Venus Transit 2023: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಶುಕ್ರ ಗ್ರಹವನ್ನು ಸಂಪತ್ತು, ವೈಭವ, ಸಂತೋಷ, ಐಶ್ವರ್ಯ ಮತ್ತು ಐಷಾರಾಮಿ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರ ಸಂಕ್ರಮಿಸಿದಾಗ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಸ್ಥಳೀಯರ ಜೀವನವು ಪ್ರಭಾವಕ್ಕೆ ಒಳಗಾಗುತ್ತವೆ. ಇದು ಕೆಲವರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದರೆ, ಉಳಿದವರ ಪಾಲಿಗೆ ಅಶುಭ ಪರಿಣಾಮವನ್ನು ಬೀರುತ್ತದೆ. ಮುಂದಿನ ತಿಂಗಳು ಫೆಬ್ರವರಿ 15 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ಶುಕ್ರನ ಸಂಚಾರವು ಕೆಲವು ರಾಶಿಗಳ ಜಾತಕದವರಿಗೆ ವಿಶೇಷ ಪ್ರಯೋಜನಗಳನ್ನು ನೀಡಲಿದೆ. ಈ ಅವಧಿಯಲ್ಲಿ, ಶುಕ್ರ ಗುರುವಿನ ಜೊತೆ ಮೈತ್ರಿ ಕೂಡ ನಿರ್ಮಾಣಗೊಳ್ಳಲಿದೆ.


COMMERCIAL BREAK
SCROLL TO CONTINUE READING

ಶುಕ್ರ ಸಂಚಾರದಿಂದ ಯಾವ ರಾಶಿಯವರಿಗೆ ವಿಶೇಷ ಲಾಭ ಸಿಗಲಿದೆ?
ಮಿಥುನ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಿಥುನ ರಾಶಿಯವರಿಗೆ ಹಠಾತ್ ಧನಾಗಮನ ಸಿಗಲಿದೆ. ಈ ಶುಕ್ರ ಸಂಕ್ರಮ ಮಿಥುನ ರಾಶಿಯವರ ಜಾತಕದ ದಶಮ ಭಾವದಲ್ಲಿ ನೆರವೇರಲಿದೆ. ಈ ಸಮಯದಲ್ಲಿ, ವ್ಯಕ್ತಿಯು ಕಾರ್ಯಸ್ಥಳದಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ. ಉದ್ಯೋಗ ಅಥವಾ ವ್ಯಾಪಾರ ಮಾಡುವ ಸ್ಥಳೀಯರು ಈ ಅವಧಿಯಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಮತ್ತೊಂದೆಡೆ, ಉದ್ಯೋಗಿಗಳಿಗೆ ಬಡ್ತಿ ಭಾಗ್ಯವಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.


ಇದನ್ನೂ ಓದಿ-ಇಂತಹ ಜನರು ತಮ್ಮ ಜೀವನದಲ್ಲಿ ಬೇಗ ವೃದ್ಧರಾಗುತ್ತಾರೆ


ಕನ್ಯಾ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ 15 ರ ಶುಕ್ರ ಸಂಕ್ರಮಣದಿಂದಾಗಿ ಕನ್ಯಾ ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾಗಳಿವೆ. ಕನ್ಯಾ ರಾಶಿಯ ಸ್ಥಳೀಯರ ಸಪ್ತಮ ಭಾವದಲ್ಲಿ ಶುಕ್ರನ ಸಂಕ್ರಮಣ ನಡೆಯಲಿದೆ.ಇದು ಅವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಈ ಜನರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪ್ರೇಮ ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿದೆ. ಈ ಅವಧಿಯಲ್ಲಿ ವ್ಯಕ್ತಿಯ ಆರೋಗ್ಯವೂ ಸುಧಾರಿಸುತ್ತದೆ. ಆರ್ಥಿಕ ಸಮೃದ್ಧಿ ಬರಲಿದೆ.


ಇದನ್ನೂ ಓದಿ-Chanakya Niti: ಪತಿ-ಪತ್ನಿ ನಿತ್ಯ ಈ ಕೆಲಸ ಮಾಡಿದರೆ ಸಂಬಂಧದಲ್ಲಿ ಎಂದಿಗೂ ಬಿರುಕು ಕಾಣಿಸಿಕೊಳ್ಳುವುದಿಲ್ಲ


ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಂಚಾರವು ತುಂಬಾ ಲಾಭಕಾರಿಯಾಗಿದೆ. ಈ ಅವಧಿಯಲ್ಲಿ ಶುಕ್ರನು ನಿಮ್ಮ ಜಾತಕದ  ಆರನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯಲ್ಲಿ ನೀವು ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ತುಲಾ ರಾಶಿಯ ಜನರ ಜೀವನದಲ್ಲಿ ಹಠಾತ್ ಧನಲಾಭವಿರುತ್ತದೆ. ಉದ್ಯೋಗದಲ್ಲೂ ಸಂಬಳ ಹೆಚ್ಚಾಗಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.