ಭೂಮಿ, ವಾಹನ ಇತ್ಯಾದಿಗಳ ಖರೀದಿಗೆ ಅತ್ಯಂತ ಶುಭ ಯೋಗ ಇದು, ಕೇವಲ 7 ದಿನ ನಿರೀಕ್ಷಿಸಿ
Amrit Siddhi Yoga 2023: ಯಾವುದೇ ಕೆಲಸವನ್ನು ಶುಭ ಮುಹೂರ್ತದಲ್ಲಿ ಮಾಡಿದರೆ, ಆ ಕೆಲಸ ನಿರ್ವಿಘ್ನ ನೆರವೇರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ ಜನರು ಕೆಲಸ ಆರಂಭಿಸಲು ಶುಭ ಮುಹೂರ್ತಕ್ಕಾಗಿ ಕಾಯುತ್ತಾರೆ. ನೀವೂ ಕೂಡ ಒಂದು ವೇಳೆ ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಲ್ಲಿ ಬರುವ ಒಂದು ಮುಹೂರ್ತ ಅತ್ಯಂತ ಮಂಗಳಕರವಾಗಿದೆ.
Amrit Siddhi Yoga: ಪ್ರತಿಯೊಂದು ಕೆಲಸವನ್ನು ಶುಭ ಮುಹೂರ್ತದಲ್ಲಿಯೇ ನೆರವೇರಿಸಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಯಾವುದೇ ಕೆಲಸವನ್ನು ಶುಭ ಮುಹೂರ್ತದಲ್ಲಿ ಮತ್ತು ಶುಭ ದಿನದಂದು ಆರಂಭಿಸಿದರೆ ಆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಶುಭ ಮುಹೂರ್ತವಿಲ್ಲದೆ ಕೆಲಸವನ್ನು ಪ್ರಾರಂಭಿಸಿದರೆ, ವ್ಯಕ್ತಿಯು ಆ ಕೆಲಸದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಒಂದು ಅದ್ಭುತ ಯೋಗದ ಕುರಿತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ, ಇದನ್ನು ಅಮೃತ ಸಿದ್ಧಿ ಯೋಗ ಎಂದು ಕರೆಯಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮೃತ ಸಿದ್ಧಿ ಯೋಗವು ಕೆಲವೇ ದಿನಗಳಲ್ಲಿ ರೂಪುಗೊಳ್ಳಲಿದೆ. ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸಲು ಈ ಯೋಗವು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ, ಈ ಯೋಗದಲ್ಲಿ ಕೆಲವು ಶುಭ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಅಮೃತ ಸಿದ್ಧಿ ಯೋಗದ ನಿರ್ಮಾಣ ದಿನಾಂಕ ಮತ್ತು ಶುಭ ಸಮಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಅಮೃತ ಸಿದ್ಧಿ ಯೋಗ ದಿನಾಂಕ ಮತ್ತು ಸಮಯ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ಯೋಗವು ಕೆಲವು ಕಾರ್ಯಗಳಿಗೆ ಅತ್ಯಂತ ಶುಭ ಹಾಗೂ ಕೆಲವು ಕಾರ್ಯಗಳಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಇದೇ ರೀತಿ ಭೂಮಿ, ವಾಹನ ಇತ್ಯಾದಿ ಖರೀದಿಗೆ ಅಮೃತ ಸಿದ್ಧಿ ಯೋಗವು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಮೃತ ಸಿದ್ಧಿ ಯೋಗದ ಅವಧಿಯು 6 ಗಂಟೆಗಳಿಂದ 12 ಗಂಟೆಗಳವರೆಗೆ ಇರುತ್ತದೆ. ಈ ಯೋಗ ವರ್ಷದಲ್ಲಿ ಹಲವು ಬಾರಿ ರೂಪಗೊಳ್ಳುತ್ತದೆ.
ಅಮೃತ ಸಿದ್ಧಿ ಯೋಗವು ಪ್ರಯಾಣ, ಉದ್ಯೋಗ, ವಾಹನ, ಭೂಮಿ ಖರೀದಿ ಮತ್ತು ಮಾರಾಟ, ಅಂಗಡಿ ತೆರೆಯಲು, ಶಾಪಿಂಗ್ ಮಾಡಲು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ ಎಂದು ಜ್ಯೋತಿಷ್ಯ ಪಂಡಿತರು ಹೇಳುತ್ತಾರೆ. ಈ ಯೋಗವು ನಿರ್ದಿಷ್ಟ ರಾಶಿಯಲ್ಲಿ ನಿರ್ದಿಷ್ಟ ದಿನದಂದು ರೂಪುಗೊಳ್ಳುತ್ತದೆ. ಇಂದಿನಿಂದ ಸರಿಯಾಗಿ 7 ದಿನಗಳ ನಂತರ ಮತ್ತೆ ಈ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ವಿಶೇಷ ಯೋಗವು ಜನವರಿ 27, 2023 ರಂದು ಬೆಳಗ್ಗೆ 07:12 ರಿಂದ ಸಂಜೆ 06:37 ರವರೆಗೆ ಇರಲಿದೆ.
ಅಮೃತ ಸಿದ್ಧಿ ಯೋಗದಲ್ಲಿ ಏನು ಮಾಡಬೇಕು, ಏನು ಮಾಡಬಾರದು?
>> ಈ ಯೋಗದಲ್ಲಿ ಹೊಸ ವ್ಯಾಪಾರ ಮತ್ತು ಹೊಸ ಕೆಲಸ ಆರಂಭಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
>> ಅಷ್ಟೇ ಅಲ್ಲ, ಭೂಮಿ, ವಾಹನ, ಚಿನ್ನ ಮುಂತಾದವುಗಳನ್ನು ಖರೀದಿಸುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು.
>> ಅಮೃತ ಸಿದ್ಧಿ ಯೋಗದಲ್ಲಿ ಉದ್ಯೋಗ ಫಾರ್ಮ್ ಅನ್ನು ಭರ್ತಿ ಮಾಡುವುದು ಅಥವಾ ಉದ್ಯೋಗ ಸಂದರ್ಶನವನ್ನು ನೀಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
>> ಇದೇ ವೇಳೆ, ಜ್ಯೋತಿಷ್ಯದಲ್ಲಿ, ಈ ಅವಧಿಯಲ್ಲಿ ಮೊಕದ್ದಮೆಯನ್ನು ಹೂಡುವುದನ್ನು ಕೂಡ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
>> ಅಮೃತ ಸಿದ್ಧಿ ಯೋಗದಲ್ಲಿ ಅಂಗಡಿ ತೆರೆಯುವುದು ಇತ್ಯಾದಿಗಳನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
>> ಈ ಯೋಗವು ವಿದೇಶ ಪ್ರವಾಸಕ್ಕೆ ಹೋಗುವುದಕ್ಕೂ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ-ಧನ-ವ್ಯಾಪಾರದ ಕಾರಕ ಬುಧನ ನೇರನಡೆ ಆರಂಭ, ಏಪ್ರಿಲ್ 20ರವರೆಗೆ ಈ ರಾಶಿಗಳ ಜನರಿಗೆ ಬಂಪರ್ ಲಾಭ
ಏನು ಮಾಡಬಾರದು?
>> ಜೋತಿಷ್ಯ ಪಂಡಿತರ ಪ್ರಕಾರ ಈ ಯೋಗದಲ್ಲಿ ಗೃಹ ಪ್ರ್ರವೇಶ, ಕಟ್ಟಡ ನಿರ್ಮಾಣ ಮಾಡಬಾರದು.
>> ಗುರುವಾರದಂದು ಈ ಯೋಗವು ರೂಪುಗೊಳ್ಳುತ್ತಿದ್ದರೆ, ಈ ದಿನ ಮದುವೆ ಇತ್ಯಾದಿಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ.
>> ಮತ್ತೊಂದೆಡೆ, ಈ ಯೋಗವು ಶನಿವಾರದಂದು ರೂಪುಗೊಂಡರೆ, ಆ ದಿನ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು.
ಇದನ್ನೂ ಓದಿ-ವರ್ಷದ ಮೊದಲ ಶನಿಚರಿ ಅಮಾವಾಸ್ಯೆಯ ದಿನ 5 ರಾಶಿಗಳ ಜನರ ಮೇಲೆ ಶನಿಯ ವಕ್ರ ದೃಷ್ಟಿ, ಈ ಉಪಾಯ ಮಾಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.