Coconut Oil For Premature White Hair : ಪ್ರಸ್ತುತ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಎದುರಾಗುವುದು ಸಾಮಾನ್ಯವಾಗಿದೆ. ಯುವಕರು ಇದರಿಂದ ಕೆಲವೊಮ್ಮೆ ಮುಜುಗರಕ್ಕೆ ಒಳಗಗಾಬೇಕಾಗುತ್ತದೆ. ಅಲ್ಲದೆ, ಅವರ ಆತ್ಮವಿಶ್ವಾಸವೂ ಕುಗ್ಗುತ್ತದೆ. ಇದಕ್ಕೆ ಕಾರಣ ಅನೇಕವಿರಬಹುದು. ಆದರೆ ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂಡಾ ಕೂದಲಿನ ಸಮಸ್ಯೆಗೆ ಕಾರಣವಾಗುತ್ತದೆ. ಒಮ್ಮೆ ಬೆಳ್ಳಗಾದ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಬೇಕಾದರೆ   ತೆಂಗಿನ ಎಣ್ಣೆಯ ಸಹಾಯವನ್ನು ತೆಗೆದುಕೊಳ್ಬಹುದು. ತೆಂಗಿನೆಣ್ಣೆಗೆ 3 ವಸ್ತುಗಳನ್ನು ಮಿಶ್ರಣ ಮಾಡಬೇಕು.


COMMERCIAL BREAK
SCROLL TO CONTINUE READING

ತೆಂಗಿನ ಎಣ್ಣೆಯನ್ನು ಬಳಸಿ ಕೂದಲನ್ನು ಕಪ್ಪಾಗಿಸುವ ವಿಧಾನಗಳು : 
1. ತೆಂಗಿನ ಎಣ್ಣೆ ಮತ್ತು ಮೆಹಂದಿ :

ತೆಂಗಿನ ಎಣ್ಣೆಯನ್ನು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.  ಗೋರಂಟಿ ನೈಸರ್ಗಿಕ ಕೂದಲಿನ ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ.ಗೋರಂಟಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ. ನಂತರ 4 ರಿಂದ 5 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ. ಈಗ ಈ ಎಣ್ಣೆಗೆ ಒಣಗಿದ ಗೋರಂಟಿ ಎಲೆಗಳನ್ನು ಸೇರಿಸಿ. ಎಣ್ಣೆಯಲ್ಲಿ ಬಣ್ಣ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ. ನಂತರ ಉಗುರು ಬೆಚ್ಚಗಿರುವಾಗಲೇ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ನಂತರ, ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಕೂದಲು ಕಪ್ಪಾಗುತ್ತದೆ. 


ಇದನ್ನೂ ಓದಿ : ಈ 5 ರೀತಿಯ ಹಿಟ್ಟು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ
 
2.ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ :
ಬಿಳಿ ಕೂದಲಿನ ಸಮಸ್ಯೆಯ ಪರಿಹಾರಕ್ಕಾಗಿ ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ ಮಿಶ್ರಣ  ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಆಯುರ್ವೇದ ಗುಣಗಳು ಕಂಡುಬರುತ್ತವೆ. ನೆಲ್ಲಿಕಾಯಿ ನಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ. ಈ ಹಣ್ಣಿಗೆ ಕಾಲಜನ್ ಹೆಚ್ಚಿಸುವ ಶಕ್ತಿ ಇದೆ. ಆಮ್ಲಾದಲ್ಲಿ ಹೆಚ್ಚಿನ ಪ್ರಮಾಣದ ಆರಿಲ್, ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಕಂಡುಬರುತ್ತದೆ. ಇದು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. 4 ಚಮಚ ತೆಂಗಿನ ಎಣ್ಣೆಯಲ್ಲಿ 2 ರಿಂದ 3 ಚಮಚ ಆಮ್ಲಾ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಅದನ್ನು ಒಂದು ಪಾತ್ರೆಯಲ್ಲಿ ಇರಿಸಿ ಬಿಸಿ ಮಾಡಿ. ಈ ಪೇಸ್ಟ್ ತಣ್ಣಗಾದಾಗ ಅದನ್ನು ಕೂದಲಿಗೆ ಹಚ್ಚಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿಗೆ ಉತ್ತಮ ಪೋಷಣೆ ಸಿಗುತ್ತದೆ. 


ಇದನ್ನೂ ಓದಿ : Travelling Tips: ಪ್ರಯಾಣದ ವೇಳೆ ವಾಂತಿಯ ಸಮಸ್ಯೆಯೇ..? ಹಾಗಾದರೆ ಚಿಂತಿಸಬೇಡಿ ಈ ಟಿಪ್ಸ್‌ ಟ್ರೈ ಮಾಡಿ..


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.