ಧಾರವಾಡ : ಹುಬ್ಬಳ್ಳಿ -ಧಾರವಾಡ ವ್ಯಾಪ್ತಿಯ ವಖ್ಫ್ ಆಸ್ತಿಗಳಿಗೆ ಒಂದು ತಿಂಗಳಲ್ಲಿ ಖಾತೆ ಮಾಡಿಕೊಡಲು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ಗಡುವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಧಾರವಾಡ ಜಿಲ್ಲಾಧಿಕಾರಿ ಗಳ ಸಭಾಂಗಣ ದಲ್ಲಿ ಅಧಿಕಾರಿ ಗಳ ಸಭೆ ನಡೆಸಿದ ಅವರು, ವಖ್ಫ್ ಆಸ್ತಿ ಗಳ ವಿಚಾರದಲ್ಲಿ ಅಧಿಕಾರಿಗಳು ಗಂಭೀರ ವಾಗಿ ಪರಿಗಣಿಸಬೇಕು. ಒತ್ತುವರಿ ತಡೆದು ಸಂರಕ್ಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.


ಇದನ್ನೂ ಓದಿ: ಕಾರ್ಡ್‍ದಾರರಿಗೆ ತೂಕ ವಂಚನೆ, ಸ್ಥಳದಲ್ಲೇ ನ್ಯಾಯಬೆಲೆ ಅಂಗಡಿ ಅಮಾನತಿಗೆ ಡಿಸಿ ಆದೇಶ


ಹುಬ್ಬಳ್ಳಿ -ಧಾರವಾಡ ವ್ಯಾಪ್ತಿಗೆ ಸಂಬಂಧಿಸಿದಂತೆ ಬಾಕಿ ಇದ್ದ 190 ಆಸ್ತಿಗಳ ಪೈಕಿ 100 ಆಸ್ತಿಗಳ ಖಾತೆ ಗಳನ್ನು ಇದೇ ಸಂದರ್ಭದಲ್ಲಿ ಹಸ್ತಾಂತರ ಮಾಡಲಾಯಿತು.


ಕಾರವಾರ ಜಿಲ್ಲೆಗೆ ಸಂಬಂಧಿಸಿದಂತೆ ವಖ್ಫ್ ಆಸ್ತಿಗಳ ವಿಚಾರದಲ್ಲಿ ಅರಣ್ಯ ಇಲಾಖೆ ತಗಾದೆ ಇರುವ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ, ಹದಿನೈದು ದಿನಗಳಲ್ಲಿ ಅರಣ್ಯ ಸಚಿವರ ಜತೆ ಈ ಕುರಿತು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.


ವಖ್ಫ್ ಅಧಿಕಾರಿಗಳು ಸಹ ಆಸ್ತಿಗಳಿಗೆ ಖಾತೆ ವಿಚಾರದಲ್ಲಿ ಮಹಾನಗರ ಪಾಲಿಕೆ, ಕಂದಾಯ, ಜಿಲ್ಲಾ ಪಂಚಾಯತ್, ನಗರಾಭಿವೃದ್ಧಿ ಸೇರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಸಾಧಿಸಿ ಸಮಸ್ಯೆ ಬಗೆಹರಿಸಿ ಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.


ಇದನ್ನೂ ಓದಿ: Post Office Scheme: ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಸಿಗುತ್ತೆ!


ಎರಡೂ ಜಿಲ್ಲೆಯ ವಖ್ಫ್ ಅದಾಲತ್ ನಲ್ಲಿ ಸಲ್ಲಿಕೆಯಾದ ಮನವಿಗಳ ಬಗ್ಗೆಯೂ ಕ್ರಮ ವಹಿಸಲು ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದರು.


ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ,ಶಾಸಕರಾದ ಕೋನರೆಡ್ಡಿ, ಅರವಿಂದ್ ಬೆಲ್ಲದ, ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭ,  ಲಕ್ಷ್ಮಿ ಪ್ರಸಾದ್, ಅಲ್ಪಸಂಖ್ಯಾತ ರ ಕಲ್ಯಾಣ ಇಲಾಖೆ ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.