ಖಾಸಗಿ ವಸತಿ ಶಾಲೆಯಲ್ಲಿ ಕಾಡಾನೆ ಹಿಂಡು: ಬೀಟಮ್ಮನಿಗೆ ಬೆದರಿದ ಜಿಲ್ಲಾಡಳಿತ, 9 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ
ಬೇಲೂರು, ಸಕಲೇಶಪುರದಲ್ಲಿ ದಾಂದಲೆ ನಡೆಸಿದ್ದ 30 ಕಾಡಾನೆಗಳ ತಂಡ ಸದ್ಯ ಬೀಟಮ್ಮ ಗ್ಯಾಂಗ್ ಎಂತಲೇ ಪ್ರಸಿದ್ದಿಯಾಗಿದ್ದು, ಇದೀಗ ಈ ಗ್ಯಾಂಗ್ ಚಿಕ್ಕಮಗಳೂರು ನಗರ ಸಮೀಪದ ಅಂಬರ್ ವ್ಯಾಲಿ ಶಾಲೆಯ ಆವರಣಲ್ಲಿ ಬೀಡುಬಿಟ್ಟಿವೆ. ಈ ತಂಡದಲ್ಲಿ ನರಹಂತಕ ಒಂಟಿ ಸಲಗ ಭೀಮ ಕೂಡ ಇರುವುದು ಆತಂಕ ಹೆಚ್ಚಿಸಿದೆ.
ಅದು 30 ಜನರ ಬೀಟಮ್ಮನ ಭಯಂಕರ ಗ್ಯಾಂಗ್. ಆ ಗ್ಯಾಂಗಿನ ಒಬ್ಬೊಬ್ಬನ ಅಬ್ಬರವು ಒಂದೊಂದು ತರ. ಹಾಸನದ ಬೇಲೂರು-ಸಖಲೇಶಪುರ ಜನ ಆ ಗ್ಯಾಂಗಿನಿಂದ ಕಂಗಾಲಾಗಿದ್ದರು. ಆದರೀಗ, ಆ ಬೀಟಮ್ಮನ ಗ್ಯಾಂಗ್ ಕಾಫಿನಾಡಿಗೆ ಲಗ್ಗೆ ಇಟ್ಟಿದ್ದು ಚಿಕ್ಕಮಗಳೂರು ನಗರ ಜನ ಜೀವ ಕೈಯಲ್ಲಿಡಿದು ಬದುಕ್ತಿದ್ದಾರೆ. ತನ್ನ ತಂಡದ 30 ಜನರೊಂದಿಗೆ ಚಿಕ್ಕಮಗಳೂರಿಗೆ ಎಂಟ್ರಿಯಾಗಿರೋ ಬೀಟಮ್ಮ ವಸತಿ ಶಾಲೆಗೆ ಎಂಟ್ರಿ ಕೊಟ್ಟು ಭಯ ಹುಟ್ಟಿಸಿದ್ದಾಳೆ. ಆ ಬೀಟಮ್ಮ ಯಾರು... ಬೀಟಮ್ಮ ಅಂದ್ರೆ ಏನು... ಆಕೆಯ ತಂಡ ಯಾವುದು... ಬೀಟಮ್ಮ ಗ್ಯಾಂಗ್ ಅಂದರೆ ಯಾಕ್ ಭಯ ಅಂತೀರಾ.... ಈ ಸ್ಟೋರಿ ಓದಿ....
ಹೌದು... ಚಿಕ್ಕಮಗಳೂರು ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಅಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ 30 ಕಾಡಾನೆಗಳ ತಂಡ ಬೀಟಮ್ಮ ಗ್ಯಾಂಗ್ ಬೀಡು ಬಿಟ್ಟಿದ್ದು ವಸತಿ ಶಾಲೆಯ 500ಕ್ಕೂ ಹೆಚ್ಚು ಮಕ್ಕಳು, ಸಿಬ್ಬಂದಿಗಳ ಜೊತೆ ಅಕ್ಕಪಕ್ಕದ 10 ಹಳ್ಳಿಯ ಜನ ಆತಂಕಕ್ಕೀಡಾಗಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಬೀಟಮ್ಮ ಗ್ಯಾಂಗ್ ನೋಡಿ ಶಾಕ್ ಆಗಿದ್ದಾರೆ.
ಬೀಟಮ್ಮ ಗ್ಯಾಂಗ್ ಸೇರಿರೋ ನರಹಂತಕ ಭೀಮ:
ಬೇಲೂರು, ಸಕಲೇಶಪುರದಲ್ಲಿ ದಾಂದಲೆ ನಡೆಸಿದ್ದ 30 ಕಾಡಾನೆಗಳ ತಂಡ ಸದ್ಯ ಬೀಟಮ್ಮ ಗ್ಯಾಂಗ್ ಎಂತಲೇ ಪ್ರಸಿದ್ದಿಯಾಗಿದ್ದು, ಇದೀಗ ಈ ಗ್ಯಾಂಗ್ ಚಿಕ್ಕಮಗಳೂರು ನಗರ ಸಮೀಪದ ಅಂಬರ್ ವ್ಯಾಲಿ ಶಾಲೆಯ ಆವರಣಲ್ಲಿ ಬೀಡುಬಿಟ್ಟಿವೆ. ಈ ತಂಡದಲ್ಲಿ ನರಹಂತಕ ಒಂಟಿ ಸಲಗ ಭೀಮ ಕೂಡ ಇರುವುದು ಆತಂಕ ಹೆಚ್ಚಿಸಿದೆ. ಚಿಕ್ಕಮಗಳೂರು ಅರಣ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಕಾಡಾನೆಗಳ ಹಿಂಡು ನಗರಕ್ಕೆ ಎಂಟ್ರಿಯಾಗ್ತಿದ್ದಂತೆ ನಾಕಬಂಧಿ ರಚಿಸಿದ್ದಾರೆ. ಮೂಗ್ತಿಹಳ್ಳಿ, ಆದಿಶಕ್ತಿ ನಗರ, ಆದಿಹಳ್ಳಿ, ಕೆ.ಆರ್.ಪೇಟೆ, ವಳಗೇರಹಳ್ಳಿ, ನಂದಿಕೆರೆ, ಕೆಂಚನಹಳ್ಳಿ, ಮಳಲೂರು ಸೇರಿದಂತೆ ಹತ್ತಾರು ಹಳ್ಳಿಯ ಜನ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದು ಹಳ್ಳಿಯಿಂದ ನಗರಕ್ಕೆ, ನಗರದಿಂದ ಹಳ್ಳಿಗೆ ಸಂಚಾರ ಮಾಡದಂತೆ ಸೂಚನೆ ನೀಡಿದೆ. ಆದರೆ, ಇಡೀ ದಿನ ನಿಂತಲ್ಲೇ ನಿಂತ ಕಾಡಾನೆಗಳು ರಾತ್ರಿ ತಮ್ಮ ಪಯಣವನ್ನು ಯಾವ ಕಡೆ ಆರಂಭಿಸುತ್ತಾವೋ ಅನ್ನೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ- ಫೆ.27ಕ್ಕೆ ಕರ್ನಾಟಕದ 4 ಸೇರಿದಂತೆ 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ!
ಬೀಟಮ್ಮನ ತಂಡ ನಗರಕ್ಕೆ ನುಗ್ಗಿದ್ರೆ ಚಿಕ್ಕಮಗಳೂರು ಅಲ್ಲೋಲ-ಕಲ್ಲೋಲ! ಬೀಟಮ್ಮನಿಗೆ ಬೆದರಿದ ಜಿಲ್ಲಾಡಳಿತ, 9 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ:
ಅಂಬರ್ ವ್ಯಾಲಿ ವಸತಿ ಶಾಲೆಯ ಸುತ್ತಲೂ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಪಗಾವಲಿದ್ದಾರೆ. 30 ಕಾಡಾನೆಗಳ ತಂಡದಲ್ಲಿ ಐದಾರು ಮರಿಗಳು ಇದ್ದು ಆನೆ ಓಡಿಸೋದಕ್ಕೆ ಅರಣ್ಯ ಇಲಾಖೆ ಕೂಡ ಹಿಂದೇಟು ಹಾಕ್ತಿದೆ. ಮರಿಗಳಿರೋದ್ರಿಂದ ಆನೆಗಳು ಗಾಬರಿಯಾಗಿ ಚಿಕ್ಕಮಗಳೂರು ನಗರಕ್ಕೆ ಎಂಟ್ರಿಯಾದರೆ ದೊಡ್ಡ ಅನಾಹುತವಾಗುತ್ತೆಂದು ಅಧಿಕಾರಿಗಳು ಕೂಡ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. 30 ಆನೆಗಳು ಸುಮ್ನೆ ಹೋದ್ರೇನೆ ನಾಶ. ಅಂತದ್ರಲ್ಲಿ ಓಡಿಸಿದ್ರೆ ಕೇಳ್ಬೇಕಾ. ಸರ್ವನಾಶ. ಹಾಗಾಗಿ, ಅಧಿಕಾರಿಗಳು ಸೈಲೆಂಟಾಗಿದ್ದಾರೆ. ಆನೆ ಹೋಗುವ ದಾರಿ ಬಿಟ್ಟು ಉಳಿದ ಕಡೆ ಬಂದ್ ಮಾಡಿ ಪಟಾಕಿ ಸಿಡಿಸೋದಕ್ಕೆ ಅಧಿಕಾರಿಗಳು ಸಿದ್ಧರಾಗಿದ್ದರು. ಆದರೂ, ಬೀಟಮ್ಮನ ತಂಡ ಪಟಾಕಿಗೆ ಕ್ಯಾರೆ ಅಂದಿಲ್ಲ. ಆದರೆ, ಬಿಸಿಲಿನ ಝಳಕ್ಕೆ ಅಂಬರ್ ವ್ಯಾಲಿ ಖಾಸಗಿ ಶಾಲೆ ಒಳಭಾಗದಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳು ಯಾವ ಕಡೆಯೂ ಕದಲಿಲ್ಲ. ಮರದ ಕೆಳಗೆ ನಿಂತು ಕಾಲ ಕಳೆದಿವೆ. ಈ ತಂಡದಲ್ಲಿ ನರಹಂತಕ ಒಂಟಿ ಸಲಗ ಭೀಮ ಕೂಡ ಇರೋದು ಅಧಿಕಾರಿಗಳಿಗೂ ಟೆನ್ಷನ್ ತಂದಿದೆ. 30 ಆನೆಗಳೇ 2-3 ತಂಡ ವಾಗಿರೋದ್ರಿಂದ ಓಡಿಸೋದು ಅಧಿಕಾರಿಗಳಿಗೂ ಸವಾಲಾಗಿಸಿದೆ.
ಇದನ್ನೂ ಓದಿ- ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆಯರು ಸುಳ್ಳೋತ್ಪಾದಕರ ಮುಖಕ್ಕೆ ಉತ್ತರ ಕೊಡಿ: ಸಿಎಂ ಕರೆ
ಒಟ್ಟಾರೆ, ಹಾಸನ ಜಿಲ್ಲೆ ಬೇಲೂರು-ಸಕಲೇಶಪುರ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಬೀಟಮ್ಮ ಗ್ಯಾಂಗ್ ಕಾಫಿನಾಡಿಗರನ್ನ ಕಂಗಲಾಗಿಸಿದೆ. ಆನೆಗಳು ಖಾಸಗಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿರೋದ್ರಿಂದ ಶಾಲೆ ಮಕ್ಕಳು ಇಡೀ ದಿನ ಹೊರಬಂದಿಲ್ಲ. ಭಯದಲ್ಲೇ ಬದುಕ್ತಿದ್ದಾರೆ. ಆನೆ ಹೋದ್ರೆ ಸಾಕಪ್ಪ ಅಂತಿದ್ದಾರೆ. ಆದ್ರೆ, ಹೋಗ್ತಿಲ್ಲ. 30 ಕಾಡಾನೆಗಳ ತಂಡವಾಗಿರುವ ಬೀಟಮ್ಮ ಗ್ಯಾಂಗ್ ಕಾಫಿನಾಡಿಗರು ಹಾಗೂ ಅರಣ್ಯ ಇಲಾಖೆಗೆ ತಲೆನೋವು ತರಿಸಿರೋದಂತು ಸತ್ಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.