ಕಪ್ಪಾದ ಉದ್ದ ಕೂದಲಿಗೆ ಈ ಒಂದೇ ಒಂದು ವಸ್ತು ಬಳಸಿದರೆ ಸಾಕು!
ಮೊಟ್ಟೆಯ ಹಳದಿ ಭಾಗವು ಕೂದಲಿಗೆ ಉತ್ತಮ ಪ್ರಮಾಣದ ಪ್ರೋಟೀನ್ ನೀಡುತ್ತದೆ. ಇದು ಕೂದಲ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಬೆಂಗಳೂರು : ಉದ್ದನೆಯ ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಉದ್ದನೆಯ ಕೂದಲನ್ನು ಪಡೆಯಬೇಕೆನ್ನುವ ಹಂಬಲದಿಂದ ಹೆಣ್ಣು ಮಕ್ಕಳು ಅದೆಷ್ಟೋ ಸರ್ಕಸ್ ಮಾಡುತ್ತಾರೆ. ದುಬಾರಿ ಶಾಂಪು, ಎಣ್ಣೆ, ಕಂಡೀಶನರ್ ಎಂದೆಲ್ಲಾ ಖರ್ಚು ಮಾಡುತ್ತಾರೆ. ಆದರೂ ತಮಗೆ ಬೇಕಾದ ಫಲಿತಾಂಶ ಮಾತ್ರ ಸಿಗುವುದಿಲ್ಲ. ಆದರೆ ಮೊಟ್ಟೆಯು ನಿಮ್ಮ ಕೂದಲನ್ನು ಸದೃಢವಾಗಿಸುತ್ತದೆ. ಕಪ್ಪು ಮತ್ತು ದಟ್ಟ ಕೂದಲು ಬೆಳೆಯಲು ಮೊಟ್ಟೆ ಸಹಾಯ ಮಾಡುತ್ತದೆ. ಮೊಟ್ಟೆಯ ಹಳದಿ ಭಾಗವು ಕೂದಲಿಗೆ ಉತ್ತಮ ಪ್ರಮಾಣದ ಪ್ರೋಟೀನ್ ನೀಡುತ್ತದೆ. ಇದು ಕೂದಲ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಒಣ ಕೂದಲು ಅಥವಾ ಒಡೆಯುವ ಕೂದಲಿಗೆ ಮೊಟ್ಟೆಯ ಹಳದಿ ಭಾಗವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮೃದುವಾದ, ಹೊಳೆಯುವ, ದಟ್ಟವಾದ ಕೂದಲು ಪಡೆಯುವುದು ಸಾಧ್ಯವಾಗುತ್ತದೆ.
ಕೂದಲು ಸಾಕಷ್ಟು ಪ್ರೋಟೀನ್ ಪಡೆಯದಿದ್ದರೆ, ಅದು ಸೀಳು ಬಿಡಲು ಪ್ರಾರಂಭಿಸುತ್ತದೆ. ಹೀಗಾದಾಗ ಕೂದಲ ಬೆಳವಣಿಗೆ ನಿಲ್ಲುತ್ತದೆ. ಕೂದಲು ಉದುರುತ್ತದೆ. ಕೂದಲು ನಿರ್ಜೀವಗೊಳ್ಳುತ್ತದೆ. ಆದರೆ ಮೊಟ್ಟೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹಾಗಾದರೆ, ಕೂದಲ ಬೆಳವಣಿಗೆಗೆ ಮೊಟ್ಟೆಯನ್ನು ಹೇಗೆ ಬಳಸುವುದು ನೋಡೋಣ.
ಇದನ್ನೂ ಓದಿ : Diabetes Control Tips : ಈ 'ಹಣ್ಣು' ಮಧುಮೇಹಿಗಳಿಗೆ ವರದಾನ
ದಪ್ಪ ಕೂದಲಿಗೆ ಮೊಟ್ಟೆಯ ಹೇರ್ ಮಾಸ್ಕ್ :
-ಇದಕ್ಕಾಗಿ ಮೊದಲು 2 ಮೊಟ್ಟೆಗಳ ಹಳದಿ ಲೋಳೆಯನ್ನು ಹೊರತೆಗೆಯಿರಿ.
-ಇದನ್ನು ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
- ನಂತರ, ಬೀಟ್ ಮಾಡಿಟ್ಟುಕೊಂಡ ಮಿಶ್ರಣವನ್ನು ಕೂದಲಿಗೆ ಹಚ್ಚಿ.
- ಸುಮಾರು ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.
- ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಬಳಸಬಹುದು.
ಮೊಟ್ಟೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ, ಕಪ್ಪಾಗಿ, ಸದೃಢವಾಗಿ ಬೆಳೆಯುತ್ತದೆ.
ಈ ಪ್ರಮುಖ ವಿಷಯವನ್ನು ನೆನಪಿನಲ್ಲಿಡಿ :
ಮೊಟ್ಟೆಯು ಪೋಷಕಾಂಶಗಳ ಆಗರವಾಗಿದೆ. ಇದರಲ್ಲಿ ಪ್ರಮುಖ ಪ್ರೋಟೀನ್ ಆಗಿದೆ. ಕೂದಲಿಗೆ ಪ್ರೋಟೀನ್ ಬಹಳ ಮುಖ್ಯ. ಸಾಮಾನ್ಯ ಕೂದಲು ಹೊಂದಿರುವ ಯಾರಾದರೂ ಮೊಟ್ಟೆಯ ಎರಡೂ ಭಾಗಗಳನ್ನು ಅಂದರೆ ಹಳದಿ ಮತ್ತು ಬಿಳಿ ಬಣ್ಣವನ್ನು ಕೂದಲಿಗೆ ಹಚ್ಚಬಹುದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಮತ್ತೊಂದೆಡೆ, ಎಣ್ಣೆಯುಕ್ತ ಕೂದಲು ಹೊಂದಿರುವವರು ನೆತ್ತಿಯ ಮೇಲೆ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಹಚ್ಚಬೇಕು.
ಇದನ್ನೂ ಓದಿ : White Hair : ಬಿಳಿ ಕೂದಲು ಸಮಸ್ಯೆಗೆ ಬಳಸಿ ಈ ನೈಸರ್ಗಿಕ ವಿಧಾನ : ಬುಡದಿಂದ ಕಪ್ಪಾಗುತ್ತೆ ಕೂದಲು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.