Dharma Dangal: ಇದು ಉತ್ತರ ಕರ್ನಾಕಟ ಭಾಗದಲ್ಲೇ ಅತ್ಯಂತ ವಿಜೃಂಬಣೆಯಿಂದ ‌ಆಚರಣೆ ಮಾಡುವ ಜಾತ್ರೆ, ಒಂದು ವಾರಗಳ ಕಾಲ‌ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಇಂತಹ ಜಾತ್ರೆಯಲ್ಲಿ ಹಿಂದುಯೇತರರನ್ನು ಹೊರತು ಪಡಿಸಿ ಅನ್ಯ ಧರ್ಮಿಯರಿಗೆ ಅಂಗಡಿ ಮುಂಗಟ್ಟು ಹಾಕಲು ಅವಕಾಶ ಕೊಡಬೇಡಿ ಎಂದು ಹಿಂದೂ ಮುಖಂಡರು ಮನವಿ ಕೊಡಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ...


COMMERCIAL BREAK
SCROLL TO CONTINUE READING

ಹೌದು, ಸಂಕ್ರಮಣ ವೇಳೆಯಲ್ಲಿ ನಡೆಯೋ ವಿಜಯಪುರದ ಶ್ರೀ ಸಿದ್ದೇಶ್ವರ ಜಾತ್ರೆಯ ವಿಚಾರದಲ್ಲಿ ಧರ್ಮ ದಂಗಲ್ ಶುರುವಾಗಿದೆ. ಮುಸ್ಲೀಂ ವ್ಯಾಪಾರಸ್ಥರಿಗೆ ಜಾತ್ರೆಯಲ್ಲಿ ಅವಕಾಶ ನೀಡಬಾರದೆಂದು ಶ್ರೀರಾಮ ಸೇನೆ ಹಾಗೂ ಇತರೆ ಹಿಂದೂ ಪರ ಸಂಘಟನೆಗಳಿಂದ ಒತ್ತಾಯ ಮಾಡಲಾಗುತ್ತಿದೆ. ಸಂಕ್ರಮಣದ ಸಂದರ್ಭದಲ್ಲಿ ವಿಜಯಪುರ ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಜಾತ್ರೆ ಒಂದು ವಾರದ ಕಾಲ ನಡೆಯುತ್ತದೆ. ಜಾತ್ರೆಯಲ್ಲಿ ಹಿಂದೂಗಳಿಗೆ ಹೊರತುಪಡಿಸಿ ಅನ್ಯಕೋಮಿನವರಿಗೆ ವ್ಯಾಪಾರ ವಹಿವಾಟು ಮಾಡಲು ಅನುಮತಿ ನೀಡಬಾರದು ಎಂದು ಶ್ರೀ ರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್ ಅವರ ನೇತೃತ್ವದಲ್ಲಿ ಹಿಂದುತ್ವದ ಫೈರ್ ಬ್ರ್ಯಾಂಡ್ ಅಂತಲೇ ಗುರುತಿಸಿಕೊಂಡಿರುವ ಹಾಗೂ ಸಿದ್ದೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಮನವಿ ಕೊಡಲು ಮುಂದಾಗಿದ್ದಾರೆ. 


ಇದನ್ನೂ ಓದಿ- ಕೋವಿಡ್‌ಗೆ ಆರೋಗ್ಯ ಇಲಾಖೆಯಿಂದ ಹೊಸ ಗೈಡ್‌ಲೈನ್ಸ್‌


ಸಿದ್ದೇಶ್ವರ ಸಂಸ್ಥೆಯ ಆಧ್ಯಕ್ಷರಾಗಿರೋ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಅವರಿಗೆ ಶ್ರೀರಾಮ ಸೇನೆ ಹಾಗೂ ಇತರೆ ಹಿಂದೂ ಪರ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಹಿಂದೂಗಳ ದೇವಸ್ಥಾನ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನ್ಯಕೋಮಿನವರಿಗೆ ನಿರ್ಬಂಧಿಸಲು ಮನವಿ ಸಲ್ಲಿಸಲು ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ‌ ಮಹಾಸಂಘ, ಹಿಂದೂ ಜನ ಜಾಗೃತಿ ಸಂಘದ ನಿರ್ಣಯ ಕೈಗೊಂಡು ಈ ಕುರಿತು ಪ್ರಸ್ತಾಪಿಸಲಾಗಿದೆ. ಅನ್ಯಮತೀಯರಿಗೆ ಹಿಂದೂಗಳ ದೇವಸ್ಥಾನ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ನಿರ್ಬಂಧಿಸಿರೋ ಅಂಗೀಕಾರ ಪ್ರಸ್ತಾಪಿಸಲಾಗಿದ್ದು ಶಾಸಕ ಯತ್ನಾಳ ಇದಕ್ಕೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. 


ಇದನ್ನೂ ಓದಿ- ಪ್ರಧಾನಿ ಮೋದಿಯವರನ್ನು ಭೇಟಿಯಾದ CM ಸಿದ್ಧರಾಮಯ್ಯ


ಕಳೆದ ವರ್ಷ ಕೂಡಾ ಅನ್ಯಧರ್ಮಿಯರಿಗೆ ಅವಕಾಶ ನೀಡಬಾರದು ಎಂದು ಹಿಂದು ಸಂಘಟನೆಯ ಮುಖಂಡರು ಮನವಿ ಮಾಡಿದ್ದರು, ಬಳಿಕ ಕೋವಿಡ್ ಕಾರಣದಿಂದಾಗಿ ಜಾತ್ರೆಯನ್ನು ವಿಜೃಂಬಣೆಯಿಂದ ಆಚರಣೆ ಮಾಡಲಿಲ್ಲ. ಹಾಗೆ ಈ ಬಾರಿ ವಿಜೃಂಬಣೆಯಿಂದ ಜಾತ್ರೆ ಆಚರಣೆ ಮಾಡಲು ಈಗಾಗಲೇ ಜಾತ್ರಾ ಕಮಿಟಿ‌ಯವರು ನಿರ್ಣಯ ಮಾಡಿದ್ದು, ಆದರೆ ಹಿಂದೂ ಸಂಘಟನೆಯ ಕಾರ್ಯಕರ್ತರು ಈಗ ಅನ್ಯಧರ್ಮಿಯರ ಮಳಿಗೆಗಳಿಗೆ ಅನುಮತಿ ಕೊಡಬೇಡಿ ಎಂದು ಮನವಿ ಕೊಡಲು ಮುಂದಾಗಿದ್ದಾರೆ. ಸಿದ್ದೇಶ್ವರ ಸಂಸ್ಥೆಯ ಆಡಳಿತ ಮಂಡಳಿಯವರು ಯಾವ ನಿರ್ಣಯ ಕೈಗೊಳ್ಳುತ್ತಾರೆ, ಮುಂಬರುವ ದಿನಗಳಲ್ಲಿ ಇದು ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.