ಪೊಲೀಸಪ್ಪನಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ.. ರಕ್ಷಣೆ ನೀಡಬೇಕಿದ್ದ ಆರಕ್ಷಕನಿಂದಲೇ ಟಾರ್ಚರ್!
Dowry Case : ಆತ ಜನರ ಸಾಮಾನ್ಯರಿಗೆ ರಕ್ಷಣೆ ಕೊಡಬೇಕಾಗಿದ್ದ ಆರಕ್ಷಕ. ಆದರೆ ಸ್ವತಃ ತನ್ನ ಪತ್ನಿ ಪಾಲಿಗೆ ರಾಕ್ಷಸನಾಗಿದ್ದಾನೆ. ಮಾರಣಾಂತಿಕ ಕಾಯಿಲೆಗೆ ತುತ್ತಾದ ಪತ್ನಿಗೆ ವರದಕ್ಷಿಣೆಗಾಗಿ ನಿತ್ಯ ಪೀಡಿಸುತಿದ್ದಾನೆ.
Tumkuru : ಟ್ರಾಫಿಕಲ್ಲಿ ನಿಂತು ಎಡಕ್ಕೆ ಚಲಿಸಿ, ಬಲಕ್ಕೆ ಚಲಿಸಿ ಎಂದು ವಾಹನ ಸವಾರರಿಗೆ ದಾರಿ ತೋರುವ ಈ ಟ್ರಾಫಿಕ್ ಪೊಲೀಸ್ ಪೇದೆಯ ಸಂಸಾರದ ದಾರಿಯೇ ತಪ್ಪಿದೆ. ಹೌದು, ತುಮಕೂರು ಸಂಚಾರಿ ಠಾಣೆಯ ಪೊಲೀಸ್ ಪೇದೆಯಾಗಿರುವ ಸುನಿಲ್ ಕುಮಾರ್ ತನ್ನ ಪತ್ನಿ ಸಹನಾಗೆ ವರದಕ್ಷಿಣೆ ಕಿರುಕುಳ ನೀಡುತಿದ್ದಾನಂತೆ.
ಹಾಗಾಗಿ ಪತ್ನಿ ಸಹನಾ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಸುನಿಲ್ ಕುಮಾರ್ ತುಮಕೂರಿನ ಆದರ್ಶ ನಗರದಲ್ಲಿ ಮನೆಕಟ್ಟುತಿದ್ದು ಮನೆ ಕಂಪ್ಲೀಟ್ ಮಾಡಬೇಕಾದರೆ 24 ಲಕ್ಷ ರೂ ಬೇಕಾಗಿದ್ದು ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದಾನಂತೆ.
ಪೊಲೀಸ್ ಲಾಠಿಯಿಂದ ನಿತ್ಯ ಸಹಾನಾಗೆ ಸುನಿಲ್ ಹೊಡೆಯುತಿದ್ದಾನಂತೆ. ಇದರ ಪರಿಣಾಮ ಸಹನಾಳ ಪೃಷ್ಠ ಭಾಗಕ್ಕೆ ಬಾಸುಂಡೆ ಎದ್ದಿದೆ. ಮಚ್ಚು ಕುತ್ತಿಗೆಗೆ ಹಿಡಿದು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನಂತೆ. ಈ ಕಿರುಕುಳದಿಂದ ನೊಂದ ಸಹನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.
ಇದನ್ನೂ ಓದಿ-"ಇನ್ನು ನಿಮ್ಮ ಈ ಆಟಗಳು ನಡೆಯವುದಿಲ್ಲ ಮಿಸ್ಟರ್ ಮೋದಿಜೀ"
ಅಂದಹಾಗೆ ಸುನಿಲ್ ಮದುವೆಯಾಗಿದ್ದು ಸ್ವತಃ ಸೋದರ ಮಾವನ ಮಗಳನ್ನು. ಕಳೆದ ಒಂದೂವರೆ ವರ್ಷದ ಹಿಂದೆ ಅರಸೀಕೆರೆಯಲ್ಲಿ ಸಹನಾ ಕುಟುಂಬದವರು ಸುಮಾರು 18 ಲಕ್ಷ ರೂ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ರು. 25 ಗ್ರಾಂ ಚಿನ್ನದ ಸರ, 12 ಗ್ರಾಂನ ಚಿನ್ನದ ಉಂಗುರ, 30 ಗ್ರಾಮ್ ನ ಬಳೆ ವರದಕ್ಷಿಣೆಯಾಗಿ ಕೊಡಿಸಿದ್ದಾರೆ.
ಈ ನಡುವೆ ಮದುವೆಗೆ ಮೂರು ದಿನ ಬಾಕಿ ಇರುವಾಗ ಸಹನಾಗೆ ಬ್ರೈನ್ ಟ್ಯೂಮರ್ ಕಾಣಿಸಿಕೊಂಡಿತ್ತಂತೆ. ಈ ವಿಚಾರ ಗೊತ್ತಿದ್ದರೂ ವರದಕ್ಷಿಣೆ ಆಸೆಗೆ ಮದುವೆಯಾಗಿದ್ದಾನೆ. ಸಹನಾ ಈಗ ಚಿಕಿತ್ಸೆಯಲ್ಲಿ ಇದ್ದರೂ ನಿರ್ದಯಿ ಸುನಿಲ್ ವರದಕ್ಷಿಣೆಗಾಗಿ ಪೀಡಿಸುತಿದ್ದಾನಂತೆ.
ಸಹನಾ ಕೊಟ್ಟ ದೂರಿನನ್ವಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿಯನ್ನು ಬಂಧಿಸುವಂತೆ ಪತ್ನಿ ಪಟ್ಟು ಹಿಡಿದಿದ್ದಾಳೆ. ಒಟ್ಟಾರೆ ಪೊಲೀಸಪ್ಪನ ದುರಾಸೆಯಿಂದ ಸಂಸಾರದ ಗುಟ್ಟು ರಟ್ಟಾಗುವಂತೆ ಮಾಡಿದೆ.
ಇದನ್ನೂ ಓದಿ-Photo Gallery: ಕೃಷ್ಣೆಯ ಜಲಧಿಗೆ ಸಿಎಂ ಸಿದ್ದರಾಮಯ್ಯ ಬಾಗೀನ ಅರ್ಪಣೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.