ಬೆಂಗಳೂರು : ಮಲ್ಲೇಶ್ವರಂನ ಯದುಗಿರಿ ಯತಿರಾಜ ಮಠದ ಪೀಠಾಧೀಶ್ವರ ರಾಮಾನುಜ ಜೀಯರ್ ಸ್ವಾಮಿ ಅವರಿಗೆ ಅನೇಕ ಮೂಲಭೂತ ಗುಂಪುಗಳು ಮತ್ತು ಪಿಎಫ್‌ಐನ "ಹಿಟ್ ಸ್ಕ್ವಾಡ್" ನಿಂದ ಬೆದರಿಕೆ ಗ್ರಹಿಕೆಯಿಂದಾಗಿ ವೈ ಭದ್ರತೆಯನ್ನು ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ)ವು ವೈ ಕ್ಯಾಟಗಿರಿ ಭದ್ರತೆ ನೀಡಲು ಕೇಂದ್ರ ಗೃಹ ಇಲಾಖೆ ಆದೇಶ ನೀಡಿದ್ದು, ಇಂದು ಅಥವಾ ನಾಳೆ ಬಹುತೇಕ ವೈ ಕ್ಯಾಟಗಿರಿ ಭದ್ರತೆಗೆ ಒದಗಿಸೋ ಸಾಧ್ಯತೆ ಇದೆ. ಸದ್ಯ ಮಲ್ಲೇಶ್ವರಂ ಪೊಲೀಸರಿಂದ ಮಠದ ಬಳಿ ಭದ್ರತೆಗೆ ನಿಯೋಜನೆ ನೀಡಲಾಗಿದೆ.ಮಠದ ಬಳಿಯೇ  ಹೊಯ್ಸಳ ವಾಹನ ನಿಂತಿದ್ದು, ಮಠಕ್ಕೆ ಬರೋ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದಂತೆ ಭದ್ರತೆ ನೀಡಲಾಗಿದೆ. 


ಇದನ್ನೂ ಓದಿ : R Ashok : ಸಿಎಂ ಆಯ್ಕೆ ಹೈ ಕಮಾಂಡ್ ನಿರ್ಧಾರ : ಸಚಿವ ಆರ್ ಅಶೋಕ್ 


ವೈ ಕ್ಯಾಟಗಿರಿಯ ಭದ್ರತೆ ಹೇಗಿರುತ್ತೆ ಗೊತ್ತಾ?


ವೈ ಕ್ಯಾಟಗಿರಿ ಭದ್ರತೆಯಲ್ಲಿ 28 ಪೊಲೀಸ್ ಸಿಬ್ಬಂದಿ ಇರುತ್ತಾರೆ. ಅದ್ರಲ್ಲಿ ಇಬ್ಬರು ಕಮಾಂಡರ್ ಗಳು ಇರ್ತಾರೆ. ಉಳಿದಂತೆ ಸ್ಥಳೀಯ ಪೊಲೀಸರನ್ನೇ ಭದ್ರತೆಗೆ ನಿಯೋಜನೆ ಮಾಡುತ್ತಾರೆ. ಅವರಿಗೆ ವಾಹನದ ವ್ಯವಸ್ಥೆಯನ್ನು ಸರ್ಕಾರವೇ ಮಾಡುತ್ತೆ. ಭದ್ರತೆ ಪಡೆದವರು ಎಲ್ಲಿಯೇ ಹೋಗಲಿ ವೈ ಕ್ಯಾಟಗಿರಿ ಸೆಕ್ಯುರಿಟಿ ಜೊತೆಯಲ್ಲೇ ಇರುತ್ತೆ. 


ಇಬ್ಬರು ಕಮಾಂಡರ್ ಎರಡು ಶಿಫ್ಟ್ ಕೆಲಸ ಮಾಡ್ತಾರೆ, ಇವರು ಸೆನ್ ಗನ್ ಬಳಕೆ ಮಾಡುತ್ತಾರೆ. 9 ಜನ ಪೊಲೀಸ್ ಸಿಬ್ಬಂದಿ 9 ಎಂಎಂ ಪಿಸ್ತೂಲ್ ಬಳಕೆ ಮಾಡ್ತಾರೆ. ಸಾರ್ವಜನಿಕ ಸಭೆಗಳಿಗೆ ಹೋದ್ರೆ ಬಾಂಬ್ ಡಿಟೆಕ್ಟರ್ ತಗೊಂಡು ಹೋಗುತ್ತಾರೆ. ಯತಿರಾಜ ಮಠದ ಸ್ವಾಮೀಜಿ ಮೂರು ರಾಜ್ಯಗಳಲ್ಲಿ ಭದ್ರತೆ ಒದಗಿಸಿದ್ದಾರೆ. ತೆಲಂಗಾಣ, ಆಂಧ್ರಾ ಹಾಗೂ ಕರ್ನಾಟಕದಲ್ಲಿ ವೈ ಕ್ಯಾಟಗಿರಿ ಭದ್ರತೆ ನೀಡಲಾಗಿದೆ. ವೈ ಕ್ಯಾಟಗಿರಿ ಭದ್ರತೆ ಯಲ್ಲಿ ಮೂರು ಜನ ಪರ್ಸನಲ್ ಸೆಕ್ಯುರಿಟಿ ಆಫೀಸರ್(PSO) ಇರ್ತಾರೆ. ಇವರು ಮೂರು ಪಾಳಿಯಲ್ಲಿ ಮೂರು ಜನ ಕೆಲಸ ಮಾಡುತ್ತಾರೆ. ಯಾವಾಗಲೂ ಸ್ವಾಮೀಜಿಯ ಜೊತೆ ಒಬ್ಬರು PSO ಇದ್ದೆ ಇರುತ್ತಾರೆ. 


ಸ್ವಾಮಿಯವರಿಗೆ ಇಂಟೆಲಿಜೆನ್ಸ್ ಬ್ಯೂರೋ (IB) ದ ಬೆದರಿಕೆ ಗ್ರಹಿಕೆ ವರದಿಯ ಆಧಾರದ ಮೇಲೆ ಕೇಂದ್ರ ಗೃಹ ಇಲಾಖೆಯ ಕೇಂದ್ರ ಭದ್ರತೆಯನ್ನು ನೀಡಿದೆ.


ಒಟ್ಟು 8-10 ಭದ್ರತಾ ಸಿಬ್ಬಂದಿಗಳು ವೈ ವರ್ಗದ ಭದ್ರತೆ 24×7 ನಲ್ಲಿ ತೊಡಗಿಸಿಕೊಳ್ಳುತ್ತಾರೆ, ಇದರಲ್ಲಿ ಐದು ಸಶಸ್ತ್ರ ಸ್ಟ್ಯಾಟಿಕ್ ಗಾರ್ಡ್‌ಗಳನ್ನು ಅವರ ಮನೆಯಲ್ಲಿ ಒದಗಿಸಲಾದ BIP ನ ಭದ್ರತೆಯಲ್ಲಿ ಅಳವಡಿಸಲಾಗಿದೆ.


ಇದನ್ನೂ ಓದಿ : ಚಾಮರಾಜನಗರ: ವ್ಯಾಘ್ರನ ಕೊಂದು ಕೆರೆಯಲ್ಲಿ ಬಿಸಾಡಿದ ಹುಲಿ ಹಂತಕರು...!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.