Akshaya Tritiya 2022 Do and Don't: ಭಾರತದಲ್ಲಿ ಹಲವು ತಿಥಿಗಳನ್ನು ಹಾಗೂ ಹಬ್ಬಗಳನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಕ್ಷಯ ತೃತೀಯ ಕೂಡ ಈ ತಿಥಿಗಳಲ್ಲಿ ಒಂದು ಎಂದು ಭಾವಿಸಲಾಗುತ್ತದೆ. ಈ ದಿನ ಆರಂಭಿಸಲಾಗುವ ಕಾರ್ಯದಲ್ಲಿ ಯಶಸ್ಸು ಸಿಕ್ಕೆ ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಅಕ್ಷಯ ತೃತಿಯಾ ದಿನ ಚಿನ್ನ ಖರೀಸಿರುವುದು ಅತ್ಯಂತ ಶುಭಕರ ಎಂದು ಭಾವಿಸಲಾಗುತ್ತದೆ. ಈ ದಿನ ಚಿನ್ನದಲ್ಲಿ ಮಾಡುವ ಹೂಡಿಕೆ ಕೂಡ ಸಾಕಷ್ಟು ಲಾಭ ತರುತ್ತದೆ. ಅಕ್ಷಯ ತೃತಿಯಾ ಚಿನ್ನದಲ್ಲಿ ಹೂಡಿಕೆ ಮಾಡಬಯಸುವವರಿಗೂ ಕೂಡ ತುಂಬಾ ವಿಶೇಷ ಎನ್ನಲಾಗುತ್ತದೆ. ಕಳೆದ ವರ್ಷ ಚಿನ್ನದಲ್ಲಿ ಹೂಡಿಕೆ ಮಾಡಿದವರು ಉತ್ತಮ ಆದಾಯ ಪಡೆದಿದ್ದಾರೆ. 


COMMERCIAL BREAK
SCROLL TO CONTINUE READING

ಅಕ್ಷಯ ತೃತಿಯಾ ದಿನ ಏನನ್ನು ಮಾಡಬೇಕು
>>  ಸುಖ-ಶಾಂತಿ- 11 ಗೋಮತಿ ಚಕ್ರಗಳನ್ನು ಕೆಂಪು ಬಣ್ಣದ ವಸ್ತ್ರದಲ್ಲಿರಿಸಿ, ಅದನ್ನು ಬೆಳ್ಳಿಯ ಪೊಟ್ಟಣದಲ್ಲಿಟ್ಟು ಪೂಜಾ ಸ್ಥಾನದಲ್ಲಿರಿಸುವುದರಿಂದ ಮನೆಯಲ್ಲಿ ಸದಾ ಸುಖ-ಶಾಂತಿಯ ವಾತಾವರಣ ನೆಲೆಸುತ್ತದೆ. 

>> ವ್ಯಾಪಾರದಲ್ಲಿ ಲಾಭಕ್ಕಾಗಿ ಏನು ಮಾಡಬೇಕು - 27 ಗೋಮತಿ ಚಕ್ರಗಳನ್ನು ಹಳದಿ ಅಥವಾ ಕೆಂಪು ಬಣ್ಣದ ವಸ್ತ್ರದಲ್ಲಿ ಕಟ್ಟಿ, ನಿಮ್ಮ ಪ್ರತಿಷ್ಠಾನದ ಮುಖ್ಯ ದ್ವಾರದಲ್ಲಿ ಕಟ್ಟುವುದರಿಂದ ನಿಮಗೆ ನಿಮ್ಮ ವ್ಯಾಪಾರದಲ್ಲಿ ನೀವು ಬಯಸಿದ ಲಾಭ ಪ್ರಾಪ್ತಿಯಾಗುತ್ತದೆ.


ಇದನ್ನೂ ಓದಿ-Akshaya Tritiya 2022: ಅಕ್ಷಯ ತೃತಿಯಾ ದಿನ ದೇವಿ ಲಕ್ಷ್ಮಿಯನ್ನು ಈ ರೀತಿ ಪ್ರಸನ್ನಗೊಳಿಸಿ, ವರ್ಷವಿಡಿ ಧನವೃಷ್ಟಿ ಗ್ಯಾರಂಟಿ

>> ಕಾರ್ಯಕ್ಷೇತ್ರ - ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಎದುರಾಗುತ್ತಿದ್ದರೆ ಅಥವಾ ಬಡ್ತಿ ನಿಂತು ಹೋಗಿದ್ದರೆ, ಅಕ್ಷಯ ತೃತಿಯಾ ದಿನ ಶಿವಾಲಯಕ್ಕೆ ತೆರಳಿ ನಿಮ್ಮ ಮನೋಕಾಮನೆಯನ್ನು ಸ್ಮರಿಸಿ ಶಿವಲಿಂಗಕ್ಕೆ 11 ಗೋಮತಿ ಚಕ್ರಗಳನ್ನು ಅರ್ಪಿಸಿ. ಇದರಿಂದ ಸಾಕಷ್ಟು ಲಾಭ ಸಿಗಲಿದೆ.


ಇದನ್ನೂ ಓದಿ-Akshaya Tritiya 2022: ಇತಿಹಾಸ, ಪೂಜಾ ವಿಧಾನ, ಚಿನ್ನ ಖರೀದಿಸುವ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ


>>  ಭಾಗ್ಯೋದಯ- ಭಾಗ್ಯೋದಯಕ್ಕಾಗಿ ಅಕ್ಷಯ ತೃತಿಯಾ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು 11 ಗೋಮತಿ ಚಕ್ರಗಳ ಚೂರ್ಣ ತಯಾರಿಸಿ. ನಂತರ ನಿಮ್ಮ ಇಷ್ಟದೇವರನ್ನು ಸ್ಮರಿಸುತ್ತ ಆ ಚೂರ್ಣವನ್ನು ನಿಮ್ಮ ಮನೆಯ ಮುಖ್ಯದ್ವಾರದ ಮುಂದೆ ಪಸರಿಸಿ. ಈ ಉಪಾಯ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ದೌರ್ಭಾಗ್ಯ ಅಂತ್ಯಗೊಂಡು ಭಾಗ್ಯೋದಯ ಆರಂಭಗೊಳ್ಳುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.