ಬೆಂಗಳೂರು : ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ, ಮೃದು, ಕಪ್ಪು ಮತ್ತು ಉದ್ದವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ  ತಮಗೆ ತಿಳಿದಿರುವ ಎಲ್ಲಾ ವಿದ್ಯೆಗಳನ್ನೂ ಪ್ರಯತ್ನಿಸುತ್ತಾರೆ. ದುಬಾರಿ ಎಣ್ಣೆ,   ಹೇರ್ ಮಾಸ್ಕ್, ಶಾಂಪೂ, ಕಂಡೀಶನರ್ ಹೀಗೆ ಎಲ್ಲಾ ರೀತಿಯ ಉತ್ಪನ್ನಗಳ ಮೇಲೆ ಹಣ ಸುರಿಯುತ್ತಾರೆ. ಆದರೆ, ಇದರಿಂದ ಪರಿಹಾರ ಮಾತ್ರ ಶೂನ್ಯವಾಗಿರುತ್ತದೆ. ಇನ್ನು ಕೆಲವರು ಕೂದಲು ಬೆಳ್ಳಗಾಗುತ್ತಿದೆ ಎಂದ ಕೂಡಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್ ಕಲರ್ ತಂದು ಹಚ್ಚಿ ಬಿಡುತ್ತಾರೆ. ಇದರಿಂದ ಕೂದಲು ತಕ್ಷಣಕ್ಕೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಇದು ತಾತ್ಕಾಲಿಕ ಪರಿಹಾರ. ಮಾತ್ರವಲ್ಲ ರಾಸಾಯನಿಕಗಳಿಂದ ತುಂಬಿ ಹೋಗಿರುವ ಈ ಬಣ್ಣವನ್ನು ಹಚ್ಚುವುದರಿಂದ ಕೂದಲು ನಿರ್ಜೀವವಾಗಿ ಬಿಡುತ್ತವೆ. ಕೂದಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಈ ಹಣ್ಣಿನ ಎಲೆ ಪರಿಹಾರವಾಗಿ ಕೆಲಸ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಪೇರಳೆ ಎಲೆಗಳು ಕೂದಲಿಗೆ ಉತ್ತಮ ಮನೆ ಮದ್ದು : 
ಪೇರಳೆ ಎಲೆಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಕೂದಲಿಗೆ ಪೇರಳೆ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು. ಇದು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಕೂದಲು ಉದುರುವುದನ್ನು ಕೂಡಾ ತಡೆಯುತ್ತದೆ. ಮಾತ್ರವಲ್ಲ ಕೂದಲನ್ನು ರೇಷ್ಮೆಯಂತೆ ಕಂಗೊಳಿಸುವಂತೆ ಮಾಡುತ್ತದೆ. 


ಇದನ್ನೂ ಓದಿ : ತ್ವಚೆಯ ಅಂದಕ್ಕೆ ಮನೆಮದ್ದು - ಇಲ್ಲಿದೆ ಸಿಂಪಲ್‌ ಟಿಪ್ಸ್‌!!


ಕೂದಲಿಗೆ ಪೇರಳೆ ಎಲೆಗಳನ್ನು ಬಳಸುವುದು ಹೇಗೆ ? : 
1.  ಎಲೆಗಳಿಂದ ಹೇರ್ ಪ್ಯಾಕ್ ಮಾಡಿ : 
-15 ರಿಂದ 20 ಪೇರಳೆ ಎಲೆಗಳನ್ನು ತೊಳೆದು ಒಣಗಿಸಿ. 
-ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. 
-ಈಗ ಈ ಪೇಸ್ಟ್ ಅನ್ನು ಬೌಲ್ ಗೆ ಹಾಕಿ.
-ಇದಾದ ನಂತರ  ತಯಾರಿಸಿದ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿ.  
-ಕೆಲವು ನಿಮಿಷಗಳ ಕಾಲ ಬೆರಳುಗಳಿಂದ ಮಸಾಜ್ ಮಾಡಿ. 
-ಈಗ ಹೇರ್ ಬ್ಯಾಂಡ್ ಸಹಾಯದಿಂದ ಕೂದಲನ್ನು ಕಟ್ಟಿಕೊಳ್ಳಿ ಮತ್ತು 30-40 ನಿಮಿಷಗಳ ಕಾಲ ಹಾಗೆ ಬಿಡಿ. 
- ಕೂದಲಿಗೆ ಹಚ್ಚಿದ ಪೇಸ್ಟ್ ಒಣಗಿದ ನಂತರ ನೀರಿನಿಂದ ತೊಳೆಯಿರಿ. 
- ಕೂದಲು ತೊಳೆಯಲು ಸೌಮ್ಯವಾದ ಶಾಂಪೂ ಬಳಸಿ. 
-ಇದನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಅವುಗಳ ಬೆಳವಣಿಗೆ ವೇಗವಾಗುತ್ತದೆ. 


2. ಎಣ್ಣೆಯೊಂದಿಗೆ ಪೇರಳೆ ಎಲೆಗಳನ್ನು ಬಳಸಿ : 
-ಕೆಲವು ಪೇರಳೆ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ. 
- ನಂತರ ಒಂದು ಚಿಕ್ಕ ಈರುಳ್ಳಿ ಹಾಕಿ ಪ್ಯೂರಿ ಮಾಡಿ. 
-ಈಗ ಅದನ್ನು ಬಟ್ಟೆಯಲ್ಲಿ ಹಾಕಿ ರಸವನ್ನು ಹಿಂಡಿ. 
-ಈಗ ಈರುಳ್ಳಿ ರಸದಲ್ಲಿ ಪೇರಳೆ  ಎಲೆಗಳ ಪೇಸ್ಟ್ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ. 
-ಇದನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು ಬೆರಳುಗಳಿಂದ ಚೆನ್ನಾಗಿ ಮಸಾಜ್ ಮಾಡಿ. 
- ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ.


ಇದನ್ನೂ ಓದಿ : ವಾರದಲ್ಲಿ ಬಿಳಿಕೂದಲನ್ನು ಕಪ್ಪಾಗಿಸಲು ಮೆಂತೆ ಕಾಳುಗಳ ಜೊತೆ ಈ ಪದಾರ್ಥ ಬೆರೆಸಿದ ಹೇಯರ್ ಡೈ ಅನ್ವಯಿಸಿ ನೋಡಿ!


3. ಪೇರಳೆ  ಎಲೆಗಳ ನೀರನ್ನು ಈ ರೀತಿ ಬಳಸಿ : 
-ಕೆಲವು ಪೇರಳೆ  ಎಲೆಗಳನ್ನು ತೊಳೆಯಿರಿ.
-ಈಗ ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ. 
-15 ರಿಂದ 20 ನಿಮಿಷಗಳ ಕಾಲ ಕುದಿಸಿದ ನಂತರ, ಅದನ್ನು ತಣ್ಣಗಾಗಿಸಿ. 
-ಈ ನೀರು ತಣ್ಣಗಾದ ನಂತರ, ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. 
- ನಂತರ, ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
-ಇದು ಒಣಗಿದ ನಂತರ, ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬುಡಕ್ಕೆ ಹಚ್ಚಿ.  
- 10 ನಿಮಿಷಗಳ ಕಾಲ ಮಸಾಜ್ ಮಾಡಿ.
ಮುಂದಿನ ಕೆಲವು ಗಂಟೆಗಳ ಕಾಲ ಅದನ್ನು ಕೂದಲಿನ ಮೇಲೆ ಬಿಡಿ. 
ಇದರ ನಂತರ ಸರಳ ನೀರಿನಿಂದ ಕೂದಲನ್ನು ತೊಳೆಯಿರಿ.


ಇದನ್ನೂ ಓದಿ : ಸತತ 15 ದಿನಗಳವರೆಗೆ ಈ ಆಯುರ್ವೇದ ಪದಾರ್ಥಗಳನ್ನು ಸೇವಿಸಿ, ದೇಹದಿಂದ ಕೊಲೆಸ್ಟ್ರಾಲ್ ಮಂಗಮಾಯವಾಗುತ್ತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ