ನವದೆಹಲಿ: Almond-Tulsi Sauce Recipe - ಪ್ರಸ್ತುತ ಭಾರತದಲ್ಲಿ (Corona Cases In India) ನಡೆಯುತ್ತಿರುವ ಕೊರೊನಾ ಕಾಲದಲ್ಲಿ ದೇಹದ ರೋಗ ನಿರೋಧಕ (Immunity) ಶಕ್ತಿಯ ಬಗ್ಗೆ ವಿಶೇಷ ಕಾಳಜಿವಹಿಸುವುದು ತುಂಬಾ ಮುಖ್ಯವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಜನರು ಸಾಕಷ್ಟು ರೋಗ ನಿರೋಧಕ ವರ್ಧಕ ಆಹಾರ (Immunity Booster Foods) ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಇಂದು ಗೋಡಂಬಿ, ಬಾದಾಮಿ, ವಾಲ್ ನಟ್ ಹಾಗೂ ತುಳಿಸಿ ಮುಂತಾದ ಪದಾರ್ಥಗಳು ನಮ್ಮ ಆಹಾರದ (Diet) ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ಒಂದು ವೇಳೆ ನೀವೂ ಕೂಡ ಈ ಪದಾರ್ಥಗಳನ್ನು ಹಾಗೆಯೇ ಸೇವಿಸಲು ಹಿಂಜರಿಯುತ್ತಿದ್ದರೆ, ಅವುಗಳಿಂದ ಸ್ವಾಧಿಷ್ಟ ಹಾಗೂ ಆರೋಗ್ಯದಿಂದ ಕೂಡಿದ ಡಿಶ್ ತಯಾರಿಸಬಹುದು. ಹಾಗಾದರೆ ಬನ್ನಿ ಬಾದಾಮ್-ತುಳಸಿ ಬಳಸಿ ಸಾಸ್ Almond Tulasi Sauce Recipe ಹೇಗೆ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಬಾದಾಮ್ ಸಾಸ್( Homemade Sauce) ಮಾರುಕಟ್ಟೆಯಲ್ಲಿ ಸಿಗುವ ಸಾಸ್ ಗೆ ಒಂದು ಉತ್ತಮ ಹಾಗೂ ಆರೋಗ್ಯದಿಂದ ಕೂಡಿದ ಆಯ್ಕೆಯಾಗಿದೆ. ಸೈಡ್ ಡಿಶ್ ರೂಪದಲ್ಲಿಯೂ ಕೂಡ ಇದನ್ನು ಬಳಸಬಹುದಾಗಿದೆ. ಕೊರೊನಾ ಕಾಲದಲ್ಲಿ ಇಮ್ಯೂನಿಟಿ ಹೆಚ್ಚಿಸಲು ಮನೆಯಲ್ಲಿಯೇ ಬಾದಾಮ್-ತುಳಸಿಯ ಸಾಸ್ ತಯಾರಿಸಬಹುದು. ಇದನ್ನು ತಯಾರಿಸುವುದು ತುಂಬಾ ಸುಲಭವಾಗಿದೆ ಹಾಗೂ ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಬನ್ನಿ ಬಾದಾಮ್-ತುಳಸಿ ಸಾಸ್ (Almond Sauce Recipe) ರೆಸಿಪಿ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ ಬನ್ನಿ.


ಬೇಕಾಗುವ ಸಾಮಗ್ರಿಗಳು (Almond Sauce Ingredients)
>>1 ಕಪ್ ಬಾದಾಮ್
>>ಅರ್ಧ ಕಪ್ ತುಳಸಿ ಎಲೆಗಳು.
<<ಅರ್ಧ ಚಮಚೆ ಕರಿ ಮೆಣಸು. 
>>ರುಚಿಗೆ ತಕ್ಕಂತೆ ಉಪ್ಪು
>>1 ಚಮಚೆ ಆಲಿವ್ ಎಣ್ಣೆ
>>2 ಬೆಳ್ಳುಳ್ಳಿ ಕುಡಿಗಳು
>>2 ಚಮಚೆ ಚೀಸ್ 
>>ಅರ್ಧ ಚಮಚೆ ಸಾಸಿವೆ


ತಯಾರಿಸುವ ವಿಧಾನ
1. ತುಳಸಿ ಎಲೆಗಳು, ಬೆಳ್ಳುಳ್ಳಿ, ಬಾದಾಮ್ ಹಾಗೂ ಚೀಸ್ ಗಳನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ
2. ಬಾಣಲೆಯೊಂದರಲ್ಲಿ ಆಲಿವ್ ಎಣ್ಣೆ ಬಿಸಿ ಮಾಡಿ ಪ್ಯಾನ್ ಗೆ ಸಾಸಿವೆ ಹಾಗೂ ಕರಿಮೆಣಸು ಹಾಕಿ.
3. ಈಗ ಈ ಪ್ಯಾನ್ ಗೆ ಮಿಕ್ಸ್ ಮಾಡಿರುವ ಪೇಸ್ಟ್ ಹಾಗೂ ಉಪ್ಪನ್ನು ಬೆರೆಸಿ, 1 ರಿಂದ 2 ನಿಮಿಷ ಬೇಯಿಸಿಕೊಳ್ಳಿ. 
4. ಎರಡು ನಿಮಿಷಗಳ ಬಳಿಕ ಗ್ಯಾಸ್ ಬಂದ್ ಮಾಡಿ, ತಂಪಾದ ಬಳಿಕ ಸವಿಯಲು ನೀಡಿ. ಇದನ್ನು ನೀವು ಹಲವು ದಿನಗಳ ಕಾಲ ಡಬ್ಬಿಯಲ್ಲಿ ಇಡಬಹುದು.