ಬೆಂಗಳೂರು  :  ಶೇರ್ ಮಾರ್ಕೆಟ್ ನಲ್ಲಿ ಹಣ ಹೂಡಿದರೆ ಹೆಚ್ಚಿನ‌ ಟಿಪ್ಸ್ ಗಳಿಸಬಹುದು ಹಾಗೆಯೇ ಶೇರ್ ಎಕ್ಸ್ಚೇಂಜ್ ನಲ್ಲಿ ಹಣ ಹೂಡಿದರೆ ಲಾಭಗಳಿಸಬಹುದೆಂದು ನಂಬಿಸಿ ಜನರಿಗೆ ವಂಚಿಸುತ್ತಿದ್ದ ಬಳ್ಳಾರಿ ಗ್ಯಾಂಗ್ ಅನ್ನು ಯಲಹಂಕ CEN ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಳ್ಳಾರಿ ಜಿಲ್ಲೆ ಶಿರಗುಪ್ಪ ಮೂಲದ 3 ಜನರ ಈ ಗ್ಯಾಂಗ್ ಯಲಹಂಕ ಮೂಲದ ವ್ಯಕ್ತಿಯಿಂದ ಶೇರ್ ಎಕ್ಸ್ಚೇಂಜ್ ನಲ್ಲಿ 2.50000 ಹೂಡಿಕೆ ಮಾಡಿಸಿದ್ದರು. ಇದರಿಂದ ನಷ್ಟವಾಗಿತ್ತು. ಇನ್ನು ಸ್ಟಾಕ್ ಮಾರ್ಕೆಟ್ ನಲ್ಲಿ ಹೆಚ್ಚಿನ ಟಿಪ್ಸ್ ಗಳಿಸಬಹುದೆಂದು ನಂಬಿಸಿ, ದೂರುದಾರರ ಖಾತೆಯಿಂದ 2.15000 ಲಕ್ಷ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಕೇಳಿದರೆ ಸಬೂಬು ನೀಡಿ ಸಿಮ್ ಬದಲಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಕಂಗೆಟ್ಟ ಸಂತ್ರಸ್ಥ ಯಲಹಂಕದ CEN ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಇದನ್ನೂ ಓದಿ : ಕೊರೊನಾ ರೂಪಾಂತರಿ ತಳಿ ಪತ್ತೆಗೆ BBMP ಹೊಸ ಅಸ್ತ್ರ: STP ನೀರಲ್ಲಿ ವೈರಸ್ ಪತ್ತೆ!


ಇನ್ನು ದೂರ ದಾಖಲಿಸಿಕೊಂಡ ಯಲಹಂಕ CEN ಪೊಲೀಸರು ಬಳ್ಳಾರಿಯ ಸಿರಗುಪ್ಪದಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ರೆಹಮತುಲ್ಲಾ, ಮಲ್ಲಯ್ಯಸ್ವಾಮಿ ಹಾಗು ದುರ್ಗಪ್ಪ ಎಂಡು ಗುರುತಿಸಲಾಗಿದೆ. ಬಂಧಿತರಿಂದ ವಂಚನೆಗೆ ಬಳಸುತ್ತಿದ್ದ 3 ಮೊಬೈಲ್ , 6 ಸಿಮ್ ಕಾರ್ಡ್ ವಶಕ್ಕೆ ಪಡೆದ ಪೊಲೀಸರು ಮೂವರನ್ನು ಕಸ್ಟಡಿಗೆ ತೆಗದುಕೊಂಡಿದ್ದಾರೆ. 


ಇದೆ ವೇಳೆ ಮಾತನಾಡಿದ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಸಾರ್ವಜನಿಕರು ಹೀಗೆ ವಂಚಕರ ಬಲೆಗೆ ಬೀಳಬಾರದು ಎಂದು  ಮನವಿ ಮಾಡಿದ್ದಾರೆ. ಇಂಥಹ ವನ್ಚಕರಿನದ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. 


ಇದನ್ನೂ ಓದಿ : 1 ಕೋಟಿಗೆ ತಲುಪಿದ ಬೆಂಗಳೂರು ವಾಹನಗಳ ಸಂಖ್ಯೆ! ವಿಷವಾಗುತ್ತಾ ಉಸಿರಾಡುವ ಗಾಳಿ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.