ಬೆಂಗಳೂರು: ಸಮಾಜದಲ್ಲಿ ಅದ್ರಲ್ಲೂ ನಮ್ಮ‌ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾ ಅನ್ನೋ ಆತಂಕ ಇದೀಗ ಎದುರಾಗಿದೆ. ಯಾಕಂದ್ರೆ ಪುರುಷ ಪ್ರಧಾನ ಸಮಾಜದಲ್ಲಿ ದಿನೆ ದಿನೆ ಮಹಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಶಿಖರ ಏರುತ್ತಿದ್ರು, ಮನೆಯೊಳಗಿನ ಕಹಿ ಘಟನೆಗಳಿಗೆ ಮಾತ್ರ ಕೊನೆಯಾಗುತ್ತಿಲ್ಲ ಅನ್ನೋದು ವಿವಿಧ ರೂಪದಲ್ಲಿ ಭಹಿರಂಗ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Mango Shake Side Effects : ಬೇಸಿಗೆಯಲ್ಲಿ ಅತಿಯಾಗಿ ಸೇವಿಸದಿರಿ ಮ್ಯಾಂಗೋ ಶೇಕ್, ಎದುರಾಗಬಹುದು ಈ ಸಮಸ್ಯೆ


ಹೌದು.. ಹೆಣ್ಣು ಎಷ್ಟೆ ಎತ್ತರಕ್ಕೆ ಬೆಳೆದರೂ ಪುರುಷ ಪ್ರಧಾನ ಸಮಾಜದಲ್ಲಿ ಮಾತ್ರ ನೋವು ಅನುಭವಿಸುವಂತ ಕೆಲಸ ದಿನೆ ದಿನೆ ಹೆಚ್ಚಳವಾಗ್ತಿದೆ. ಅದ್ರಲ್ಲೂ  ಸಂಗಾತಿ, ಕುಟುಂಬ ದೌರ್ಜನ್ಯ ಸೇರಿದಂತೆ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲೆ ಹಿಂಸೆ ಎನ್ನುವಂತದ್ದು ಹೆಚ್ಚಾಗಿದೆ.


ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇಯಲ್ಲಿ ಕರ್ನಾಟಕ ರಾಜ್ಯ ಸಂಗಾತಿಗೆ ಹಿಂಸಿಸುವ ವಿಚಾರದಲ್ಲಿ ಮೊದಲ ಸ್ಥಾ‌ನ ಗಿಟ್ಟಿಸಿಕೊಂಡಿದೆ. ಶೇ. 48% ರಷ್ಟು ಮಹಿಳೆಯರಿಗೆ ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುತ್ತಾರೆ ಎಂಬುದು NHFS ಕೊಟ್ಟಿರುವ ವರದಿಯಲ್ಲಿ ಬಹಿರಂಗವಾಗಿದೆ.


ಬಿಹಾರ ರಾಜ್ಯವನ್ನ ಮೀರಿಸಿದ ಕರ್ನಾಟಕ


ಮಹಿಳೆಯರ ಮೇಲೆ ದೌರ್ಜನ್ಯ, ಅದ್ರಲ್ಲೂ ಪತಿಯಿಂದ ಪತ್ನಿಯ ಮೇಲೆ ಆಗುತ್ತಿರುವ ಹಿಂಸಾಚಾರ ವಿಚಾರದಲ್ಲಿ ಬಿಹಾರ ಈ ಹಿಂದೆ ಮೊದಲ ಸ್ಥಾನ ಪಡೆದುಕೊಂಡಿತ್ತು. ಆದ್ರೆ ಈಗಿನ NHFS ನ ಪ್ರಸ್ತುತ ವರದಿ ಆಧಾರದಲ್ಲಿ ಬಿಹಾರ 43% ಇದ್ದರೆ, ಕರ್ನಾಟಕ ಶೇಕಡ 48% ರಷ್ಟು ಇದೆ ಎಂದು ಹೇಳಲಾಗಿದೆ.


ಯಾವ ರೀತಿಯ ಹಲ್ಲೆ..?


ಪತಿಯಿಂದ ವಿವಿಧ ರೀತಿಯ ಹಲ್ಲೆಗೆ ಒಳಪಡುತ್ತಿರುವ ಮಹಿಳೆ


ಶೇ. 7ರಷ್ಟು ಮಹಿಳೆಯರಿಗೆ ಕಣ್ಣಿನ ಗಾಯ, ಕೈ ಕಾಲು ಮುರಿತ, ಬರೆಯಂತಹ ಹಲ್ಲೆ


ಶೇ. 6ರಷ್ಟು ಮಹಿಳೆಯರಿಗೆ ತೀವ್ರ ಥರದ ಗಾಯ, ಮೂಳೆ ಮುರಿತ, ಹಲ್ಲು ಮುರಿತ


ಶೇ. 3ರಷ್ಟು ಮಹಿಳೆಯರಿಗೆ ಬೆಂಕಿಯಿಂದ ಸುಡುವ ಚಿತ್ರಹಿಂಸೆ


ಇದನ್ನೂ ಓದಿ: ಅಸಹಾಯಕ ಡಿಕೆಶಿಯನ್ನು ಅಧೀರರನ್ನಾಗಿಸುವ ಹಿಂದೆ ಮೀರ್‌ಸಾದಿಕ್‌ ತಂತ್ರವಿದೆಯೇ?: ಬಿಜೆಪಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.