ವಾಸ್ತು ಸಲಹೆ: ನಮ್ಮ ಹಿರಿಯರು ಮಾಡುವ ಯಾವುದೇ ಕೆಲಸದ ಹಿಂದೆ ಒಂದು ಅರ್ಥ ಇರುತ್ತದೆ. ಅವುಗಳಲ್ಲಿ ನಮ್ಮ ಆಹಾರಕ್ಕೆ ಸಂಬಂಧಿಸಿದ ನಿಯಮಗಳೂ ಸಹ ಹೊರತಲ್ಲ. ಆದರೆ, ಹಲವು ಸಂದರ್ಭಗಳಲ್ಲಿ ಪೌಷ್ಠಿಕ ಆಹಾರ ಸೇವಿಸುವುದರ ಹೊರತಾಗಿಯೂ ಕೆಲವರು ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ, ವಾಸ್ತು ಪ್ರಕಾರ ಆಹಾರ ಬಡಿಸುವಾಗ ಮಾಡುವ ಕೆಲವು ಸಣ್ಣ ಪುಟ್ಟ ತಪ್ಪುಗಳು ಸಹ ನಿಮ್ಮ ಜೀವನದ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರಬಹುದು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಆಹಾರ ಬಡಿಸುವಾಗ ನೀವು ಗೊತ್ತೋ, ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಮನೆಯಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಅನೇಕ ಬಾರಿ ಅಜಾಗರೂಕತೆಯಿಂದ ಮಾಡುವ ಸಣ್ಣ ಪುಟ್ಟ ತಪ್ಪುಗಳು ಸಹ ಜೀವನದಲ್ಲಿ ಭೂಕಂಪವನ್ನೇ ಸೃಷ್ಟಿಸಬಹುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಸಾಮಾನ್ಯ ತಪ್ಪುಗಳು ಯಾವುವು ಎಂದು ತಿಳಿಯೋಣ...


ಇದನ್ನೂ ಓದಿ- Vastu Tips: ಸುಖ-ಸಮೃದ್ಧಿಗಾಗಿ ತುಳಸಿಗೆ ನೀರು ಅರ್ಪಿಸುವಾಗ ಈ ಮಂತ್ರ ಜಪಿಸಿ


ಇಂತಹ ಆಹಾರಗಳನ್ನು 3ರ ಸಂಖ್ಯೆಯಲ್ಲಿ ಬಡಿಸಬಾರದು:
ಸಾಮಾನ್ಯವಾಗಿ ಮನೆಯಲ್ಲಿ ರೊಟ್ಟಿ, ದೋಸೆ, ಇಡ್ಲಿ, ಚಪಾತಿ ರೀತಿಯ ಆಹಾರಗಳನ್ನು ಬಡಿಸುವಾಗ ಒಬ್ಬೊಬ್ಬರಾಗಿ ಬಡಿಸುವ ದೃಷ್ಟಿಯಿಂದ ಹಲವು ಬಾರಿ ಅವುಗಳನ್ನು ಮೂರರ ಸಂಖ್ಯೆಯಲ್ಲಿ ಅಂದರೆ 3 ಚಪಾತಿ, 3 ರೊಟ್ಟಿ, 3 ದೋಸೆ ಹೀಗೆ ಬಡಿಸುತ್ತೇವೆ. ಆದರೆ, ಸನಾತನ ಧರ್ಮದ ಪ್ರಕಾರ, ಆಹಾರ ಸೇವಿಸುವ ವ್ಯಕ್ತಿಗೆ ಒಮ್ಮೆಗೆ  ಮೂರರ ಸಂಖ್ಯೆಯಲ್ಲಿ ಆಹಾರವನ್ನು ಬಡಿಸಬಾರದು. ಇದು ಮನೆಯ ಸುಖ-ಶಾಂತಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ನಮ್ಮ ಈ ಆಹಾರ ಪದ್ದತಿಯು ಮನೆಯಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ, ಇಂತಹ ಆಹಾರವನ್ನು ಉಣ ಬಡಿಸುವಾಗ ಮೊದಲಿಗೆ ಒಂದೆರಡು ಬಡಿಸಿ ನಂತರ ಮತ್ತೆ ಬಡಿಸುವುದು ಸೂಕ್ತ.


ಈ ಭಂಗಿಯಲ್ಲಿ ಕುಳಿತು ಆಹಾರ ಸೇವಿಸಬೇಡಿ:
ಮೊದಲೆಲ್ಲಾ ಕುಟುಂಬದವರೆಲ್ಲಾ ಒಟ್ಟಿಗೆ ಕುಳಿತು ನೆಲದ ಮೇಲೆ ಎಲೆ ಹಾಕಿ ಅದರಲ್ಲಿ ಆಹಾರ ಬಡಿಸಿ ಸವಿಯುತ್ತಿದ್ದರು. ಆದರೆ, ಬದಲಾದ ಜೀವನಶೈಲಿಯಲ್ಲಿ ಹಬ್ಬಗಳಲ್ಲಿ ಹೊರತುಪಡಿಸಿ ಬೇರೆ ಸಮಯದಲ್ಲಿ ತಟ್ಟೆಯಲ್ಲಿಯೇ ತಿನ್ನುವುದು ಎಲ್ಲರಿಗೂ ಅಭ್ಯಾಸವಾಗಿದೆ. ಆದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಟ್ಟೆಯನ್ನು ಕೈಯಲ್ಲಿ ಹಿಡಿದು ತಿನ್ನುವುದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಈ ರೀತಿ ಊಟ ನೀಡುವುದರಿಂದ ಆಹಾರ ನೀಡಿದ ಪುಣ್ಯವೂ ದೊರೆಯುವುದಿಲ್ಲ ಎಂಬ ನಂಬಿಕೆಯೂ ಇದೆ. ಹಾಗಾಗಿ, ಊಟ ಬಡಿಸುವಾಗ ಅಥವಾ ಆಹಾರ ಸೇವಿಸುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Home Temple Tips: ಮನೆಯ ಪೂಜಾ ಕೋಣೆ ವಾಸ್ತು ಪ್ರಕಾರ ಹೇಗಿರಬೇಕು..?


ಅತಿಥಿಗಳಿಗೆ ಎಂದಿಗೂ ಇಂತಹ ಆಹಾರವನ್ನು ನೀಡಬೇಡಿ:
ಹಲವು ಮನೆಗಳಲ್ಲಿ ಹೆಚ್ಚು ಆಹಾರ ಬೇಯಿಸುವ ಅಭ್ಯಾಸ ಇದೆ. ಕೆಲವರು ಅದನ್ನು ಚೆಲ್ಲುತ್ತಾರೆ, ಇನ್ನೂ ಕೆಲವರು ಅದನ್ನು ಎತ್ತಿಟ್ಟು ಮರುದಿನ ಮತ್ತೆ ಬಿಸಿ ಮಾಡಿ ತಿನ್ನುತ್ತಾರೆ. ಆದರೆ, ಮನೆಗೆ ಬರುವ ಅತಿಥಿಗಳಿಗೆ ಎಂದಿಗೂ ಸಹ ಇಂತಹ ಆಹಾರವನ್ನು ಬಡಿಸಬಾರದು. ಈ ರೀತಿ ಮಾಡುವುದರಿಂದ ಲಕ್ಷ್ಮಿ ಕುಪಿತಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.