ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಪಕ್ಷದ ವಕ್ತಾರರಾದ ಸಿ.ಲಕ್ಷ್ಮಣ್ ಅವರು ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರು ಮಾತನಾಡಿದರು


COMMERCIAL BREAK
SCROLL TO CONTINUE READING

ಬೆಂಗಳೂರು: ಯಡಿಯೂರಪ್ಪ ಅವರೇ ನಿಮಗೆ ಮೋಸ ಮಾಡಿದ ಕುಮಾರಸ್ವಾಮಿ ಅವರನ್ನು ಮತ್ತೆ ಹೇಗೆ ಸೇರಿಸಿಕೊಳ್ಳುತ್ತಿದ್ದೀರಿ. ನಿಮಗೆ ಸ್ವಾಭಿಮಾನ ಇಲ್ಲವೇ? ಎಂದು ಪಕ್ಷದ ವಕ್ತಾರರಾದ ಸಿ.ಲಕ್ಷ್ಮಣ್ ಅವರು ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರು ಪಕ್ಷದ ವಕ್ತಾರರಾದ ಸಿ.ಲಕ್ಷ್ಮಣ್ ಅವರು ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಪ್ರತಿಕಾಗೊಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.


ಬಿಜೆಪಿಯಲ್ಲಿ ಅಶೋಕ, ಅಶ್ವಥ ನಾರಾಯಣ ಅವರು ಮೂಲೆಗುಂಪಾಗಿ ಕಾಂಗ್ರೆಸ್ಗೆ ಬೈಯುತ್ತಿದ್ದಾರೆ. ಕುಮಾರಸ್ವಾಮಿ ಅವರೇ ನೈಸ್ ಹಗರಣದಲ್ಲಿ ಡಿ.ಕೆ.ಶಿವಕುಮಾರ್ ಅವರು 3 ಲಕ್ಷ ಕೋಟಿ ಹಣ ಮಾಡಿದ್ದಾರೆ ಎಂದು ಹೇಳುತ್ತಾರೆ, ಮಾಜಿ ಮುಖ್ಯಮಂತ್ರಿಗಳಿಗೆ 3 ಲಕ್ಷ ಕೋಟಿ ಎಂದರೆ ಎಷ್ಟು ಎಂಬುದೇ ಗೊತ್ತಿಲ್ಲ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯುವ ಕೆಲಸ ಮಾಡುತ್ತಿದ್ದಾರೆ ಕುಮಾರಸ್ವಾಮಿ ಅವರು.


ಇದನ್ನೂ ಓದಿ: Balasore train accident: ಮೂವರು ರೈಲ್ವೆ ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ


ಕಾವೇರಿ ನೀರಿನ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಮೋಸ ಹಾಗೂ ಕರ್ನಾಟಕ ಬಿಜೆಪಿ ನಾಯಕರ ಹೇಡಿತನದಿಂದ ನಮಗೆ ಹಿನ್ನಡೆಯಾಗುತ್ತಿದೆ. ಕೆಆರ್ಎಸ್ ನೀರಿನ ಮಟ್ಟ 97 ಅಡಿ ಇದೆ. 5.10 ಟಿಎಂಸಿ ನೀರು ಕಬಿನಿಯಲ್ಲಿ, ಹಾರಂಗಿಯಲ್ಲಿ 7.54, ಹೇಮಾವತಿಯಲ್ಲಿ 18 ಟಿಎಂಸಿ ನೀರು ಲಭ್ಯವಿದ್ದು ಒಟ್ಟು 43.19 ಟಿಎಂಸಿ ನೀರಿದೆ. ಡೆಡ್ ಸ್ಟೋರೇಜ್ 12 ಟಿಎಂಸಿ ಇದೆ. 


ಕೆಆರ್ಎಸ್ ಅಣೆಕಟ್ಟಿನ ಒಳಹರಿವು 2,881 ಕ್ಯೂಸೆಕ್ಸ್ ಇದ್ದು, ಹೊರ ಹರಿವು 1,681 ಕ್ಯೂಸೆಕ್ಸ್ ಇದೆ. ಕೇರಳದಲ್ಲಿ ಸ್ವಲ್ಪ ಮಳೆಯಾಗುತ್ತಿರುವ ಕಾರಣ ಕಬಿನಿಯ ಒಳಹರಿವು 4229 ಕ್ಯೂಸೆಕ್ಸ್ ಇದ್ದು ಹೊರಹರಿವು 1,100 ಕ್ಯೂಸೆಕ್ಸ್  ಇದೆ. ಎರಡು ಅಣೆಕಟ್ಟುಗಳ ಒಳಹರಿವು 7,114 ಕ್ಯೂಸೆಕ್ಸ್ ಮತ್ತು ಹೊರ ಹರಿವು 2,781 ಕ್ಯೂಸೆಕ್ಸ್ ಇದೆ. ಇದುವರೆಗು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಿರುವ ನೀರಿನ ಪ್ರಮಾಣ 37 ಟಿಎಂಸಿ. ಒಟ್ಟು 123 ಟಿಎಂಸಿ ನೀರನ್ನು ಹರಿಸಬೇಕಿತ್ತು ಸೆಪ್ಟೆಂಬರ್ ಕೊನೆಯ ವರೆಗೆ ನಾವು 42 ಟಿಎಂಸಿ ನೀರು ಹರಿಸಲಾಗಿದೆ.


ಕೇಂದ್ರ ಜಲ ನಿಯಂತ್ರಣ ಆಯೋಗ (CWRC) ಅಡಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೆಲಸ ಮಾಡುತ್ತದೆ. 16.06.2018 ರಂದು ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪನ್ನು ಕಾವೇರಿ ನೀರಿನ ವಿಚಾರವಾಗಿ ನೀಡಿತು. 18.05.2018 ರಲ್ಲಿ ನರೇಂದ್ರ ಮೋದಿ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಕಾವೇರಿ ನೀರಿನ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ಮಾಡಿ, ಕರ್ನಾಟಕಕ್ಕೆ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದೆ 01.06.2018 ರಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ರಚನೆ ಮಾಡುತ್ತದೆ. ಲೋಕಸಭೆಯಲ್ಲಿ ಯಾವುದೇ ಚರ್ಚೆಗ ಅವಕಾಶ ನೀಡದೆ ಕರ್ನಾಟಕದ ಕೈ ಕಟ್ಟಿ ಹಾಕಲಾಗುತ್ತದೆ. 


ಇದುವರೆಗು 2018 ಕೇಂದ್ರ ಜಲ ಆಯೋಗ 86, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 26 ಸಭೆಗಳನ್ನು ನಡೆಸಿದ್ದಾರೆ.  ಇಲ್ಲಿಯ ತನಕ ಈ ಆಯೋಗದವರು ಎಷ್ಟು ಪ್ರಮಾಣದ ನೀರನ್ನು ಬಿಡಬೇಕು ಎನ್ನುವ ಮಾರ್ಗದರ್ಶಿಯನ್ನೇ ತಿಳಿಸಿಲ್ಲ. ಸಾಮಾನ್ಯ ವರ್ಷದಲ್ಲಿ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ನಿರ್ಣಯ ಮಾಡಲಾಗಿದೆ ಅಷ್ಟೇ.


ಮಳೆ ಕಡಿಮೆಯಾದ ವರ್ಷದಲ್ಲಿ ಎಷ್ಟು ನೀರು ಬಿಡಬೇಕು ಎನ್ನುವ ಕುರಿತು ಸುಪ್ರೀಂಕೋರ್ಟ್ ಹೀಗೆ ಹೇಳಿದೆ. 4 ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದು ಮಳೆ ಪ್ರಮಾಣ ನೋಡಿಕೊಂಡು ನೀರು ಹರಿಸಬಹುದು ಎಂದು ಹೇಳಿದೆ. 12 ನೇ ತಾರಿಕಿನ ನಂತರ ನಮ್ಮ ಬಳಿ ನೀರಿಲ್ಲ ಎಂದು ನೀರನ್ನು ಹರಿಸುತ್ತಿಲ್ಲ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ನಿಲ್ಲಬೇಕಿರುವುದು ಬಿಜೆಪಿಯವರು. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಇವರುಗಳು ತುರ್ತು ಸಭೆಗೆ ಬರದೆ ತಪ್ಪಿಸಿಕೊಂಡರು. ಸಭೆ ನಡೆಸದೆ ಇದ್ದರೆ ತುರ್ತು ಸಭೆ ಮಾಡಿ ಎನ್ನುತ್ತೀರ, ಸಭೆ ನಡೆಸಿದರೆ ತುರ್ತು ಸಬೆ ಮಾಡಿದಿರಿ ಅದಕ್ಕೆ ಬರಲು ಆಗುವುದಿಲ್ಲ ಎನ್ನುತ್ತೀರ. ನಿಮ್ಮ ನಿಲುವುಗಳನ್ನು ಸರಿಯಾಗಿ ತಿಳಿಸಿ.


ಲೋಕಸಭಾ ಚುನಾವಣೆಗೆ ಕಾವೇರಿ ನೀರಿನ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವ ನಿಮಗೆ ನಾಚಿಕೆಯಾಗಬೇಕು. ಸಿದ್ದರಾಮಯ್ಯ ಅವರು ಕೇಂದ್ರ ನೀರಾವರಿ ಸಚಿವರು ಹಾಗೂ ನಿಯಂತ್ರಣ ಸಮಿತಿಗೆ ಪತ್ರ ಬರೆದು ತಮಿಳುನಾಡಿನ ಮೋಸವನ್ನು ಬಯಲಿಗೆ ಎಳೆದಿದ್ದಾರೆ. ಇದುವರೆಗು ತಮಿಳುನಾಡು 99.01  ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಕರ್ನಾಟಕ ಬಳಕೆ ಮಾಡಿಕೊಂಡಿರುವುದು ಕೇವಲ 24 ಟಿಎಂಸಿ ಮಾತ್ರ. 


ತಮಿಳುನಾಡಿನ ಬೆಳೆ ವಿಸ್ತೀರ್ಣ 1.08 ಲಕ್ಷ ಹೆಕ್ಟೇರ್ ಆದರೆ 5.26 ಲಕ್ಷ ಹೆಕ್ಟೇರ್ಗೆ ವಿಸ್ತರಣೆ ಮಾಡಿಕೊಂಡು ಹೆಚ್ಚುವರಿ ನೀರು ಬಳಕೆ ಮಾಡಲಾಗುತ್ತಿದೆ. ಇಷ್ಟೆಲ್ಲಾ ಮೋಸ ನಡೆಯುತ್ತಿದ್ದರೂ ಕೇಂದ್ರ ನೀರು ನಿಯಂತ್ರಣ ಆಯೋಗ ಏಕೆ ಸ್ಥಳ ವೀಕ್ಷಣೆಗೆ ಬರುತ್ತಿಲ್ಲ. ಬಿಜೆಪಿಯವರು ನೀರಾವರಿ ಸಮಿತಿಯವರಿಗೆ ನಿರ್ದೇಶನ ನಿಡುತ್ತಿದ್ದಾರೆ, ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿ ಎಂದು. ಆದರೆ ಕರ್ನಾಟಕದ ಬಿಜೆಪಿ ನಾಯಕರು ನೀರು ಬಿಡಬೇಡಿ ಎಂದು ನಾಟಕ ಮಾಡುತ್ತಿದ್ದಾರೆ. 


ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಪತ್ರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ಗೆ ಬರೆಯುತ್ತಾರೆ, ಅದು ಕೂಡಲೇ ನೀರು ನಿಯಂತ್ರಣ ಪ್ರಾಧಿಕಾರಕ್ಕೆ, ಕಾವೇರಿ ನೀರು ನಿರ್ವಹಣಾ ಆಯೋಗಕ್ಕೂ ಬರುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದ ಪತ್ರ ಎಲ್ಲಿಗೂ ಹೋಗುವುದಿಲ್ಲ, ಕೇಂದ್ರ ಸಂಸ್ಥೆಗಳು ಬಿಜೆಪಿಯ ನಿರ್ದೇಶನದಂತೆ ಕೆಲಸ ಮಾಡುತ್ತಿವೆ.


 ನಮ್ಮ ಬಳಿ ಒಟ್ಟು  43 ಟಿಎಂಸಿ ನೀರಿದ್ದು 33 ಟಿಎಂಸಿ ಕುಡಿಯಲು, 70 ಟಿಎಂಸಿ ಕೃಷಿಗೆ ಮತ್ತು 3 ಟಿಎಂಸಿ ನೀರು ಕೈಗಾರಿಕೆಗೆ ಬೇಕಾಗಿದೆ. ಹೀಗಿರುವಾಗ ಕರ್ನಾಟಕದ ಬಳಿ ಹರಿಸಲು ನೀರಿಲ್ಲ. 1.85 ಕೋಟಿ ಜನಸಂಖ್ಯೆ ಕುಡಿಯುವ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಹಿಂಗಾರು ಮಳೆ ಇನ್ನೇನು ಪ್ರಾರಂಭ ಆಗಲಿದ್ದು 60 ಟಿಎಂಸಿ ನೀರು ತಮಿಳುನಾಡಿಗೆ ಕೇವಲ ಮಳೆಯಿಂದ ಬರಲಿದೆ.


ಕುಮಾರಸ್ವಾಮಿ ಅವರೇ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಮಾನ್ಯ ಬಸವರಾಜ ಬೊಮ್ಮಾಯಿ ಅವರೇ ನೀವು ನೀರಾವರಿ ಸಚಿವರಾಗಿದ್ದವರು. ಬಹಿರಂಗ ಚರ್ಚೆಗೆ ಬಂದು ಕಾವೇರಿ ನೀರಿನ ವಿಚಾರವಾಗಿ ತಮ್ಮ, ಸಲಹೆ ಸೂಚನೆಗಳನ್ನು ನೀಡಿ. ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಹೀಗೆ ನೀರಿನ ವಿಚಾರದ ಮೂಲಕ ಮಾಡಬಾರದು.


ಇದನ್ನೂ ಓದಿ-ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕಬೇಕೆ? ಈ ಸೂಪರ್ ಡ್ರಿಂಕ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ!


ಬಿಜೆಪಿ- ಜೆಡಿಎಸ್ ಮತ್ತೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಹೋಗುತ್ತಿದ್ದಾರೆ. ಪಕ್ಷಗಳ ಶೇಕಡವಾರು ಮತಗಳಿಕೆ ಪ್ರಮಾಣ ಬಿಜೆಪಿ ಶೇ 36, ಜೆಡಿಎಸ್ 13, ಇತರೇ 6, ಕಾಂಗ್ರೆಸ್ ಪಕ್ಷ 42. ಯಾರೇ ಒಂದಾದರೂ ನಮ್ಮ ಕಾಂಗ್ರೆಸ್ ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚಾಗುತ್ತದೆ. ಜೆಡಿಎಸ್ಗೆ ಮತ ಹಾಕಿದ ಶೇ 6 ರಷ್ಟು ಅಲ್ಪಸಂಖ್ಯಾತರು, ದಲಿತ, ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ಗೆ ಮತಹಾಕಲಿದ್ದಾರೆ. 


ಬಿಜೆಪಿ 10 ವರ್ಷಗಳ ವೈಫಲ್ಯಗಳು ಹಾಗೂ ನಮ್ಮ ಗ್ಯಾರಂಟಿ ಯೋಜನೆಗಳು ಕೈ ಹಿಡಿಯಲಿವೆ. ಕಾಂಗ್ರೆಸ್ ಪಕ್ಷ 23 ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ. ಜೆಡಿಎಸ್ 123  ಸ್ಥಾನ ಗೆಲ್ಲುತ್ತೆ ಎಂದು ಹೇಳಿದ್ದ ಕುಮಾರಸ್ವಾಮಿ ಅವರು, ಗೆಲ್ಲದಿದ್ದ ಪಕ್ಷದಲ್ಲಿ ಪಕ್ಷ ವಿಜರ್ಜನೆ ಮಾಡುತ್ತೇನೆ ಎಂದು ಹೇಳೀ, ವಿಲೀನ ಮಾಡಿದ್ದಾರೆ. 


ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವ ಡಿ.ಕೆ.ಶಿವಕುಮಾರ್ ಅವರ ಏಳಿಗೆಯನ್ನು ಸಹಿಸದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿಕೊಳ್ಳಿ. ನಿಮ್ಮ 19 ಎಂಎಲ್ಎ ಗಳನ್ನು ಮೊದಲು ಉಳಿಸಿಕೊಳ್ಳಿ ಎಂದು  ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ