House Door Vastu Tips: ಮನೆಯ ಬಾಗಿಲು ಹೀಗಿದ್ದರೆ ಸುಖ ಶಾಂತಿಗೆ ಕೊರತೆಯಿರುವುದಿಲ್ಲ
House Door Vastu Tips : ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ, ಮನೆಯನ್ನು ಕಟ್ಟುವುದು ಮತ್ತು ಮನೆಯ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ.
ನವದೆಹಲಿ : House Door Vastu Tips : ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ, ಮನೆಯನ್ನು ಕಟ್ಟುವುದು ಮತ್ತು ಮನೆಯ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆ. ಈ ಬಗ್ಗೆ ವಾಸ್ತು ಶಾಸ್ತ್ರದಲ್ಲಿ (vastu shastra) ಎಲ್ಲವನ್ನೂ ವಿಸ್ತಾರವಾಗಿ ಹೇಳಲಾಗಿದೆ. ಇನ್ನು ಮನೆಯ ಬಾಗಿಲಿನ ಬಗ್ಗೆಯೂ ಕೆಲವು ಪ್ರಮುಖ ಮಾಹಿತಿಯನ್ನು ವಾಸ್ತುವಿನಲ್ಲಿ ಹೇಳಲಾಗಿದೆ. ಮನೆಯ ಬಾಗಿಲನ್ನು ವಾಸ್ತು ಪ್ರಕಾರ, ಮಾಡಿದರೆ ಆ ಮನೆಯಲ್ಲಿ ಎಂದಿಗೂ ಹಣದ ಕೊರತೆ ಕಾಡುವುದಿಲ್ಲವಂತೆ. ಹಾಗಿದ್ದರೆ ಒಂದು ಮನೆಯ ಬಾಗಿಲು ಹೇಗಿರಬೇಕು ನೋಡೋಣ.
ಮನೆಗೆ ಒಂದೇ ಬಾಗಿಲು ಇರುವುದು ವಾಸ್ತು ಪ್ರಕಾರ (Vastu shastra) ಶುಭ ಅಲ್ಲ ಎನ್ನಲಾಗಿದೆ. ಮನೆಗೆ ಯಾವತ್ತೂ ಎರಡು ಬಾಗಿಲು ಇರಬೇಕಂತೆ. ಎರಡು ಬದಿಯ ಬಾಗಿಲು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ನ್ನುವುದು ನಂಬಿಕೆ.
ಇದನ್ನೂ ಓದಿ : Best Zodiac Sign: ದ್ವಾದಶ ರಾಶಿಗಳಲ್ಲಿ ಈ ರಾಶಿಚಕ್ರವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತೆ, ಇದರ ವಿಶೇಷತೆ ತಿಳಿಯಿರಿ
1.ವಾಸ್ತು ಪ್ರಕಾರ, (vastu tips for house door) ಮನೆಯಲ್ಲಿ ಬಾಗಿಲು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ದ ಬರಬಾರದು. ಒಂದು ವೇಳೆ ಮನೆಯ ಬಾಗಿಲು ಸದ್ದು ಮಾಡುತ್ತಿದ್ದರೆ, ಅದನ್ನು ತಕ್ಷಣ ಸರಿ ಮಾಡಿಸಿ ಇಲ್ಲವೇ ಬದಲಾಯಿಸಿ.
2. ಮನೆಯ ಬಾಗಿಲು ನೆಲಕ್ಕೆ ತಾಗುತ್ತಿದ್ದರೆ ಅದು ಕೂಡಾ ಶುಭವಲ್ಲ.ಬಾಗಿಲು ನೆಲಕ್ಕೆ ತಾಗುತ್ತಿದ್ದರೆ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ ತಲೆದೋರುತ್ತದೆಯಂತೆ. ಈ ಕಾರಣಕ್ಕೆ ಮನೆಯ ಬಾಗಿಲು ನೆಲದಿಂದ ಸ್ವಲ್ಪ ಎತ್ತರದಲ್ಲಿರಬೇಕು.
3. ವಾಸ್ತು ಪ್ರಕಾರ, (Vastu tips) ಮನೆಯ ಬಾಗಿಲುಗಳು ತುಂಬಾ ಉದ್ದವಾಗಿಯು ಇರಬಾರದು, ತುಂಬಾ ಚಿಕ್ಕದಾಗಿಯು ಇರಬಾರದು. ಬಾಗಿಲಿನ ಅಳತೆ ಯಾವತ್ತೂ ಸರಿಯಾಗಿರಬೇಕು.
4. ವಾಸ್ತು ಪ್ರಕಾರ, ಮನೆಯ ಬಾಗಿಲು ಮತ್ತು ಕಿಟಕಿಗಳು ಮರದಿಂದ ಮಾಡಿರಬೇಕು. ಅದು ಗಾಳಿ, ನೀರು (Water) ಮತ್ತು ಸೂರ್ಯನ ಬೆಳಕನ್ನು ಸಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಹಾಗಾಗಿ ಮನೆಯ ಕಿಟಕಿ ಮತ್ತು ಬಾಗಿಲುಗಳು ಎಂದಿಗೂ ಮರದಿಂದಲೇ ಮಾಡಲ್ಪಟ್ಟರೆ ಉತ್ತಮ.
ಇದನ್ನೂ ಓದಿ : Goddess Laxmi: ಲಕ್ಷ್ಮಿ ದೇವಿಗೆ ತುಂಬಾ ಪ್ರಿಯ ಈ ವಿಶೇಷ ಶಂಖ, ಇದು ಮನೆಯಲ್ಲಿದ್ದರೆ ಸಿಗಲಿದೆ ಅದ್ಭುತ ಲಾಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.