ಪೇಜಾವರ ಶ್ರೀಗಳಿಗೆ ವೈ ಶ್ರೇಣಿಯ ಭದ್ರತೆ…ಶ್ರೀಪಾದರಿಗೆ ಈ ಪರಿಯ ಸೆಕ್ಯೂರಿಟಿಗೆ ಕಾರಣ ಏನು?
ಉಡುಪಿ ಅಷ್ಟ ಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಗೆ ರಾಜ್ಯ ಸರಕಾರ ವೈ ಶ್ರೇಣಿಯ ಭದ್ರತೆ ಒದಗಿಸಿದೆ.
ಬೆಂಗಳೂರು : ಉಡುಪಿ ಅಷ್ಟ ಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರಿಗೆ ರಾಜ್ಯ ಸರಕಾರ ವೈ ಶ್ರೇಣಿಯ ಭದ್ರತೆ ಒದಗಿಸಿದೆ. ಗುರುವಾರದಿಂದಲೇ ಶ್ರೀಪಾದರಿಗೆ ವೈ ಶ್ರೇಣಿಯ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಶ್ರೀಪಾದರಿಗೆ ಯಾಕೆ ವೈ ಶ್ರೇಣಿ ಭದ್ರತೆ. ?
ಪೇಜಾವರ ಮಠದ ( Pejawara Mutt) ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಆಯೋಧ್ಯಾ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೂ ಹೌದು. ಶ್ರೀರಾಮ ಮಂದಿರ ನಿರ್ಮಾಣ ಅಭಿಯಾನದಲ್ಲಿ ಶ್ರೀಪಾದರು ಸಕ್ರಿಯ ಪಾತ್ರ ವಹಿಸಿದ್ದಾರೆ. ಪ್ರಸ್ತುತ ರಾಮಮಂದಿರ (Rama Mandir) ನಿರ್ಮಾಣ ಅಭಿಯಾನದಲ್ಲಿ ಶ್ರೀಗಳು ಸಂಪೂರ್ಣವಾಗಿ ಮಗ್ನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಭಾರತದ ಮೂಲೆ ಮೂಲೆಗಳಿಗೆ ಸಂಚಾರ ಮಾಡುತ್ತಿದ್ದಾರೆ. ಅಯೋಧ್ಯಾ (Ayodhya) ರಾಮಮಂದಿರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿರುವ ಕಾರಣ, ಕೆಲವೊಂದು ವಿಧ್ವಂಸಕ ಶಕ್ತಿಗಳು ಸ್ವಾಮಿಗಳನ್ನು ಟಾರ್ಗೆಟ್ ಮಾಡುವ ಅಪಾಯ ಎದುರಾಗಿತ್ತು. ಸ್ವಾಮೀಜಿಗಳಿಗೆ ಒದಗಿ ಬಂದಿರುವ ಅಪಾಯದ ವಿಚಾರವನ್ನು ಅವಲೋಕಿಸಿದ ರಾಜ್ಯ ಗೃಹ ಸಚಿವಾಲಯ ಅವರಿಗೆ ವೈ ಶ್ರೇಣಿಯ ಭದ್ರತೆ (Y CatagorySecurity) ಒದಗಿಸಿದೆ.
ALSO READ : ಅಂಗವಿಕಲ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ : ಅರ್ಜಿ ಆಹ್ವಾನ
ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಶಾಸಕ ರಘುಪತಿ ಭಟ್ :
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ರಘುಪತಿ ಭಟ್ (Raghupathi Bhatt) ವಿಶ್ವ ಪ್ರಸನ್ನ ತೀರ್ಥರಿಗೆ ಭದ್ರತೆ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಅವಲೋಕಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (B S Yadiyurappa) ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ (Basavaraj Bommai) ಸ್ವಾಮೀಜಿಯವರಿಗೆ ಶ್ರೇಣಿಯ ಭದ್ರತೆ ಕಲ್ಪಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ ಪೇಜಾವರ ಮಠ:
ವಿಶ್ವಪ್ರಸನ್ನ ತೀರ್ಥರಿಗೆ ವೈ ಶ್ರೇಣಿಯ ಭದ್ರತೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ಪೇಜಾವರ ಮಠ ಕೃತಜ್ಞತೆ ಸಲ್ಲಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿರುವ ಪ್ರವೀಣ್ ಸೂದ್ ಅವರಿಗೆ ಕೃತಜ್ಞತೆ ವ್ಯಕ್ತ ಪಡಿಸಿದೆ. ಸರ್ಕಾರಕ್ಕೆ ಪತ್ರ ಬರೆದಿರುವ ಶಾಸಕ ರಘುಪತಿ ಭಟ್ ಅವರಿಗೂ ಧನ್ಯವಾದ ತಿಳಿಸಲಾಗಿದೆ.
ALSO READ : BMTC : ವಿದ್ಯಾರ್ಥಿಗಳೇ ಹೊಸ ಬಸ್ ಪಾಸ್ ಮಾಡಿಸುವ ಚಿಂತೆ ಬೇಡ ; ಹಳೆಯ ಪಾಸಿನಲ್ಲೇ ಪ್ರಯಾಣ ಮಾಡಬಹುದು
ವೈ ಶ್ರೇಣಿಯ ಭದ್ರತೆ ಹೇಗಿರುತ್ತೆ?
ಅತಿಗಣ್ಯ ವ್ಯಕ್ತಿಗಳಿಗೆ ಒದಗಿಸುವ ಭದ್ರತಾ ವ್ಯವಸ್ಥೆ ಇದಾಗಿದೆ. ರಾಜ್ಯ ಗೃಹ ಇಲಾಖೆಯ ಶಿಫಾರಸ್ಸಿನಂತೆ ಪೊಲೀಸ್ ಇಲಾಖೆಯು ಈ ಭದ್ರತೆಯನ್ನು ಕಲ್ಪಿಸುತ್ತದೆ. ವೈ ಕೆಟಗರಿ ಭದ್ರತೆ ಕಲ್ಪಿಸಿರುವ ವ್ಯಕ್ತಿಯ ಭದ್ರತೆಗೆ 11 ಪೊಲೀಸರನ್ನು ನಿಯೋಜಿಸಲಾಗಿರುತ್ತದೆ. ಇವರಲ್ಲಿ ಇಬ್ಬರು ಕಮಾಂಡೋಗಳಿರುತ್ತಾರೆ. ವೈ ಶ್ರೇಣಿ ಭದ್ರತಾ ಸಿಬ್ಬಂದಿ ಸಂಪೂರ್ಣ ಶಸ್ತ್ರ ಸಜ್ಜಿತರಾಗಿರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.