ಕಾರ್ಮಿಕರ ಮುಷ್ಕರ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳು ಸ್ಥಗಿತ
ವೇತನ ಪರಿಷ್ಕಾರಕ್ಕಾಗಿ ಕಾರ್ಮಿಕರು ಕಳೆದ 1 ರಿಂದ ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರ ಹಿತದೃಷ್ಟಿಯಿಂದ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳದಿರುವ ಹಿನ್ನಲೆಯಲ್ಲಿ ಕಾರ್ಮಿಕರು ಇಂದು ಧರಣಿ ನಡೆಸುತ್ತಿದ್ದು ಎರಡೂ ಕಾರ್ಖಾನೆಗಳು ಸ್ಥಗಿತಗೊಂಡಿವೆ.
ಚಾಮರಾಜನಗರದ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಇಂದು ಕಾರ್ಮಿಕರ ಮುಷ್ಕರದ ಬಿಸಿ ತಟ್ಟಿದ್ದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಳಗಂಚಿ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರಿನಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಇಂದು ಸ್ಥಗಿತಗೊಂಡಿವೆ.
ವೇತನ ಪರಿಷ್ಕಾರಕ್ಕಾಗಿ ಕಾರ್ಮಿಕರು ಕಳೆದ 1 ರಿಂದ ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರ ಹಿತದೃಷ್ಟಿಯಿಂದ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳದಿರುವ ಹಿನ್ನಲೆಯಲ್ಲಿ ಕಾರ್ಮಿಕರು ಇಂದು ಧರಣಿ ನಡೆಸುತ್ತಿದ್ದು ಎರಡೂ ಕಾರ್ಖಾನೆಗಳು ಸ್ಥಗಿತಗೊಂಡಿವೆ.
ಇದನ್ನೂ ಓದಿ- H3N2 Update: ಕರ್ನಾಟಕದಲ್ಲಿ ಇನ್ಫ್ಲುಯೆಂಜಾ ವೈರಸ್ ದಾಳಿಗೆ ಮೊದಲ ಸಾವು ದೃಢ, ಭಯ ಹುಟ್ಟಿಸುತ್ತಿದೆ ಹೊಸ ವೈರಸ್!
ಕಾರ್ಮಿಕರ ಒತ್ತಾಯವೇನು..?
2018ರಲ್ಲಿ ಸಂಬಂಧಿಸಿದಂತೆ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ ಸರ್ಕಾರ ಹಾಗೂ ಮಾಲೀಕರ ವಿಳಂಬ ನೀತಿಯಿಂದ ನಾಲ್ಕು ವರ್ಷ ತಡವಾಗಿ 2022 ಜುಲೈನಲ್ಲಿ ವೇತನ ಪರಿಷ್ಕರಣೆ ಆಗಿದೆ. 2022 ರ ವೇತನ ಪರಿಷ್ಕರಣೆ ಅನುಸಾರ ಸಂಬಳ ನೀಡಬೇಕೆಂಬುದು ಕಾರ್ಮಿಕರ ಒತ್ತಾಯಿಸಿದ್ದಾರೆ. ಆದರೆ, ಇದಕ್ಕೆ ಸಕರಾತ್ಮಕವಾಗಿ ಒಪ್ಪದ ಆಡಳಿತ ಮಂಡಳಿ ವೇತನ ಪರಿಷ್ಕರಣೆ ಬಗ್ಗೆ ಚಕಾರವೂ ಎತ್ತುತ್ತಿಲ್ಲ.
ಇದನ್ನೂ ಓದಿ- ಕೊಳ್ಳೇಗಾಲದಲ್ಲಿ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಬಹಿಷ್ಕಾರ ಪ್ರಕರಣ: 12 ಮಂದಿ ಬಂಧನ
ಕಳೆದ,10 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟಿಸಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದಿದ್ದರಿಂದ ಕಾರ್ಮಿಕರು ಇಂದು ಕೆಲಸ ಬಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ. ಸದ್ಯ, ಎರಡೂ ಕಾರ್ಖಾನೆ ಸ್ಥಗಿತಗೊಂಡಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.