ಬೆಂಗಳೂರು: Work From Home - ಕರೋನಾ ಸೋಂಕಿನಿಂದಾಗಿ, ಹೆಚ್ಚಿನ ಕಚೇರಿಗಳಲ್ಲಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮನೆಯಿಂದ ಕೆಲಸದ ಸಂಸ್ಕೃತಿ (Work From Home Extend) ಹೆಚ್ಚಾಗಿದೆ. ಆದರೆ ಕರ್ನಾಟಕದಿಂದ ಹೊಸ ಪ್ರಕರಣವೊಂದು ಹೊರಹೊಮ್ಮಿದೆ. ಇಲ್ಲಿ ಉದ್ದೇಶಿತ ಮೆಟ್ರೋ ಕಾಮಗಾರಿ ಹೊರ ವರ್ತುಲ ರಸ್ತೆಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಜನರು ಪ್ರಯಾಣಿಸಲು ತೊಂದರೆ ಅನುಭವಿಸುವಂತಾಗಿದೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂದು, ಎಲೆಕ್ಟ್ರಾನಿಕ್ಸ್, ಐಟಿ, ಟಿವಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ (Karnataka Govt To IT Companies On ORR) ಅಲ್ಲಿನ ಎಲ್ಲ ಕಂಪನಿಗಳಿಗೆ ಪತ್ರವನ್ನು ಕಳುಹಿಸಲಾಗಿದೆ. ಈ ಪತ್ರದಲ್ಲಿ, ಕಂಪನಿಗಳಿಗೆ ಡಿಸೆಂಬರ್ 2022 ರವರೆಗೆ ಮನೆಯಿಂದಲೇ ಕೆಲಸವನ್ನು ವಿಸ್ತರಿಸಲು ಸಲಹೆ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಅಡ್ವೈಸರಿ ಜಾರಿ
ಮೆಟ್ರೊ ರೈಲು ನಿಗಮವನ್ನು ಉಲ್ಲೇಖಿಸಿ, ಈ ಪತ್ರದಲ್ಲಿ 'ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಹೊರ ವಲಯದ ರಸ್ತೆಯಲ್ಲಿರುವ ಕೆಆರ್ ಪುರಂವರೆಗಿನ ಉದ್ದೇಶಿತ ಮೆಟ್ರೋ (Metro Sake) ಮಾರ್ಗವು ಉದ್ಯೋಗಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಎಲೆಕ್ಟ್ರಾನಿಕ್ಸ್ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಈ ಕೆಲಸ ಒಂದೂವರೆ ವರ್ಷದಿಂದ ಎರಡು ವರ್ಷಗಳವರೆಗೆ ಮುಂದುವರಿಯಬಹುದು ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕಂಪನಿಗಳು ತಮ್ಮ ಉದ್ಯೋಗಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮನೆಯಿಂದ ಕೆಲಸ ಮುಂದುವರಿಸಬಹುದು ಎಂದು ಹೇಳಿದ್ದಾರೆ.


ಈ ಸಲಹೆ ನೀಡಲಾಗಿದೆ
ಇನ್ನೊಂದೆಡೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ.ಮಂಜುಳಾ, ಮನೆಯಿಂದ ಕೆಲಸವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದರೆ, ನಾವು ಅದನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಬಸ್, ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸಲು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದ್ದಾರೆ. ಏಕೆಂದರೆ ಕಂಪನಿಗಳಿಗೆ ನಮ್ಮ ವತಿಯಿಂದ ಕೇವಲ ಸಲಹೆ ನೀಡಲಾಗಿದೆ. ಕಂಪನಿ ತನ್ನ ಅನುಕೂಲಕ್ಕೆ ತಕ್ಕಂತೆ ಅದನ್ನು ಪರಿಗಣಿಸಬಹುದು ಎಂದು ಆಯುಕ್ತೆ ಹೇಳಿದ್ದಾರೆ.


ಇದನ್ನೂ ಓದಿ-NEP : 'ದೇಶದಲ್ಲಿ 'ಹೊಸ ರಾಷ್ಟ್ರೀಯ ಶಿಕ್ಷಣ ನೀತಿ' ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ'


ಯೋಚಿಸಿ ಕಂಪನಿ ನಿರ್ಧಾರ ಕೈಗೊಳ್ಳಲಿದೆ
ಈ ಕುರಿತು ಹೇಳಿಕೆ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ. ವಿ. ರಮಣರೆಡ್ಡಿ, ಇದು ಕೇವಲ ಒಂದು ಸಲಹೆಯಾಗಿದೆ. ಆದರೆ, ಇದರ ಮೇಲೆ ವಿಚಾರ ನಡೆಸುವುದು ಹಾಗೂ ಅದನ್ನು ಜಾರಿಗೊಳಿಸುವುದು ಕಂಪನಿಗೆ ಬಿಟ್ಟ ವಿಚಾರವಾಗಿದೆ ಎಂದಿದ್ದಾರೆ. ಇದು ಕಂಪನಿಗಳಿಗೆ ಕಡ್ಡಾಯವಾಗಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ, ಕಂಪನಿ ವರ್ಕ್ ಫ್ರಮ್ ಆಫಿಸ್ ಕೂಡ ಆರಂಭಿಸಬಹುದು ಎಂದು ರಮಣರೆಡ್ಡಿ ಹೇಳಿದ್ದಾರೆ. ನೌಕರರಿಗೆ ಯಾವುದೇ ರೀತಿಯ ತೊದರೆಯಾಗಬಾರದು ಎಂಬ ಉದ್ದೇಶದಿಂದ ವಿಭಾಗ ಈ ಸಲಹೆ ಜಾರಿಮಾಡಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೋಂದಣಿಯಾಗಿದ್ದ ರೋಲ್ಸ್ ರಾಯ್ಸ್ ಕಾರು ಕರ್ನಾಟಕ ಸಾರಿಗೆ ಇಲಾಖೆ ವಶಕ್ಕೆ


ಸುಮಾರು 12 ಸಾವಿರ ನೌಕರರು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ
ಸುಮಾರು 12 ಸಾವಿರ ಉದ್ಯೋಗಿಗಳು ಹೊರ ವರ್ತುಲ ರಸ್ತೆ ಕ್ಷೇತ್ರದಲ್ಲಿರುವ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಇದರಲ್ಲಿ ಕೇವಲ ಶೇ.5ರಷ್ಟು  ಉದ್ಯೋಗಿಗಳು ಮಾತ್ರ ಮರಳಿ ಆಫೀಸ್ ಗೆ ಬರುತ್ತಿದ್ದಾರೆ. ಸಿಸ್ಕೋ ಶಾಶ್ವತ ಆಧಾರದ ಮೇಲೆ ವರ್ಕ್ ಫ್ರಮ್ ಹೋಮ್ ಕಾರ್ಯಗತಗೊಳಿಸಿದೆ ಮತ್ತು ಎಸ್‌ಎಪಿ, ವಾಲ್‌ಮಾರ್ಟ್, ಇಂಟೆಲ್‌ನಂತಹ ಕಂಪನಿಗಳು ಇದರ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.


ಇದನ್ನೂ ಓದಿ-ಮಕ್ಕಳಿಗೆ ಕೊರೊನಾದಿಂದ ಸ್ವಾತಂತ್ರ್ಯ ಸಿಕ್ಕಿದೆ: ಮಲ್ಲೇಶ್ವರಂ ಕಾಲೇಜಿನಲ್ಲಿ ಸಿಎಂ ಬೊಮ್ಮಾಯಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ