ಅಲೋವೆರಾ ಫೇಸ್ ಪ್ಯಾಕ್ಸ್ ಬಳಸಿ ಚರ್ಮದ ಈ ಸಮಸ್ಯೆಗಳಿಗೆ ಹೇಳಿ ಗುಡ್ ಬೈ
Aloe Vera Face Packs: ಅಲೋವೆರಾ ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ರಾಮಬಾಣ ಎಂದು ನಿಮಗೆ ತಿಳಿದೇ ಇದೆ. ಅಲೋವೆರಾ ಬಳಕೆಯಿಂದ ಸುಕ್ಕುಗಟ್ಟಿದ ಚರ್ಮ, ಮೊಡವೆ, ದುದ್ದುಗಳು, ಟ್ಯಾನಿಂಗ್ ನಂತಹ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದಕ್ಕಾಗಿ ಅಲೋವೆರಾವನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
Aloe Vera For Skin Problems: ಹಲವು ಚರ್ಮದ ಸಮಸ್ಯೆಗಳಿಗೆ ಅಲೋವೆರಾ ನೈಸರ್ಗಿಕ ಔಷಧಿಯಾಗಿದೆ. ಹಾಗಾಗಿಯೇ, ಅಲೋವೆರಾವನ್ನು ಚರ್ಮದ ಸರ್ವರೋಗ ನಿವಾರಕ ಎನ್ನಲಾಗುತ್ತದೆ. ಅದು ಚಳಿಗಾಲವಿರಲಿ, ಬೇಸಿಗೆಯಿರಲಿ ಯಾವುದೇ ಋತುಮಾನದಲ್ಲಿ ಅಲೋವೆರಾವನ್ನು ಬಳಕೆಯಿಂದ ಆರೋಗ್ಯಕರ ಚರ್ಮ (Healthy skin)ವನ್ನು ನಮ್ಮದಾಗಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಚರ್ಮದ ಯಾವ ಸಮಸ್ಯೆಗಳಿಗೆ ಅಲೋವೆರಾ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಅದನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
ಚರ್ಮಕ್ಕೆ ಅಲೋವೆರಾ ಪ್ರಯೋಜನ:
ಆಯುರ್ವೇದ (Ayurveda)ದ ಪ್ರಕಾರ, ಸಾಮಾನ್ಯವಾಗಿ ಬಾಧಿಸುವ ಮೊಡವೆಗಳು, ಟ್ಯಾನಿಂಗ್, ಚರ್ಮದ ದುದ್ದು, ವಯೋಸಹಜವಾಗಿ ಕಾಣಿಸುವ ಸುಕ್ಕುಗಳು, ಪಿಗ್ಮೆಂಟೇಶನ್ ನಂತಹ ಸಮಸ್ಯೆಗಳಿಗೆ ಅಲೋವೆರಾ ರಾಮಬಾಣವಿದ್ದಂತೆ ಎನ್ನಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಅಲೋವೆರಾದ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೂ, ನೀವು ಅಲೋವೆರಾದಿಂದ ಮನೆಯಲ್ಲಿಯೇ ಉತ್ತಮ ಫೇಸ್ ಪ್ಯಾಕ್ (Face Pakc) ಗಳನ್ನು ತಯಾರಿಸಬಹುದು. ನಿಯಮಿತವಾಗಿ ಈ ಫೇಸ್ ಪ್ಯಾಕ್ ಗಳನ್ನು ಬಳಸುವುದರಿಂದ ಇದು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಹಾಗಿದ್ದರೆ, ಮನೆಯಲ್ಲಿ ಅಲೋವೆರಾ ಫೇಸ್ ಪ್ಯಾಕ್ (Aloe Vera Face Pack) ತಯಾರಿಸುವುದು ಹೇಗೆ, ಇದನ್ನು ಬಳಸುವುದು ಹೇಗೆ ಎಂದು ತಿಳಿಯೋಣ...
ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಅಲೋವೆರಾ ಫೇಸ್ ಪ್ಯಾಕ್:
* ಅಲೋವೆರಾ ಮತ್ತು ಟೀ ಟ್ರೀ ಆಯಿಲ್ ಮಾಸ್ಕ್:
ಅಲೋವೆರಾ ಮತ್ತು ಟೀ ಟ್ರೀ ಆಯಿಲ್ ಮಾಸ್ಕ್ (Aloe Vera and Tea Tree Oil Mask) ಚರ್ಮವನ್ನು ಮಾಯಿಶ್ಚರೈಸ್ ಮಾಡಲು ತುಂಬಾ ಸಹಕಾರಿ ಆಗಿದೆ.
ಬೇಕಾಗಿರುವ ಸಾಮಾಗ್ರಿಗಳು-
1 ಚಮಚ ತಾಜಾ ಅಲೋವೆರಾ ಜೆಲ್
5-8 ಹನಿಗಳ ಟೀ ಟ್ರೀ ಆಯಿಲ್
ಅಲೋವೆರಾ ಮತ್ತು ಟೀ ಟ್ರೀ ಆಯಿಲ್ ಮಾಸ್ಕ್ ತಯಾರಿಸುವ ವಿಧಾನ:
ಮೊದಲಿಗೆ ಒಂದು ಬಟ್ಟಲಿನಲ್ಲಿ ಒಂದು ಚಮಚ ಅಲೋವೆರಾ ಜೆಲ್ ಹಾಕಿ, ಇದರೊಂದಿಗೆ ಟೀ ಟ್ರೀ ಆಯಿಲ್ ಅನ್ನು ಬೆರೆಸಿ. ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿ ರಾತ್ರಿಯಿಡೀ ಹಾಗೆ ಬಿಟ್ಟು ಬೆಳಿಗ್ಗೆ ಎದ್ದು ಶುದ್ಧವಾದ ನೀರಿನಿಂದ ಮುಖ ತೊಳೆಯಿರಿ.
ಇದನ್ನೂ ಓದಿ- ಒಂದು ವಾರದಲ್ಲಿ ಅಧಿಕ ತೂಕ ಕಳೆದುಕೊಳ್ಳಲು ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ!
* ಅಲೋವೆರಾ ಮತ್ತು ಸೌತೆಕಾಯಿ ಫೇಸ್ ಮಾಸ್ಕ್:
ಅಲೋವೆರಾ ಮತ್ತು ಸೌತೆಕಾಯಿ ಫೇಸ್ ಮಾಸ್ಕ್ (Aloe Vera and Cucumber Face Mask) ಬಳಕೆಯಿಂದ ಟ್ಯಾನಿಂಗ್ ರಿಮೂವ್ ಮಾಡಬಹುದು, ಚರ್ಮದಲ್ಲಿ ಮೂಡಿರುವ ಕಲೆಗಳು ನಿವಾರಣೆಯಾಗುತ್ತದೆ.
ಅಲೋವೆರಾ ಮತ್ತು ಸೌತೆಕಾಯಿ ಫೇಸ್ ಮಾಸ್ಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
1 ಸಣ್ಣ ಸಿಪ್ಪೆ ಸುಲಿದ ಸೌತೆಕಾಯಿ
2 ಟೇಬಲ್ ಸ್ಪೂನ್ ತಾಜಾ ಅಲೋವೆರಾ ಜೆಲ್
1 ಆಸ್ಪಿರಿನ್ ಟ್ಯಾಬ್ಲೆಟ್
ಅಲೋವೆರಾ ಮತ್ತು ಸೌತೆಕಾಯಿ ಫೇಸ್ ಮಾಸ್ಕ್ ತಯಾರಿಸುವ ವಿಧಾನ:
ಮೊದಲಿಗೆ ಒಂದು ಸಣ್ಣ ಸೌತೆಕಾಯಿಯನ್ನು ತುರಿದು ಅದರ ರಸ ತೆಗೆದುಕೊಳ್ಳಿ. ಬಳಿಕ ಒಂದು ಬಟ್ಟಲಿನಲ್ಲಿ ಸೌತೆಕಾಯಿ ರಶದೊಂದಿಗೆ 2 ಟೇಬಲ್ ಸ್ಪೂನ್ ತಾಜಾ ಅಲೋವೆರಾ ಜೆಲ್, 1 ಆಸ್ಪಿರಿನ್ ಟ್ಯಾಬ್ಲೆಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದು ಕೋಮಲವಾದ ಕಾಂತಿಯುತ ತ್ವಚೆಯನ್ನು ನೀಡಲು ಪ್ರಯೋಜನಕಾರಿ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.