ಮಧುಮೇಹದಿಂದ ಹಿಡಿದು ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ ಕೇವಲ ಒಂದು ಎಲೆ
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಜೀರ್ಣಕಾರಿ ಶಕ್ತಿಯನ್ನು ಬಲಪಡಿಸುವವರೆಗೆ, ಬಿಲ್ವ ಪತ್ರೆ ಸಹಕಾರಿಯಾಗಿದೆ. ನೀವೂ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದೇ ಬಿಲ್ವ ಪತ್ರೆ ತಿನ್ನಲು ಆರಂಭಿಸಿ.
ಬೆಂಗಳೂರು : ಇಂದಿನ ಜೀವನಶೈಲಿಯಲ್ಲಿ (lifestyle)ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯ ಕಾರಣದಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ (Health problem). ಇದರಲ್ಲಿ ಮಧುಮೇಹ (diabetes), ಹೃದಯಾಘಾತ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಬಿಲ್ವ ಪತ್ರೆ ತಿನ್ನುವ ಮೂಲಕ, ಅಂತಹ ಕಾಯಿಲೆಗಳನ್ನು ದೂರ ಮಾಡಬಹುದು (Bael Leaves Advantages) . ಬಿಲ್ವ ಪತ್ರೆ ಶಿವನಿಗೆ ತುಂಬಾ ಪ್ರಿಯವಾದುದು. ಹಾಗಾಗಿ shiva ಪ್ರತಿ ಪೂಜೆಯಲ್ಲಿಯೂ ಬಿಲ್ವ ಪತ್ರೆಯನ್ನು ಅರ್ಪಿಸಲಾಗುತ್ತದೆ.
ಬಿಲ್ವ ಪತ್ರೆ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ :
ಬಿಲ್ವ ಪತ್ರೆ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ (Bael Leaves Advantages). ಇದನ್ನು ತಿನ್ನುವುದರಿಂದ ಹಲವು ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಬಿಲ್ವ ಪತ್ರೆ ಆ್ಯಂಟಿ ಒಕ್ಸಿಡೆಂಟ್ ಗುಣಗಳಿಂದ ಕೂಡಿದೆ. ಮಾತ್ರವಲ್ಲ ಇದರಲ್ಲಿ ಪೌಷ್ಟಿಕಾಂಶಗಳು ಕೂಡಾ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ರೈಬೋಫ್ಲೋಬಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಬಿ1, ಬಿ6, ಬಿ12 ಹೇರಳವಾಗಿದೆ.
ಇದನ್ನೂ ಓದಿ : High Cholesterol: ನಿಮಗೂ ಈ ಲಕ್ಷಣಗಳು ಗೋಚರಿಸುತ್ತವೆಯೇ? ಇದು ಅಧಿಕ ಕೊಲೆಸ್ಟ್ರಾಲ್ ಅಪಾಯವಿರಬಹುದು ಎಚ್ಚರ!
ಈ ಹಸಿರು ಎಲೆ ತಿಂದರೆ ಆಗುವ ಲಾಭಗಳು :
ಮಲಬದ್ಧತೆಗೆ ರಾಮಬಾಣ :
ಮಲಬದ್ಧತೆಯನ್ನು (Constipation)ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿವೆ. ಮಲಬದ್ಧತೆಯ ಸಮಸ್ಯೆಯಲ್ಲಿ, ಬಿಲ್ವ ಪತ್ರೆಯನ್ನು ಉಪ್ಪು (Salt) ಮತ್ತು ಕರಿಮೆಣಸಿನೊಂದಿಗೆ ಸೇವಿಸಬಹುದು. ಹೀಗೆ ಮಾಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ :
ಹೊಟ್ಟೆಯನ್ನು ಸ್ವಚ್ಛಗೊಳಿಸುವಲ್ಲಿಯೂ ಈ ಎಲೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಲ್ಯಾಕ್ಟೆಸಿವ್ ಪ್ರಾಪರ್ಟಿಯನ್ನು ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ (how to improve digestion). ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬಿಲ್ವ ಪತ್ರೆಯನ್ನು ಬಳಸಬಹುದು.
ಇದನ್ನೂ ಓದಿ : ಸ್ಟೀಮ್ ತೆಗೆದುಕೊಳ್ಳುವುದು ಶೀತಕ್ಕೆ ಮಾತ್ರವಲ್ಲ ಅನೇಕ ರೀತಿಯಲ್ಲಿ ಪ್ರಯೋಜನಕಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.