ನವದೆಹಲಿ: ಈ ವರ್ಷ ಮೇ ತಿಂಗಳ 3ನೇ ತಾರೀಖಿಗೆ ಅಂದರೆ ಮಂಗಳವಾರ ಅಕ್ಷಯ ತೃತೀಯ ಪರ್ವವನ್ನು ಆಚರಿಸಲಾಗುತ್ತಿದೆ. ವೈಶಾಖ ತಿಂಗಳ ಶುಕ್ಲ ಪಕ್ಷದ ತೃತಿಯಾದಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ವಿವಾಹ, ಶುಭ ಕಾರ್ಯ, ಖರೀದಿಗಾಗಿ ಅದ್ಭುತ ಮೂಹೂರ್ತ ಇರುತ್ತದೆ. ಈ ದಿನ ಮಾಡಲಾಗುವ ಶುಭಕಾರ್ಯಗಳಿಂದ ಜೀವನದಲ್ಲಿ ಸುಖ ಸಮೃದ್ಧಿ ಬರುತ್ತದೆ ಮತ್ತು ಲಾಭ ಪ್ರಾಪ್ತಿಯಾಗುತ್ತದೆ. ಹೀಗಾಗಿ ಹೊಸ ಕಾರ್ಯ ಆರಂಭಿಸಲು ಅಕ್ಷಯ ತೃತಿಯಾ ಅತ್ಯಂತ ಶುಭದಿನ ಎಂದು ಹೇಳಲಾಗುತ್ತದೆ. ಆದರೆ, ಅಕ್ಷಯ ತೃತಿಯಾ ದಿನ ಕೆಲ ಕೆಲಸಗಳನ್ನು ವರ್ಜಿತ ಎಂದೂ ಕೂಡ ಹೇಳಲಾಗಿದೆ. 

COMMERCIAL BREAK
SCROLL TO CONTINUE READING

ಅಕ್ಷಯ ತೃತಿಯಾ ದಿನ ಈ ಕೆಲಸಗಳನ್ನು ಮಾಡಬೇಡಿ
>> ಅಕ್ಷಯ  ತೃತಿಯಾವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ, ಹೀಗಾಗಿ ಈ ದಿನ ಯಾವುದೇ ರೀತಿಯ ಅಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ.
>> ಮೊದಲನೆಯದಾಗಿ ಅಕ್ಷಯ ತೃತೀಯ ದಿನದಂದು ಬರಿಗೈಯಲ್ಲಿ ಮನೆಗೆ ಹೋಗಬೇಡಿ. ಏನನ್ನಾದರೂ ಖರೀದಿಸಿದ ಬಳಿಕವೇ ಮನೆಗೆ ಹೋಗಿ. ಚಿನ್ನ ಮತ್ತು ಬೆಳ್ಳಿಯ ಖರೀದಿ ನಿಮ್ಮಿಂದ ಸಾಧ್ಯವಿಲ್ಲದಿದ್ದರೂ ಕೂಡ ನಿರಾಶೆಗೊಳ್ಳುವ ಅಗತ್ಯವಿಲ್ಲ. ಈ ದಿನ ನೀವು ಬಾರ್ಲಿ, ಮಣ್ಣಿನ ಪಾತ್ರೆ, ಹಿತ್ತಾಳೆ ಇತ್ಯಾದಿಗಳನ್ನು ಕೂಡ ಖರೀದಿಸಬಹುದು. ಈ ವಸ್ತುಗಳ ಖರೀದಿ ಕೂಡ ಮಂಗಳಕರ ಎಂದು ಹೇಳಲಾಗುತ್ತದೆ.
>> ಅಕ್ಷಯ ತೃತೀಯ ದಿನ ತಾಯಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ಪೂಜೆಯಲ್ಲಿ ವಿಷ್ಣುವಿಗೆ ತುಳಸಿ ಅರ್ಪಿಸಿ, ಆದರೆ ತುಳಸಿಯನ್ನು ಉಗುರುಗಳಿಂದ ಕಿತ್ತಬೇಡಿ ಅಥವಾ ಸ್ನಾನ ಮಾಡದೆ ಸ್ಪರ್ಶಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಬೆರಳುಗಳ ತುದಿಯಿಂದಲೇ ತುಳಸಿ ದಳಗಳನ್ನು ತೆಗೆಯಿರಿ.


ಇದನ್ನೂ ಓದಿ-ಇಂದಿನಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ಕಾಟ ಆರಂಭ


>> ಅಕ್ಷಯ ತೃತೀಯ ದಿನ ಲಕ್ಷ್ಮಿ ಮತ್ತು ಶ್ರೀವಿಷ್ಣುವನ್ನು ಪ್ರತ್ಯೇಕವಾಗಿ ಪೂಜಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಅವರ ಪ್ರಕೋಪ ಜೀವನವನ್ನೇ ನಾಶಪಡಿಸುತ್ತದೆ.
>> ಅಕ್ಷಯ ತೃತೀಯ ದಿನದಂದು, ಮನೆಯ ಯಾವುದೇ ಭಾಗದಲ್ಲಿ ಕತ್ತಲೆ, ಕೊಳೆ ಇರಬಾರದು ಎಂಬುದನ್ನು ನೆನಪಿನಲ್ಲಿದೆ. ಈ ದಿನ ಮನೆಯನ್ನು ಶುಚಿಗೊಳಿಸಿ ಎಲ್ಲೆಡೆ ದೀಪ ಬೆಳಗಿರಿ. ತುಳಸಿ ಬಳಿ ದೀಪ ಬೆಳಗಿರಿ. ಇದಲ್ಲದೆ ಮನೆಯ ಮುಖ್ಯದ್ವಾರದ ಬಳಿ ಸಂಜೆ ಹೊತ್ತಿನಲ್ಲಿ ತುಪ್ಪದ ದೀಪವನ್ನು ಬೆಳಗಿರಿ.
>> ಅಕ್ಷಯ ತೃತೀಯ ದಿನದಂದು ತಾಮಸಿಕ ಆಹಾರವನ್ನು ಸೇವಿಸಬೇಡಿ, ಬ್ರಹ್ಮಚರ್ಯವನ್ನು ಪಾಲಿಸಿ. ಯಾರ ಬಗ್ಗೆಯೂ ಕೆಟ್ಟ ಆಲೋಚನೆಗಳನ್ನು ಮಾಡಬೇಡಿ. ಯಾರಿಗೂ ಕೆಟ್ಟ ಆಲೋಚನೆಗಳನ್ನು ತರಬೇಡಿ.
>> ಈ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಅದರಲ್ಲಿಯೂ ಕೂಡ ವಿಶೇಷವಾಗಿ ಬಡವರು ಮನೆಬಾಗಿಲಿಗೆ ಬಂದರೆ, ಅವರನ್ನು ಬರಿಗೈಯಲ್ಲಿ ಕಳುಹಿಸಬೇಡಿ. ಅನ್ನ, ಬಟ್ಟೆ, ಧನ, ಧಾನ್ಯದ ದಾನಗಳನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. 


ಇದನ್ನೂ ಓದಿ-1000 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಅದ್ಭುತ ಸಂಯೋಗ ; ಗ್ರಹಗಳ ಈ ಸ್ಥಿತಿ ಯಾವುದರ ಮುನ್ಸೂಚನೆ ?

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ  ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ