ನವದೆಹಲಿ: ಐಟಿ ಇಲಾಖೆಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗವಾದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಪುಲ್ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಿಮಿತ್ತ ದೆಹಲಿಗೆ ಆಗಮಿಸಿದ್ದ ಯಡಿಯೂರಪ್ಪನವರಿಗೆ ಈ ವಿಚಾರವಾಗಿ ಅಮಿತ್ ಶಾ ಪುಲ್ ಕ್ಲಾಸ್ ತಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ಯಡಿಯೂರಪ್ಪನವರು ಐಟಿ ಇಲಾಖೆಗೆ ಬರೆದ ಪತ್ರವನ್ನು ಇಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ ಬಹಿರಂಗಪಡಿಸಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಬಿಜೆಪಿ ಭಾರಿ ಮುಜುಗರಕ್ಕೆ ಇಡಾಗಿದೆ ಎನ್ನಲಾಗಿದೆ.ಪತ್ರ ಬಹಿರಂಗವಾದ ವಿಚಾರವನ್ನು ತಿಳಿದ ಅಮಿತ್ ಶಾ ಇಂದು ನಡೆದ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲಿ ಯಡಿಯೂರಪ್ಪನವರಿಗೆ ತರಾಟೆಗೆ ತಗೆದುಕೊಂಡಿದ್ದಾರೆ ಎನ್ನಲಾಗಿದೆ.


ಪತ್ರ ಬಹಿರಂಗವಾಗುವ ಮೊದಲು ಇದ್ಯಾವುದಕ್ಕೂ ತಮ್ಮ ಸಂಬಂಧವಿಲ್ಲವೆಂದು ಅಲ್ಲಗಳೆದಿದ್ದ ಯಡಿಯೂರಪ್ಪನವರು ಈಗ ಪತ್ರ ಸಮೇತ ಸಾಕ್ಷಿ ಸಿಕ್ಕಿದ್ದಕ್ಕೆ ಅವರು ಮುಜುಗರಕ್ಕೊಳಗಾಗಿ ದೆಹಲಿಯಿಂದ ಬೆಂಗಳೂರಿಗೆ ದಿಢೀರ್ ವಾಪಾಸ್ ಆಗಿದ್ದಾರೆ.ಅಲ್ಲದೆ ವಾಪಾಸ್ ಬಂದ ಉದ್ದೇಶವನ್ನು ಇದುವರೆಗೂ ಅವರು ಯಾರಿಗೂ ತಿಳಿಸಿಲ್ಲವೆಂದು ಹೇಳಲಾಗಿದೆ.