ರೇಣುಕಾಸ್ವಾಮಿ ಕೊಲೆಯನ್ನು ಮೀರಿಸುತ್ತೆ ಈ ಡಬಲ್ ಮರ್ಡರ್ ಸ್ಟೋರಿ..! ಲವ್ವರ್ಗೆ ಮೆಸೇಜ್ ಮಾಡಿದ್ದಕ್ಕೆ ಇಬ್ಬರು ಮಟ್ಯಾಶ್
ರೇಣುಕಾಸ್ವಾಮಿ ಕೊಲೆ ಕೇಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದರ್ಶನ್ ಗೆಳತಿ ಪವಿತ್ರಾಗೆ ಮೇಸೇಜ್ ಮಾಡಿದ ಅಂತ ದರ್ಶನ್ ಅಂಡ್ ರೇಣುಕಾಸ್ವಾಮಿ ಕೊಲೆ ಮಾಡಿದ್ರು ಅನ್ನೋ ಆರೋಪದ ಮೇಲೆ ಜೈಲು ಸೇರಿದ್ರು. ಅದೇ ತರ ಯಲಹಂಕ ಡಬಲ್ ಮರ್ಡರ್ ನಡೆದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಬೆಂಗಳೂರು : ಮೊನ್ನೆ ಮೊನ್ನೆ ಸಿಲಿಕಾನ್ ಸಿಟಿಯಲ್ಲಿ ಡಬ್ಬಲ್ ಮರ್ಡರ್ ಆಗಿತ್ತು. ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಈ ಕೊಲೆ ಕೇಸ್ ರೇಣುಕಾಸ್ವಾಮಿಯ ಕೊಲೆ ಕೇಸನ್ನು ಸಹ ಮೀರಿಸುವಂತಿದ್ದು, ಕೊಲೆಯ ಅಸಲಿ ಕಹಾನಿ ಇಲ್ಲಿದೆ ನೋಡಿ.
ರೇಣುಕಾಸ್ವಾಮಿ ಕೊಲೆ ಕೇಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದರ್ಶನ್ ಗೆಳತಿ ಪವಿತ್ರಾಗೆ ಮೇಸೇಜ್ ಮಾಡಿದ ಅಂತ ದರ್ಶನ್ ಅಂಡ್ ರೇಣುಕಾಸ್ವಾಮಿ ಕೊಲೆ ಮಾಡಿದ್ರು ಅನ್ನೋ ಆರೋಪದ ಮೇಲೆ ಜೈಲು ಸೇರಿದ್ರು. ಅದೇ ತರ ಯಲಹಂಕ ಡಬಲ್ ಮರ್ಡರ್ ಹಿಂದೆಯೂ ಇದೇ ಕಾರಣ ಕೇಳಿ ಬಂದಿದೆ. ಕೊಲೆಯಾದ ವ್ಯಕ್ತಿ ಆರೋಪಿ ಗೆಳತಿಗೆ ಮೆಸೇಜ್ ಮಾಡ್ತಿದ್ದ ಅನ್ನೋ ಕಾರಣ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:ನಕಲಿ ಜಿಎಸ್‌ಟಿ ಇನ್ವಾಯ್ಸ್ ತಡೆಗಟ್ಟಲು ಕ್ರಮ: ಸಿಎಂ ಸಿದ್ದರಾಮಯ್ಯ
ಈ ಫೋಟೋದಲ್ಲಿ ಕಾಣ್ತಿರೋ ವ್ಯಕ್ತಿಗಳ ಹೆಸ್ರು ಬಿಕ್ರಂ ಸಿಂಗ್ ಮತ್ತು ಚೋಟು ತೂರಿ. ಈ ಸ್ಟೋರಿಲಿ ಚೋಟು ತೂರಿ ಅಮಾಯಕ. ಕೊಲೆಯಾಗಿರುವ ಬಿಕ್ರಂ ಸಂಗಮ್ ಲವ್ ಮಾಡ್ತಿದ್ದ ಸುನಿತಾಳಿಗೆ ಮೇಸೆಜ್, ವಿಡಿಯೋ ಕಾಲ್ ಮಾಡ್ತಿದ್ನಂತೆ. ಈ ವಿಚಾರವನ್ನ ಸುನಿತಾ ಸಂಗಮ್ ಗೆ ಹೇಳಿಬಿಟ್ಟಿದ್ದಳು. ಇದರಿಂದ ಕೊತಕೊತ ಅಂತಾ ಕುದ್ದು ಹೋಗಿದ್ದ. ಬಿಕ್ರಂಗೆ ಒಂದು ಗತಿ ಕಾಣಿಸಬೇಕು ಅಂತಾ ತನ್ನ ಸ್ನೇಹಿತ ಸಮೀರ್‌ನ ಕರ್ಕೊಂಡು ಸೀದಾ ಬಿಕ್ರಂ ಇದ್ದ ಶೆಡ್ ಹೋಗಿದ್ದ.
ಹೋದವನೇ ಬಿಕ್ರಂ ಜೊತೆ ಜಗಳ ಆರಂಭ ಮಾಡಿ ಬಿಕ್ರಂ ಮೊಬೈಲ್ ನ ಚಚ್ಚಿ ಬಿಸಾಕಿದ್ದಾನೆ. ನಮ್ ಹುಡುಗಿಗೆ ಮೆಸೇಜ್ ಮಾಡ್ತಿಯಾ ಅಂತಾ ಬಿಕ್ರಂ ಮೇಲೆ ಸಿಲಿಂಡರ್, ಕುಕ್ಕರ್, ಟೈಲ್ಸ್ ಪೀಸ್ ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳಿಗೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಬಂದ ಚೋಟುತೂರಿ ಮೇಲೂ ಹಲ್ಲೆ ನಡೆಸಿದ್ದಾರೆ. ಸಂಗಮ್ ಏಟಿಗೆ ಬಿಕ್ರಂ ಸಾವನ್ನಪ್ಪಿದ್ದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದ.
ಇದನ್ನೂ ಓದಿ:ಪಿಡಿಓ ಹುದ್ದೆಗಳ ನೇಮಕ ಸಮಗ್ರ ತನಿಖೆಗೆ ತ್ರಿಸದಸ್ಯರ ಸಮಿತಿ ವರದಿ ಆಧರಿಸಿ ಕ್ರಮ: ಸಿಎಂ
ಇನ್ನೂ ಕೊಲೆ ನೋಡಿದ್ದ ತೂರಿಗೂ ಸಂಗಮ್ ಹುಡುಗಿಗೆ ಯಾವ ತರಹದ ಕಂಟ್ಯಾಕ್ಸ್ ಇರಲಿಲ್ಲ. ಆದರೆ ಚೋಟುತೂರಿ ಬಿಕ್ರಂ ಕೊಲೆಯಾಗಿದ್ದನ್ನ ಪೊಲೀಸ್ರ ಮಂದೆ ಬಾಯಿ ಬಿಡ್ತಾನೆ ಅಂತಾ ಆತನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ರು. ಇನ್ನೂ ಕೊಲೆ ಪ್ರಕರಣ ದಾಖಲಿಸಿಕೊಂಡ ಯಲಹಂಕ ನ್ಯೂಟೌನ್ ಇನ್ಸ್ಪೆಕ್ಟರ್ ಸುಧಾಕರ್ ರೆಡ್ಡಿ ಅಂಡ್ ಟೀಮ್ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ರು. ಇತ್ತ ಕೊಲೆ ಮಾಡಿ ದೆಹಲಿಗೆ ಎಸ್ಕೇಪ್ ಆಗಲು ರೈಲ್ವೆ ಸ್ಟೇಷನ್ ಸೇರಿದ್ದ ಆರೋಪಿಗಳನ್ನ ಯಲಹಂಕ ನ್ಯೂಟೌನ್ ಪೊಲೀಸ್ರು ಹೆಡೆಮುರಿ ಕಟ್ಟಿದ್ದಾರೆ.
ಸದ್ಯ ಸಂಗಮ್ ಪ್ರೇಯಸಿ ಸುನಿತಾಳನ್ನ ಪೊಲೀಸರು ವಿಚಾರಣೆ ನಡೆಸ್ತಿದ್ದು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಲಾಕ್ ಆದಂತೆಯೇ ಸುನಿತಾಳು ಲಾಕ್ ಆಗೋ ಸಾಧ್ಯತೆಯಿದೆ. ಒಟ್ಟಾರೆಯಾಗಿ ಬಿಕ್ರಂ ಮೆಸೇಜ್ ನಿಂದ ಟಾರ್ಚರ್ ಆಗಿದ್ರೆ ಪೊಲೀಸರಿಗೆ ದೂರು ಕೊಡಬೇಕಿತ್ತು. ಆದರೆ ಈ ರೀತಿ ಇಬ್ಬರನ್ನು ಅಮಾನುಷವಾಗಿ ಕೊಂದ ಇಬ್ಬರು ಪಾಪಿಗಳು ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.