RX Bike Birthday Celebration : ಭರ್ಜರಿಯಾಗಿ Rx ಬೈಕ್ ಹುಟ್ಟು ಹಬ್ಬ ಆಚರಿಸಿದ ಯುವಕ!
ಇಲ್ಲೊಬ್ಬ ಯುವಕ ಕೇಕ್ ಕಟ್ ಮಾಡಿ ಭರ್ಜರಿಯಾಗಿ ತನ್ನ Rx ಬೈಕ್ ಹುಟ್ಟು ಹಬ್ಬ ಆಚರಣೆ ಮಾಡಿದ್ದಾನೆ.
ಕೊಪ್ಪಳ : ಪ್ರಸ್ತುತ ದಿನಗಳಲ್ಲಿ ಯುವಕರಿಗೆ ಆರ್.ಎಕ್ಸ್ ಬೈಕ್ ಕ್ರೇಜ್ ಎಷ್ಟಿದೆ ಎಂಬುವುದು ನಿಮಗೆಲ್ಲ ಗೊತ್ತಿರುವ ವಿಚಾರ, ಆದ್ರೆ ಇಲ್ಲೊಬ್ಬ ಯುವಕ ಕೇಕ್ ಕಟ್ ಮಾಡಿ ಭರ್ಜರಿಯಾಗಿ ತನ್ನ Rx ಬೈಕ್ ಹುಟ್ಟು ಹಬ್ಬ ಆಚರಣೆ ಮಾಡಿದ್ದಾನೆ.
ಜಿಲ್ಲೆಯ ಗಂಗಾವತಿ ನಗರದ ವಿರೇಶ ಎಂಬ ಯುವಕ ತನ್ನ ಆರ್.ಎಕ್ಸ್ ನ ಹುಟ್ಟು ಹಬ್ಬವನ್ನ ಬೈಕ್ ಕೇಕ್ ಕತ್ತರಿಸಿ ಆಚರಣೆ ಮಾಡಿದ್ದಾನೆ.
ಇದನ್ನೂ ಓದಿ : B Sriramulu : 'ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ'
ಒಂದು ವರ್ಷದ ಹಿಂದೆ ವಿರೇಶ ಸೆಕೆಂಡ್ ಹ್ಯಾಂಡ್ ಆರ್.ಎಕ್ಸ್ ಬೈಕ್ ಅನ್ನು 50 ಸಾವಿರ ರೂಪಾಯಿ ಕೊಟ್ಟ ಖರೀದಿಸಿದ್ದಾ. ಇದಕ್ಕೆ ಇಂದು ಒಂದು ವರ್ಷವಾದ ಹಿನ್ನೆಲೆ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾನೆ. ವಿರೇಶ ತನ್ನ ಬೈಕ್ ಗೆ ಡಾರ್ಲಿಂಗ್ ಅಂತಾ ಹೆಸರಿಟ್ಟಿದ್ದಾನೆ.
ವಿರೇಶ ತನ್ನ ಬೈಕ್ ಮುಂದೆ ಕೇಕ್ ಕಟ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೆ, ವಿರೇಶ ತನ್ನ ಆರ್.ಎಕ್ಸ್ ಬೈಕ್ ಹುಟ್ಟು ಹಬ್ಬಕ್ಕೆ ಸ್ನೇಹಿತರಿಗೆ ಭರ್ಜರಿಯಾಗಿ ಪಾರ್ಟಿ ಕೊಟ್ಟಿದ್ದಾರೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.