Bathroom Cleaning: ಬಾತ್ ರೂಮ್ ಫಳಫಳ ಅಂತಾ ಹೊಳೆಯಬೇಕೆ? ಹಾಗಾದ್ರೆ ಈ ಪುಟ್ಟ ಕಲ್ಲನ್ನು ಉಪಯೋಗಿಸಿ ನೋಡಿ
ಬಾತ್ರೂಮ್ ಅನ್ನು ಸ್ವಚ್ಛಗೊಳಿಸಲು ಆಲಂ ಅನ್ನು ಬಳಸುವುದು ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ. ಆಲಂ ಎಂಬುದು ಒಂದು ಕಲ್ಲಿನ ತುಂಡು. ಇದನ್ನು ಹಿಂದಿಯಲ್ಲಿ ಫಿಟ್ಕರಿ ಎಂದೂ ಸಹ ಕರೆಯುತ್ತಾರೆ. ಈ ಆಲಂ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗಲಿದ್ದು, ಬಳಸಲು ತುಂಬಾ ಸುಲಭವಾಗಿದೆ.
Bathroom Cleaning: ಸ್ನಾನಗೃಹವು ಮನೆಯಲ್ಲಿ ಪ್ರಮುಖ ಭಾಗವಾಗಿದೆ. ಯಾವಾಗಲೂ ನೀರಿನ ಬಳಕೆಯಿಂದಾಗಿ, ಸ್ನಾನಗೃಹವು ತುಂಬಾ ಕೊಳಕು ಆಗಿರುತ್ತದೆ. ಅದನ್ನು ಸ್ವಚ್ಛಗೊಳಿಸಲು ಮತ್ತು ತಾಜಾವಾಗಿಡುವುದೇ ದೊಡ್ಡ ಸವಾಲಾಗಿದೆ. ಬಾತ್ ರೂಮ್ ನ ಸ್ವಚ್ಛತೆಯ ಬಗ್ಗೆ ನಿಮಗೂ ಚಿಂತೆಯಿದ್ದರೆ ಇಂದು ನಾವು ನಿಮಗೆ ಅಂತಹ ವಿಷಯದ ಬಗ್ಗೆ ಹೇಳುತ್ತಿದ್ದೇವೆ, ಇದನ್ನು ಬಳಸಿಕೊಂಡು ನೀವು ಸುಲಭವಾಗಿ ಬಾತ್ ರೂಂ ಅನ್ನು ಕ್ಲೀನ್ ಮಾಡಬಹುದು.
ಇದನ್ನೂ ಓದಿ: Skin Care Tips: ಕಾಂತಿಯುತ ತ್ವಚ್ವೆಗಾಗಿ ರಾತ್ರಿ ಮಲಗುವ ಮುನ್ನ ಇದನ್ನು ತಪ್ಪದೇ ಅಪ್ಲೈ ಮಾಡಿ
ಬಾತ್ರೂಮ್ ಕ್ಲೀನಿಂಗ್ ನಲ್ಲಿ ಆಲಂ ಬಳಸಿ:
ಬಾತ್ರೂಮ್ ಅನ್ನು ಸ್ವಚ್ಛಗೊಳಿಸಲು ಆಲಂ ಅನ್ನು ಬಳಸುವುದು ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ. ಆಲಂ ಎಂಬುದು ಒಂದು ಕಲ್ಲಿನ ತುಂಡು. ಇದನ್ನು ಹಿಂದಿಯಲ್ಲಿ ಫಿಟ್ಕರಿ ಎಂದೂ ಸಹ ಕರೆಯುತ್ತಾರೆ. ಈ ಆಲಂ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗಲಿದ್ದು, ಬಳಸಲು ತುಂಬಾ ಸುಲಭವಾಗಿದೆ. ಇನ್ನು ಬಾತ್ರೂಮ್ ಸ್ವಚ್ಛಗೊಳಿಸಲು ಆಲಂನ್ನು ಹೇಗೆ ಬಳಸಬೇಕೆಂದು ನಾವು ನಿಮಗೆ ಹೇಳುತ್ತೇವೆ.
ವಾಶ್ ಬೇಸಿನ್ ಮತ್ತು ಸಿಂಕ್ ಅನ್ನು ಸ್ವಚ್ಛಗೊಳಿಸಲು ನೀವು ಆಲಂನ್ನು ಬಳಸಬಹುದು. ಇದಕ್ಕಾಗಿ ಒಂದು ಚೊಂಬು ನೀರಿನಲ್ಲಿ ಆಲಂನ್ನು ಹಾಕಿ ಸುಮಾರು 20 ನಿಮಿಷಗಳ ಕಾಲ ಬಿಡಿ. ಅದು ನೀರಿನಲ್ಲಿ ಚೆನ್ನಾಗಿ ಕರಗಿದಾಗ, ಆ ನೀರಿನಲ್ಲಿ ಒಂದು ಚಮಚ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ವಾರಕ್ಕೆ ಎರಡು ಬಾರಿ ವಾಶ್ ಬೇಸಿನ್ ಅನ್ನು ಸ್ವಚ್ಛಗೊಳಿಸಿ.
ನಲ್ಲಿ ಮತ್ತು ಶವರ್ ನ ತುಕ್ಕು ಸ್ವಚ್ಛಗೊಳಿಸಲು ಬಳಕೆ:
ನಿರಂತರವಾಗಿ ನೀರಿಗೆ ಒಡ್ಡಿಕೊಳ್ಳುವುದರಿಂದ, ಬಾತ್ರೂಮ್ ನಲ್ಲಿಗಳು ಮತ್ತು ಶವರ್ಗಳು ತುಕ್ಕು ಮತ್ತು ಕೊಳಕುಗಳಿಂದ ಹೆಚ್ಚಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ, ಇದನ್ನು ಆಲಂನಿಂದ ತೊಡೆದುಹಾಕಬಹುದು. ಇದಕ್ಕಾಗಿ 2 ಇಂಚು ಆಲಂ ಅಥವಾ ಅದರ ಪುಡಿಯನ್ನು ಒಂದು ಮಗ್ ನೀರಿನಲ್ಲಿ ಬೆರೆಸಿ ಚೆನ್ನಾಗಿ ಕಲಸಿ ಅದಕ್ಕೆ ಎರಡು ಚಮಚ ವಿನೆಗರ್ ಸೇರಿಸಿ. ಟ್ಯಾಪ್ ಮತ್ತು ಶವರ್ ಮೇಲೆ ಆಲಂ ನೀರನ್ನು ಸ್ಪ್ರೇ ಮಾಡಿ. ಸ್ವಲ್ಪ ಸಮಯ ಬಿಟ್ಟು ನಂತರ ಸ್ವಚ್ಛಗೊಳಿಸುವ ಬ್ರಷ್ ಅಥವಾ ಸ್ಕ್ರಬ್ ಸಹಾಯದಿಂದ ಸ್ಕ್ರಬ್ ಮಾಡಿ. ಇದರ ನಂತರ, ಟ್ಯಾಪ್ ಅನ್ನು ನೀರಿನಿಂದ ತೊಳೆಯಿರಿ ಮತ್ತು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಬಾತ್ರೂಮ್ ಚರಂಡಿ ಸ್ವಚ್ಛಗೊಳಿಸುವುದು:
ಆಗಾಗ್ಗೆ ನಾವು ಬಾತ್ರೂಮ್ ಅನ್ನು ಸ್ವಚ್ಛಗೊಳಿಸುತ್ತೇವೆ, ಆದರೆ ಬಾತ್ರೂಮ್ ನ ಡ್ರೈನ್ ಕೊಳಕು ಹಾಗೇ ಉಳಿಯುತ್ತದೆ. ಅದರಿಂದ ವಾಸನೆ ಸಹ ಬರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ಒಂದು ಲೀಟರ್ ನೀರಿನಲ್ಲಿ 2 ಚಮಚ ಆಲಂ ಪುಡಿಯನ್ನು ಬೆರೆಸಿ ಬಿಸಿ ಮಾಡಿ. ನಂತರ ಎರಡು ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಈ ನೀರನ್ನು ಸ್ನಾನದ ಚರಂಡಿಗೆ ಹಾಕಿ ಮತ್ತು ಸ್ವಲ್ಪ ಸಮಯ ಬಿಟ್ಟು ನಂತರ ನೀರಿನಿಂದ ತೊಳೆಯಿರಿ. ಈ ಕಾರಣದಿಂದಾಗಿ, ಚರಂಡಿಯೊಳಗೆ ಬೆಳೆಯುವ ಬ್ಯಾಕ್ಟೀರಿಯಾ ಮತ್ತು ಕೀಟಗಳು ಸಾಯುತ್ತವೆ.
ಇದನ್ನೂ ಓದಿ: ಮಹಿಳೆಯರು ತವರಿಗೆ ಹೋಗೋ ಮುನ್ನ ಈ ಸಣ್ಣ ಕಾರ್ಯ ಮಾಡಿದ್ರೆ ಹಣದ ಹೊಳೆ ಹರಿದುಬರುತ್ತೆ!
ಟೈಲ್ ಮತ್ತು ಕನ್ನಡಿ ಸ್ವಚ್ಛಗೊಳಿಸಲು ಹೇಗೆ:
ಬಾತ್ರೂಮ್ ಟೈಲ್ಸ್ ಮತ್ತು ಕನ್ನಡಿಗಳು ಸಾಮಾನ್ಯವಾಗಿ ನೀರಿನ ಕಲೆಗಳಿಂದ ಬೇಗ ಕೆಡುತ್ತವೆ. ಇದನ್ನು ಆಲಂನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದಕ್ಕಾಗಿ 1 ರಿಂದ 2 ಇಂಚಿನ ಆಲಂನ್ನು 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಬಿಸಿ ಮಾಡಿ. ಇದರ ನಂತರ, ಈ ನೀರಿನಿಂದ ಬಟ್ಟೆಯನ್ನು ತೇವಗೊಳಿಸಿ ಮತ್ತು ಟೈಲ್ ಮತ್ತು ಕನ್ನಡಿಯ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ