ಮತ್ತೆ ಸರ್ಕಾರ ರಚಿಸುವ ಯತ್ನದಲ್ಲಿದ್ದಾರೆಯೇ ಯಡಿಯೂರಪ್ಪ ?
ಬೆಂಗಳೂರು: ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸರಕಾರದಲ್ಲಿ ಹಗ್ಗ ಜಗ್ಗಾಟ ಮುಂದುವರೆದಿದ್ದು, ಇದರ ಲಾಭ ಪಡೆಯಲು ಬಿಜೆಪಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಯಡಿಯೂರಪ್ಪನವರು ಈಗ ಅಮಿತ್ ಷಾ ರವರೊಂದಿಗೆ ಮತ್ತೆ ಸರಕಾರ ರಚಿಸುವ ಕುರಿತಾಗಿ ಕಾರ್ಯತಂತ್ರ ರೂಪಿಸುತಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕುಮಾರಸ್ವಾಮಿಯವರು ತಾವು ಬಜೆಟ್ ಮಂಡಿಸುತ್ತೆವೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದ್ದರು. ಈಗ ಈ ಹೇಳಿಕೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಕನ್ನಡಿ ಹಿಡಿಯುತ್ತಿದೆ. ಆದ್ದರಿಂದ ಯಡಿಯೂರಪ್ಪ ಈಗ ಗುಜರಾತ್ ಗೆ ಪ್ರಯಾಣ ಬೆಳೆಸಿ ಅಮಿತ ಷಾ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಈಗ ಉಭಯಪಕ್ಷಗಳ ನಡುವೆ ತಲೆದೊರಿರುವ ಗೊಂದಲದ ಲಾಭ ಪಡೆಯಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.