Hair growth Tips : ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕಾರಣಗಳು ಹಲವಾರು. ಇವುಗಳಲ್ಲಿ, ಒತ್ತಡ ಮತ್ತು ಪೋಷಕಾಂಶಗಳ ಕೊರತೆಯು ಬಹು ಮುಖ್ಯ ಕಾರಣವಾಗಿದೆ. ಕೂದಲು ಉದುರುತ್ತಾ ಹೋದಂತೆ ಕೂದಲು ತೆಳ್ಳಗಾಗುತ್ತದೆ. ಒಮ್ಮೊಮ್ಮೆ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯದೆ ಹೋದರೆ, ಬೋಳು ತಲೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದರೆ ತೆಂಗಿನೆಣ್ಣೆಯೊಂದಿಗೆ ಈ ಒಂದು ವಸ್ತುವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಉದುರುವುದನ್ನು ತಡೆಯುತ್ತದೆ. ಮಾತ್ರವಲ್ಲ ಕೂದಲು ಉದುರಿದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವಂತೆಯೂ ಮಾಡುತ್ತದೆ.   


COMMERCIAL BREAK
SCROLL TO CONTINUE READING

ಕೂದಲಿನ ಸಮಸ್ಯೆಗಳು  ಕಾಣಿಸಿಕೊಳ್ಳಲು ಕಾರಣ : 
ಈಗಿನ ಬ್ಯುಸಿ ಲೈಫ್ ನಲ್ಲಿ ಮನುಷ್ಯ ತನ್ನ ದೇಹಕ್ಕೆ ಸಂಬಂಧಿಸಿದ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾನೆ. ಅವುಗಳಲ್ಲಿ, ಕೂದಲು ಉದುರುವುದು ಮತ್ತು ಅವುಗಳ ಬೆಳವಣಿಗೆ ನಿಲ್ಲುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಇದರ ಹಿಂದೆ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ಅಸಮರ್ಪಕ ಆಹಾರ ಮತ್ತು ಅಸಮರ್ಪಕ ಜೀವನಶೈಲಿ ಮುಂತಾದ ಹಲವು ಕಾರಣಗಳಿರಬಹುದು. ಆದರೆ, ತೆಂಗಿನ ಎಣ್ಣೆ ಮತ್ತು ಅಲೋವೆರಾದ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಬಹುದು.


ಇದನ್ನೂ ಓದಿ : ತೂಕ ಇಳಿಕೆ ಜೊತೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಹುರಿಗಡಲೆ


ತೆಂಗಿನ ಎಣ್ಣೆ-ಅಲೋವೆರಾ ಕೂದಲಿಗೆ ಹೇಗೆ ಪ್ರಯೋಜನಕಾರಿ? :
ಅಲೋವೆರಾ ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ನೆತ್ತಿಯಿಂದ ಡೆಡ್ ಸೆಲ್ ಗಳನ್ನು ತೆಗೆದುಹಾಕುತ್ತದೆ. ಅಲೋವೆರಾ ಮತ್ತು ತೆಂಗಿನ ಎಣ್ಣೆಯು ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲನ್ನು ಬೇರಿನಿಂದ ಸ್ವಚ್ಛಗೊಳಿಸುತ್ತದೆ. ಅಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಇವೆರಡೂ ಕೂದಲಿನಿಂದ ತಲೆಹೊಟ್ಟು, ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸಮಸ್ಯೆಯನ್ನು ನಿವಾರಿಸುತ್ತದೆ. 


ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ :
ಮೊದಲಿಗೆ, 1 ಕಪ್ ನಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ. 
ನಂತರ ಅದಕ್ಕೆ 4 ಚಮಚ ಅಲೋವೆರಾ ಜೆಲ್ ಸೇರಿಸಿ.
ಈಗ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
ಹೀಗೆ ತಯಾರಿಸಿಕೊಂಡ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. 
 ಹೀಗೆ ವಾರಕ್ಕೆ 3 ಬಾರಿ ಮಾಡುತ್ತಿರಬೇಕು.  
ಕೂದಲಿಗೆ ಹಚ್ಚಿದ ಮಿಶ್ರಣವನ್ನು ರಾತ್ರಿಯಿಡೀ ಹಾಗೆಯೇ ಬಿಡಬೇಕು. 
ಬೆಳಗ್ಗೆ ಎದ್ದು ಮೈಲ್ಡ್ ಶಾಂಪೂವಿನ ಸಹಾಯದಿಂದ ಕೂದಲನ್ನು ತೊಳೆಯಿರಿ. 
ಹೀಗೆ ಮಾಡುತ್ತಾ ಬಂದರೆ ಕೂದಳು ವೇಗವಾಗಿ ಬೆಳೆಯುತ್ತದೆ.


ಇದನ್ನೂ ಓದಿ : ಹಲವು ಚರ್ಮ ಸಮಸ್ಯೆಗಳಿಗೆ ರಾಮಬಾಣ ಉಪಾಯ ಈ ಗಿಡದ ಎಳೆಗಳ ನೀರು, ಇಂದೇ ಟ್ರೈ ಮಾಡಿ ನೋಡಿ!


ಅಲೋವೆರಾ-ತೆಂಗಿನ ಎಣ್ಣೆ ಕೂದಲಿಗೆ ಹೇಗೆ ಪ್ರಯೋಜನಕಾರಿ : 
ಅಲೋವೆರಾ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಕೂದಲು ಕಿರುಚೀಲಗಳಿಗೆ ಪೋಷಣೆಯನ್ನು ಒದಗಿಸುತ್ತದೆ. ಇದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ರಕ್ತವು ಕೂದಲಿನ ಕಿರುಚೀಲಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಕೂದಲು ಬೆಳೆಯುತ್ತದೆ.  ಮಾತ್ರವಲ್ಲ ಕೂದಲಿಗೆ ಹೊಳಪು ಕೂಡಾ ಬರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.