Akshaya Tritiya 2022: ಅಕ್ಷಯ ತೃತಿಯಾ ದಿನ ದೇವಿ ಲಕ್ಷ್ಮಿಯನ್ನು ಈ ರೀತಿ ಪ್ರಸನ್ನಗೊಳಿಸಿ, ವರ್ಷವಿಡಿ ಧನವೃಷ್ಟಿ ಗ್ಯಾರಂಟಿ
Akshaya Tritiya 2022 Remedies - ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ ತೃತೀಯ ದಿನವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ದಿನ ಮಾಡುವ ಕೆಲಸ, ಖರೀದಿ ಮತ್ತು ದಾನ ಶುಭ ಫಲಗಳನ್ನು ನೀಡುತ್ತದೆ ಎನ್ನಲಾಗಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ ತುಂಬಾ ವಿಶೇಷವಾಗಿದೆ.
Akshaya Tritiya 2022 Date - ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ಮಾಡಲು ಮತ್ತು ಖರೀದಿ ಮಾಡಲು ಈ ದಿನವು ತುಂಬಾ ಮಂಗಳಕರವಾಗಿದೆ. ಈ ವರ್ಷ ಅಕ್ಷಯ ತೃತೀಯ ಮೇ 3 ರಂದು ಅಂದರೆ ಮಂಗಳವಾರ ಆಚರಿಸಲಾಗುತ್ತದೆ. ಈ ದಿನದಂದು ಜನರು ವ್ಯಾಪಾರ, ಗೃಹಪ್ರವೇಶ, ಹೊಸ ಮನೆ-ಕಾರು, ಚಿನ್ನ ಮತ್ತು ಬೆಳ್ಳಿ ಖರೀದಿಯಂತಹ ಶುಭ ಕಾರ್ಯಗಳನ್ನು ಮಾಡುತ್ತಾರೆ, ಇದರಿಂದ ವರ್ಷವಿಡೀ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಅಕ್ಷಯ ತೃತೀಯ ದಿನದಂದು ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.
ಅಕ್ಷಯ ತೃತೀಯ ದಿನದಂದು ಈ ಕೆಲಸಗಳನ್ನು ಮಾಡಿ
>> ಅಕ್ಷಯ ತೃತೀಯ ದಿನ ಶ್ರೀವಿಷ್ಣು ಹಾಗೂ ದೇವಿ ಲಕ್ಷ್ಮಿಯನ್ನು ಒಟ್ಟಿಗೆ ಪೂಜಿಸಿ, ಹೀಗೆ ಮಾಡುವುದರಿಂದ ಇಬ್ಬರೂ ಪ್ರಸಂನರಾಗುತ್ತಾರೆ ಮತ್ತು ಜೀವನದಲ್ಲಿ ಸಾಕಷ್ಟು ಸಂತೋಷ ಮತ್ತು ಸಮೃದ್ಧಿ ಹರಿದುಬರುತ್ತದೆ. ಪೂಜೆಯಲ್ಲಿ ಕುಂಕುಮ ಮತ್ತು ಅರಿಶಿನವನ್ನು ಅರ್ಪಿಸಿ.
>> ಅಕ್ಷಯ ತೃತೀಯ ದಿನದಂದು ಏನನ್ನಾದರೂ ಖರೀದಿಸಿ. ಚಿನ್ನ ಮತ್ತು ಬೆಲ್ಲಿಯನ್ನೇ ಖರೀದಿಸಬೇಕು ಎಂಬ ಯಾವ ನಿಯಮವಿಲ್ಲ. ಚಿನ್ನ, ಬೆಳ್ಳಿ ಖರೀದಿಸಲು ಸಾಧ್ಯವಾಗದಿದ್ದರೆ ಧಾನ್ಯ, ಮಣ್ಣಿನ ಮಡಕೆಗಳನ್ನೂ ನೀವು ಖರೀದಿಸಬಹುದು.
>> ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಮೆಚ್ಚಿಸಲು, ಅಕ್ಷಯ ತೃತೀಯ ದಿನದಂದು 11 ಕವದೆಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಪೂಜಾ ಸ್ಥಳದಲ್ಲಿ ಇರಿಸಿ. ಇದರ ನಂತರ, ಮರುದಿನ ಅವುಗಳನ್ನು ಸುರಕ್ಷಿತವಾಗಿ ಅಥವಾ ಹಣವನ್ನು ಇರಿಸುವ ಬೀರುವಿನಲ್ಲಿ ಇರಿಸಿ. ಹಣಕಾಸಿನ ಮುಗ್ಗಟ್ಟು ಏರುದಾಗುವುದಿಲ್ಲ.
>> ಅಕ್ಷಯ ತೃತೀಯ ದಿನದಂದು ಮಾಡಲಾಗುವ ದಾನಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಮಾಡಿದ ದಾನಗಳು ಹೆಚ್ಚಿನ ಫಲಗಳನ್ನು ನೀಡುತ್ತವೆ. ಈ ದಿನ, ಬೀಸಣಿಗೆ, ಹಲಸಿನ ಹಣ್ಣು, ಸೌತೆಕಾಯಿ, ಸಕ್ಕರೆ, ತುಪ್ಪ, ನೀರು ಅಥವಾ ಈ ಋತುವಿನಲ್ಲಿ ಬರುವ ಹಣ್ಣುಗಳನ್ನು ದಾನ ಮಾಡಿ. ನೀವು ಮಡಕೆಯನ್ನು ಸಹ ದಾನಮಾದಬಹುದು.
>> ಅಕ್ಷಯ ತೃತೀಯ ದಿನದಂದು ಮನೆಯ ಪೂಜಾ ಸ್ಥಳದಲ್ಲಿ ಒಂದು ತೆಂಗಿನಕಾಯಿಯನ್ನು ಪ್ರತಿಷ್ಠಾಪಿಸಿ. ಶೀಘ್ರದಲ್ಲೇ ದೇವಿ ಲಕ್ಷ್ಮಿಯ ಕೃಪಾವೃಷ್ಟಿ ನಿಮ್ಮ ಮೇಲಾಗಲಿದೆ.
ಇದನ್ನೂ ಓದಿ-Akshaya Tritiya 2022: ಇತಿಹಾಸ, ಪೂಜಾ ವಿಧಾನ, ಚಿನ್ನ ಖರೀದಿಸುವ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ
>> ಯಾವುದೇ ಓರ್ವ ಬಡ ಹುಡುಗಿಯ ವಿವಾಹ ನೆರವೇರುತ್ತಿದ್ದರೆ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉಡುಗೊರೆ ನೀಡಿ. ಸಾಧ್ಯವಾದರೆ, ದಾನ ಮಾಡಿ.
ಇದನ್ನೂ ಓದಿ-Akshaya Tritiya 2022: ಅಕ್ಷಯ ತೃತಿಯಾ ದಿನ ಹಲವು ದಶಕಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ ಈ ಮಹಾಯೋಗ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ -
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.