ನವದೆಹಲಿ: ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಡಿಯೂರಪ್ಪನವರ ಬ್ರೇಕಿಂಗ್ ನ್ಯೂಸ್ ವಿಚಾರದ ಬಗ್ಗೆ ಪ್ರಸ್ತಾಪಿಸುತ್ತಾ "ಯಡಿಯೂರಪ್ಪನಿಗೆ ಜೀವನದಲ್ಲಿ ಸತ್ಯ ಹೇಳಿಯೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು


COMMERCIAL BREAK
SCROLL TO CONTINUE READING

ಇಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ  ಸಿದ್ದರಾಮಯ್ಯ "ಯಡಿಯೂರಪ್ಪನವರನ್ನು ನೀವು ನಂಬ್ತಿರಾ? ಅವರನ್ನು ಯಾಕೆ ಸುಮ್ಮನೆ ನಂಬುತ್ತಿರಿ, ಅವರಿಗೆ ಜೀವನದಲ್ಲಿ ಸುಳ್ಳೊಂದನ್ನು ಬಿಟ್ಟು ಸತ್ಯ ಹೇಳುವುದು ಗೊತ್ತೇ ಇಲ್ಲ, ಅವರಿಗೆ ಪಾಪ ಪ್ರಜ್ಞೆ ಕಾಡುತ್ತಿರುವುದರಿಂದ ಕಳೆದ ಒಂದು ವರ್ಷದಿಂದ ಹೀಗೆಲ್ಲ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ" ಎಂದರು. ಅಲ್ಲದೆ ಯಡಿಯೂರಪ್ಪ ಪ್ರಸ್ತಾಪಿಸಿದ ಆರ್ಥಿಕ ಅಂಕಿ ಅಂಶಗಳ ಬಗ್ಗೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ"ಯಡಿಯೂರಪ್ಪನಿಗೆ ಆರ್ಥಿಕತೆ ಬಗ್ಗೆ ಗೊತ್ತಿಲ್ಲ ,ಆರ್ಥಿಕತೆ ರಾಜ್ಯದಲ್ಲಿ ಉತ್ತಮವಾಗಿದೆ ಎಂದು ತಿಳಿಸಿದರು.