ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು, ಕಾಂಗ್ರೇಸ್ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಬತ್ತಳಿಕೆಯಲ್ಲಿ ಬಾಣಗಳನ್ನು ತಯಾರಿಸಿಕೊಂಡಿವೆ.


COMMERCIAL BREAK
SCROLL TO CONTINUE READING

ಬಿಜೆಪಿಯ ಅಸ್ತ್ರಗಳು-


* ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.


* ಸಿದ್ದರಾಮಯ್ಯ ಸರ್ಕಾರದಲ್ಲಿ ಬಾರಿ ಹಗರಣ ನಡೆದಿದೆ, ಈ ಕುರಿತಾಗಿ ದಾಖಲೆಗಳನ್ನು ಇಂದೇ ಬಿಡುಗಡೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.


* ಕೇಂದ್ರ ಸರ್ಕಾರ ನೀಡಿರುವ ಹಣವನ್ನು ರಾಜ್ಯಸರ್ಕಾರ ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಂಡಿಲ್ಲ ಎಂಬ ಆರೋಪ.


* ವಿದ್ಯುತ್ ಹಗರಣ.


ಜೆಡಿಎಸ್ ಅಸ್ತ್ರಗಳು-


* ಏತನೀರಾವರಿ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವುದರ  ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ.


* ಸರ್ಕಾರ ಚಕ್ ಪೋಸ್ಟ್ಗಳಲ್ಲಿ ಹಣ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಲು ಜೆಡಿಎಸ್ ಸಜ್ಜಾಗಿದೆ.


ಕಾಂಗ್ರೇಸ್ ಪ್ರತಿತಂತ್ರ-


* ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿರುವ ವಿದ್ಯುತ್ ಹಗರಣವನ್ನು ತಿಳಿಸುವ ಮೂಲಕ ಬಿಜೆಪಿ ಬಾಯಿಮುಚ್ಚಿಸಲು ಸಿದ್ದು ಸರ್ಕಾರ ತಯಾರಿದೆ.


* ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ನ್ಯಾಯವಾಗಿ ಬರಬೇಕಾದ ಅನುದಾನದಲ್ಲಿ ಕಡಿಮೆಯಾಗಿರುವ ರೂ.10,000 ಕೋಟಿಯನ್ನು ಕೊಡಿಸುವಂತೆ ಆಗ್ರಹಿಸುವ ಸಾಧ್ಯತೆ ಇದೆ.


ಈ ರೀತಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತಂತ್ರ-ಪ್ರತಿತಂತ್ರಗಳ ಬತ್ತಳಿಕೆಗೆ ಬೆಳಗಾವಿಯ ಸುವರ್ಣ ಸೌಧ ಸಾಕ್ಷಿಯಾಗಲಿದೆ.