ ಬಿಡಿ ಎಂದರು.
ಲೋಕಸಭೆ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕೊನೆಪಕ್ಷ 25 ಸೀಟು ಗೆಲ್ಲುತ್ತೇವೆ. ಮತಗಟ್ಟೆ ಸಮೀಕ್ಷೆ ಇದನ್ನೇ ಹೇಳುತ್ತಿದೆ. ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದರು.
ದೇಶದಲ್ಲಿ ಎನ್’ಡಿಎ ಪರವಾದ ಅಲೆ ಇದೆ. ಮೂರನೇ ಬಾರಿಗೆ ಮೋದಿ ಸರ್ಕಾರ ಬರುವುದು ಖಚಿತ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಉತ್ತಮ ಫಲಿತಾಂಶ ನೀಡಲಿದೆ. ಅದನ್ನೇ ಮತಗಟ್ಟೆ ಸಮೀಕ್ಷೆ ಹೇಳಿದೆ. ವಿಧಾನಸಭೆ ಚುನಾವಣೆ ನಂತರ ಕೇಂದ್ರದ ಗೃಹ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮೈತ್ರಿಗೆ ಒಪ್ಪಿದರು. ಎರಡೂ ಪಕ್ಷಗಳ ಮೈತ್ರಿಯಲ್ಲಿ ಒಟ್ಟಾಗಿ ಹೋಗಬೇಕೆಂದು ಸಲಹೆ ನೀಡಿದರು. ಮೈತ್ರಿಯಾಗಿ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡಿದ್ದೆವೆ ಎಂದರು.
ಪ್ರಧಾನಿ 200ಕ್ಕೂ ಹೆಚ್ಚು ಪ್ರಚಾರ ಸಭೆ ನಡೆಸಿದ್ದರು. ಕರ್ನಾಟಕದಲ್ಲಿ ಎನ್ ಡಿಎ ಗೆಲುವಿಗೆ ಅವರು ಕಾಣಿಕೆ ದೊಡ್ಡದು. ಅದಕ್ಕಾಗಿ ನಾನು ಪ್ರಧಾನಿಗಳು ಸೇರಿ ಅಮಿತ್ ಶಾ, ನಡ್ಡಾ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು ಅವರು.
ಕಾರ್ಯಕರ್ತರ ಇಚ್ಛೆಯಂತೆ ಜವರಾಯಿಗೌಡರಿಗೆ ಪರಿಷತ್ ಟಿಕೆಟ್
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎನ್.ಜವರಾಯಿಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕು ಎನ್ನುವುದು ಪಕ್ಷದ ಬಯಕೆ ಆಗಿತ್ತು. ಎಲ್ಲರ ಒಕ್ಕೊರಲ ಮಾತು ಆಗಿತ್ತು ಎಂದು ಹೇಳಿದರು.
ಪಕ್ಷದ ಎಲ್ಲಾ ಶಾಸಕರ ಜತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗಿದೆ. ಜವರಾಯಿಗೌಡ ಅವರು ಯಶವಂತಪುರ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಸಲ ಸೋಲು ಕಂಡಿದ್ದರು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಕಾರ್ಯಕರ್ತರಿಂದ ಒತ್ತಾಯವಿತ್ತು. ಈ ಹಿನ್ನೆಲೆಯಲ್ಲಿ ಜವರಾಯಿಗೌಡ ಅವರೇ ಅಭ್ಯರ್ಥಿಯಾಗಿದ್ದಾರೆ ಎಂದರು.
ಇದನ್ನೂ ಓದಿ: ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್
ಜವರಾಯಿಗೌಡ ಗೌಡರ ಜತೆಗೆ ಬಿ.ಎಂ.ಫಾರೂಕ್ ಮತ್ತು ಕುಪೇಂದ್ರ ರೆಡ್ಡಿ ಅವರ ಹೆಸರುಗಳ ಬಗ್ಗೆಯೂ ಚರ್ಚೆ ಆಗಿತ್ತು. ಫಾರೂಕ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಕೊನೆಗೆ ಫಾರೂಕ್ ಅವರೇ ಕಾರ್ಯಕರ್ತರ ಆಸೆಯಂತೆ ಜವರಾಯಿಗೌಡ ಸ್ಪರ್ಧೆ ಮಾಡಲಿ ಅಂತ ಹೇಳಿದರು ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ