Valentine Day Gift: ಪ್ರತಿಯೊಬ್ಬ ಪ್ರೇಮಿಯೂ ಪ್ರೇಮಿಗಳ ದಿನ ಅಂದರೆ ವ್ಯಾಲೆಂಟೈನ್‌ ಡೇ ಅನ್ನು ವಿಶೇಷವಾಗಿ ಆಚರಿಸಲು ಬಯಸುತ್ತಾನೆ. ಇದರ ಭಾಗವಾಗಿ ಪರಸ್ಪರರ ನಡುವೆ ಉಡುಗೊರೆಗಳನ್ನೂ ಸಹ ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ವಾಸ್ತು ಪ್ರಕಾರ, ಪ್ರೇಮಿಗಳು ಕೆಲವು ವಸ್ತುಗಳನ್ನು ಗಿಫ್ಟ್ ಆಗಿ ನೀಡಲೇಬಾರದು. ಉಡುಗೊರೆಯ ರೂಪದಲ್ಲಿ ನಿಮ್ಮ ಪ್ರೇಮಿಗೆ ನೀವು ನೀಡುವ ಈ ವಸ್ತುಗಳು ಜೀವನದಲ್ಲಿ ಸಿಹಿಯ ಬದಲಿಗೆ ಕಹಿಯನ್ನು ತರಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ವಾಸ್ತು ಪ್ರಕಾರ, ವ್ಯಾಲೆಂಟೈನ್ಸ್ ಡೇಯಲ್ಲಿ ಯಾವ ವಸ್ತುಗಳನ್ನು ನೀಡುವುದನ್ನು ತಪ್ಪಿಸಬೇಕು ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ವಾಸ್ತು ಶಾಸ್ತ್ರದ ಪ್ರಕಾರ, ಪ್ರೇಮಿಗಳ ದಿನದಂದು ಈ ವಸ್ತುಗಳನ್ನು ಗಿಫ್ಟ್ ಆಗಿ ನೀಡಲೇಬಾರದಂತೆ!
ಕರವಸ್ತ್ರ:

ಕೆಲವರು ತಮ್ಮ ಕೈಯಾರೆ ಹ್ಯಾಂಡ್ ಕ್ರಾಫ್ಟ್ ಮಾಡಿ ತಮ್ಮ ಪ್ರೇಮಿಗೆ ಕರವಸ್ತ್ರವನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕರವಸ್ತ್ರವನ್ನು ಉಡುಗೊರೆಯಾಗಿ ನೀಡುವುದರಿಂದ ಅದು ಸಂಬಂಧದಲ್ಲಿ ಹುಳಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.


ಪೆನ್ನು:
ವ್ಯಾಲೆಂಟೈನ್ಸ್ ಡೇ ಯಲ್ಲಿ ಪ್ರೇಮಿಗೆ ಪೆನ್ನನ್ನು ಗಿಫ್ಟ್ ಆಗಿ ನೀಡುವುದು ಕೂಡ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಇದರೊಂದಿಗೆ ಸಂಬಂಧದಲ್ಲೂ ಕಹಿಯ ಭಾವನೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ವ್ಯಾಲೆಂಟೈನ್ಸ್ ಡೇ- ರೋಸ್ ಡೇಯಂದು ರಾಶಿಗನುಗುಣವಾಗಿ ನಿಮ್ಮ ಪ್ರೇಮಿಗೆ ಯಾವ ಬಣ್ಣದ ರೋಸ್ ನೀಡಬೇಕು


ಕಪ್ಪು ವಸ್ತ್ರ:
ಹಿಂದೂ ಧರ್ಮದಲ್ಲಿ ಕಪ್ಪನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಕಪ್ಪು ಬಣ್ಣದ ವಸ್ತ್ರವನ್ನು ಯಾರಿಗೂ ಕೂಡ ಉಡುಗೊರೆಯಾಗಿ ನೀಡಲೇಬಾರದು. ಇದು ಜೀವನದಲ್ಲಿ ದುಃಖವನ್ನು ತರುತ್ತದೆ ಎಂದು ನಂಬಲಾಗಿದೆ.


ಪಾದರಕ್ಷೆಗಳು:
ಪ್ರೇಮಿಗಳು ತಮ್ಮ ಸಂಗಾತಿಗೆ ಅಪ್ಪಿತಪ್ಪಿಯೂ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಲೇಬಾರದು. ಇದು ನಿಮ್ಮ ಸಂಬಂಧದಲ್ಲಿ ಬಿರುಕನ್ನು ತರಬಹುದು ಎನ್ನಲಾಗುತ್ತದೆ.


ಇದನ್ನೂ ಓದಿ- ಬೆಳಗೆ ಎದ್ದಕ್ಷಣ ತಿಳಿದು ಅಥವಾ ತಿಳಿಯದೆ ನೀವೂ ಈ ತಪ್ಪು ಮಾಡುತ್ತೀರಾ? ನಾಳೆಯಿಂದಲೇ ಬಿಟ್ಟುಬಿಡಿ


ವಾಚ್:
ಗಿಫ್ಟ್ ಎಂದೊಡನೆ ಬಹುತೇಕರ ತಲೆಗೆ ಹೊಳೆಯುವುದು ವಾಚ್. ಆದರೆ ವಾಸ್ತು ಪ್ರಕಾರ, ವಾಚ್ ಅನ್ನು ನಿಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಆಗಿ ನೀಡುವುದರಿಂದ ಅವರ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.